Drought Relief : ಬರ ಪರಿಹಾರ ಹಣ ಬಿಡುಗಡೆ / ರೈತರು ಈ ಕೆಲಸ ಮಾಡದಿದ್ದರೆ ಹಣ ಬರಲ್ಲ / ಎಕರೆಗೆ ಎಷ್ಟು.? ಯಾವ ಬೆಳೆಗೆ ಎಷ್ಟು.?

Drought Relief : ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ 161 ತಾಲೂಕುಗಳು ಬರಪೀಡಿತ ತಾಲೂಕುಗಳು ಎಂದು ರಾಜ್ಯ ಸರ್ಕಾರದಿಂದ ಅಧೀಕೃತವಾಗಿ ಆದೇಶವನ್ನ ಹೊರಡಿಸಲಾಗಿದೆ. ಆದರೆ ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಿದ ಸರ್ಕಾರ, ಯಾವ ಬೆಳೆ ಹಾನಿಗೆ ಎಷ್ಟು ಪರಿಹಾರ ನೀಡುತ್ತೆ ಅನ್ನುವ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

Whatsapp Group Join
Telegram channel Join

ರಾಜ್ಯದಾದ್ಯಂತ ಬಿತ್ತನೆ ಮಾಡಿರುವ ರೈತರು ತಮ್ಮ ಜಮೀನುಗಳಲ್ಲಿ ಉತ್ತಮ ಬೆಳೆಗಾಗಿ ಕಾಯುತ್ತಿರುವ ಬೆನ್ನಲ್ಲೇ ಸರಿಯಾದ ಸಮಯಕ್ಕೆ ಮಳೆಯಿಲ್ಲದೇ ಬೆಳೆಗಳು ನಾಶವಾಗಿ ಹೋಗಿವೆ. ಇದನ್ನು ಗಮನಿಸಿದ ರಾಜ್ಯ ಸರ್ಕಾರ, ರಾಜ್ಯದ 161 ತಾಲೂಕುಗಳಲ್ಲಿ ಬರುವ ಎಲ್ಲಾ ಜಮೀನುಗಳಿಗೆ ಬರ ಪರಿಹಾರ ಘೋಷಣೆ ಮಾಡಲಾಗಿದ್ದು, ಯಾವ ಬೆಳೆ ಜಮೀನಿನಲ್ಲಿ ನಿಮಗೆ ನಷ್ಟವುಂಟಾಗಿದೆಯೋ ಅದಕ್ಕೆ ತಕ್ಕಂತೆ ರೈತರ ಖಾತೆಗಳಿಗೆ ಪರಿಹಾರದ ಹಣ ಹಾಕಲಾಗುತ್ತದೆ. ಹಾಗಾದ್ರೆ ರೈತರು ಬರಗಾಲ ಪೀಡಿತ ತಾಲೂಕುಗಳ ಜಾಮೀನು ಹೊಂದಿರುವ ರೈತರು ಈ ಒಂದು ಕೆಲಸ ಮಾಡುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ನಿಮ್ಮ ನಿಮ್ಮ ಖಾತೆಗಳಿಗೆ ಹಣ ಜಮಾ ಆಗಲ್ಲ.

ಇದನ್ನೂ ಕೂಡ ಓದಿ : Gruhalakshmi Updates : ಗೃಹಲಕ್ಷ್ಮಿ ಹಣ ಜಮಾ ಆಗಿಲ್ವಾ.? ಚಿಂತಿಸಬೇಡಿ ಹೀಗೆ ಮಾಡಿದರೆ ಒಟ್ಟಿಗೆ ₹4,000/- ಬರುತ್ತೆ

Whatsapp Group Join
Telegram channel Join

ಬರ ಘೋಷಣೆಯಾಗಿರುವ ತಾಲೂಕುಗಳಲ್ಲಿ ಬ್ಯಾಂಕ್ ಗಳು, ಸಂಘ-ಸಂಸ್ಥೆಗಳು, ಲೇವಾದೇವಿದಾರರು ಸದ್ಯಕ್ಕೆ ರೈತರಿಂದ ಸಾಲ ವಸೂಲಿ ಮಾಡಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಬರ ಘೋಷಣೆಯಾಗಿರುವುದರಿಂದ ಬೆಳೆ ಪರಿಹಾರ ನೀಡಲಾಗುವುದು. ಮಳೆಯಾಶ್ರಿತ ಬೆಳೆಗೆ 2 ಹೆಕ್ಟೇರ್ ಗೆ ಸೀಮಿತವಾಗಿ ಪ್ರತೀ ಹೆಕ್ಟೇರ್ ಗೆ 8,500/- ರೂಪಾಯಿ ಪರಿಹಾರ ನೀಡಲಾಗುತ್ತದೆ. ನೀರಾವರಿ ಬೆಳೆಗೆ ಪ್ರತೀ ಹೆಕ್ಟೇರ್ ಗೆ 17,000/- ರೂಪಾಯಿ. ಬಹುವಾರ್ಷಿಕ ಬೆಳೆಗೆ ಪ್ರತೀ ಹೆಕ್ಟೇರ್ ಗೆ 22,000/- ರೂಪಾಯಿ. ರೇಷ್ಮೆ ಬೆಳೆಗೆ ಪ್ರತೀ ಹೆಕ್ಟೇರ್ ಗೆ 6,000/- ರೂಪಾಯಿ ಪರಿಹಾರ ಮೊತ್ತ ನಿಗದಿಪಡಿಸಲಾಗಿದೆ.

ಇನ್ನು ನರೇಗಾ ಯೋಜನೆಯಲ್ಲಿ ಗ್ರಾಮೀಣ ಭಾಗದ ರೈತರಿಗೆ ನೂರು ದಿನಗಳ ಬದಲಾಗಿ 150 ದಿನಗಳ ಉದ್ಯೋಗ ಅವಕಾಶ ನೀಡಲಾಗುವುದು. ಇದರಿಂದ ಬರದ ಸಮಯದಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ಕೂಡ ಲಭ್ಯವಾಗಲಿದೆ. ರಾಜ್ಯದ 161 ತಾಲೂಕುಗಳಲ್ಲಿ ತೀವ್ರ ಬರ ಕಂಡುಬಂದಿದ್ದು, 34 ತಾಲೂಕುಗಳಲ್ಲಿ ಸಾಧಾರಣ ಬರ ಬಂದಿದೆ. ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯ ಬಗ್ಗೆ ಕೇಂದ್ರಕ್ಕೆ ವರದಿ ಕೊಡುತ್ತೇವೆ. ಮಳೆ ಕೊರತೆಯಿಂದ ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದು, ಕಳೆದ 10 ವರ್ಷಗಳಲ್ಲಿಯೇ ಕಂಡು ಕೇಳರಿಯದ ಬರ ಉತ್ತರ ದಕ್ಷಿಣ ಕ್ಷಾಮ ಉಂಟಾಗಿದೆ ಎಂದರು. ಈಗ ಎಲ್ಲಾ ಜಿಲ್ಲೆಗಳಿಂದ ಬೆಳೆ ಸಮೀಕ್ಷೆ ವರದಿ ಬಂದಿದೆ.

ಇದನ್ನೂ ಕೂಡ ಓದಿ : HSRP Number Plate : ಸ್ವಂತ ವಾಹನ ಹೊಂದಿರುವವರು ತಪ್ಪದೇ ನೋಡಿ / ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್ ಜಾರಿಗೆ

161 ತಾಲೂಕುಗಳಲ್ಲಿ ತೀವ್ರವಾದ ಬರ ಪರಿಸ್ಥಿತಿಯಿದೆ. 34 ತಾಲೂಕುಗಳಲ್ಲಿ ಸಾಧಾರಣ ಬರದ ಪರಿಸ್ಥಿತಿ. ಒಟ್ಟು 195 ತಾಲೂಕುಗಳಲ್ಲಿ ಬರದ ಪರಿಸ್ಥಿತಿಯಿದೆ. ಉಳಿದ 40 ತಾಲೂಕುಗಳಲ್ಲಿ ಮಳೆ ಕೊರತೆಯಿದ್ದರೂ ಕೂಡ ತೇವಾಂಶ ಕೊರತೆ ಕಂಡುಬಂದಿಲ್ಲ. ಇಂತಹ ರೈತರ ಖಾತೆಗಳಿಗೆ ಸರ್ಕಾರದಿಂದ ಹಣ ಬರಲ್ಲ ಎಂತ ನೋಡುವುದಾದರೆ – ಬರಗಾಲ ಘೋಷಣೆ ಮಾಡಿರುವ ಸರ್ಕಾರ ರೈತರ ಖಾತೆಗಳಿಗೆ ಹಣ ಹಾಕುತ್ತಿದ್ದು, ಯಾವ ರೈತರ ಆಧಾರ್ ಸಂಖ್ಯೆಯು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡದಿದ್ದರೆ ಅವರಿಗೆ ಹಣ ಬರಲ್ಲ. ಹಾಗು ಜಮೀನಿನ ಪಹಣಿ ಹೊಂದಿರುವ ರೈತರು ಫಾರ್ಮರ್ ಐಡಿ ಹೊಂದಿರುವುದು ಕಡ್ಡಾಯವಾಗಿದೆ. ಅಂದರೆ ರೈತನ ಗುರುತಿನ ಸಂಖ್ಯೆಯನ್ನು FID ಎಂದು ಸಹ ಕರೆಯಲಾಗುತ್ತದೆ. ಇದನ್ನು ರೈತರು ಕಡ್ಡಾಯವಾಗಿ ನಿಮ್ಮ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಡಿಸತಕ್ಕದ್ದು. ಇಲ್ಲವಾದರೆ ನಿಮಗೆ ಸರ್ಕಾರದಿಂದ ಯಾವುದೇ ಹಣ ಸಿಗುವುದಿಲ್ಲ.

ಇದನ್ನೂ ಕೂಡ ಓದಿ : PM Scheme for Farmer : ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನ ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಘೋಷಣೆ.?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply