Indira Canteen: ಇಂದಿರಾ ಕ್ಯಾಂಟೀನ್ ನಲ್ಲಿ ದೊಡ್ಡ ಬದಲಾವಣೆ! / ಮರುಜೀವ ಪಡೆದ ಇಂದಿರಾ ಕ್ಯಾಂಟೀನ್

Indira Canteen: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಡಜನರಿಗೆ ನಗರ ಹಾಗು ಪಟ್ಟಣಗಳಲ್ಲಿ ಅತೀ ಕಡಿಮೆ ಬೆಳೆಗೆ ಹೊಟ್ಟೆ ತುಂಬುವಷ್ಟು ಊಟ ನೀಡುವ ಹಸಿವು ಮುಕ್ತ ಕರ್ನಾಟಕಕ್ಕಾಗಿ ಇಂದಿರಾ ಕ್ಯಾಂಟೀನ್ ಜಾರಿಗೆ ತಂದು ಕರ್ನಾಟಕದಾದ್ಯಂತ ನಿರ್ಮಿಸಲಾಗಿತ್ತು. ಈಗ ಇಂದಿರಾ ಕ್ಯಾಂಟೀನ್ ನಲ್ಲಿ ದೊಡ್ಡ ಮಾಡಲಾಗಿದೆ. ಕ್ಯಾಂಟೀನ್ ಹೋಗುವ ಮುನ್ನ ಈ ವಿಷಯ ತಿಳಿದುಕೊಳ್ಳುವುದು ಉತ್ತಮ.

Whatsapp Group Join
Telegram channel Join

ಏಕೆಂದರೆ, ಇಂದಿರಾ ಕ್ಯಾಂಟೀನ್ ಈಗ ಮೊದಲಿನಂತಿಲ್ಲ. ಅಲ್ಲಿ ಎಲ್ಲಾ ರೀತಿಯ ಬದಲಾವಣೆ ಮಾಡಲಾಗಿದೆ. ಹೊಸ ಸರ್ಕಾರದಿಂದ ಹೊಸ ಬದಲಾವಣೆ ಮಾಡಲಾಗಿದೆ. ಕಡಿಮೆ ಬೆಲೆಗೆ ಹೊಟ್ಟೆ ತುಂಬುವಷ್ಟು ಊಟ ನೀಡುವುದಕ್ಕೆ ಹೆಸರಾಗಿರುವ ಇಂದಿರಾ ಕ್ಯಾಂಟೀನ್, ಈಗ ಮತ್ತೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು ಸಾಕಷ್ಟು ಇಂದಿರಾ ಕ್ಯಾಂಟೀನ್ ಗಳು ಬಜೆಟ್ ಇಲ್ಲದೇ ಬಂದ್ ಆಗಿದ್ದವು. ಈಗ ಮತ್ತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಕ್ಯಾಂಟೀನ್ ಗಳಿಗೆ ಜೀವ ತುಂಬಿದಂತಾಗಿದೆ.

ಇದನ್ನೂ ಕೂಡ ಓದಿ : Congress Guarantee : ನಿಮ್ಮ ಬಳಿ 2 ಕಾರ್ಡ್ ಗಳು ಇರಲೇಬೇಕು / ಗೃಹಲಕ್ಷ್ಮಿ ಯೋಜನೆ 2023

Whatsapp Group Join
Telegram channel Join

ಇಂದಿರಾ ಕ್ಯಾಂಟೀನ್ ನಲ್ಲಿ ಬದಲಾಗಿರುವ ಹೊಸ ಬದಲಾವಣೆ ಏನೆಂದು ತಿಳಿದುಕೊಳ್ಳೋಣ – ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಹಿತಿ ನೀಡಿದ್ದರು. ನಗರ, ಪಟ್ಟಣಗಳಲ್ಲಿರುವ ಹಾಗು ಕಾರ್ಯ ನಿಮಿತ್ತ ನಗರಗಳಿಗೆ ಬರುವ ಬಡವರ ಹಸಿವು ತಣಿಸುವ ಸದುದ್ದೇಶದಿಂದಾಗಿ ನಮ್ಮ ಸರ್ಕಾರ ಪ್ರಾರಂಭಿಸಿದ್ದ ಇಂದಿರಾ ಕ್ಯಾಂಟೀನ್ ಗಳನ್ನೂ ಬಿಜೆಪಿ ಸರ್ಕಾರ ನಿರ್ಲಕ್ಷಿಸಿದ ಕಾರಣದಿಂದಾಗಿ ಕೆಲವು ಕಡೆ ಮುಚ್ಚಿವೆ. ಹಲವು ಕಡೆ ಮುಚ್ಚುವ ಸ್ಥಿತಿಯಲ್ಲಿವೆ ಎಂದು ಕಿಡಿಕಾರಿದ್ದಾರೆ.

ಗರೀಬಿ ಹಟಾವೋ ಘೋಷಣೆಯ ಮೂಲಕ ಬಡತನ ನಿರ್ಮೂಲನೆ ಕಾರ್ಯವನ್ನು ಕಾಳಜಿಯಿಂದ ಮಾಡಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರಿನ ಇಂದಿರಾ ಕ್ಯಾಂಟೀನ್ ಗಳನ್ನೂ ಮುಚ್ಚಲು ನಾವು ಅವಕಾಶ ನೀಡುವುದಿಲ್ಲ. ಅಗತ್ಯ ಸಂಪನ್ಮೂಲ ಒದಗಿಸಿ ಅವುಗಗಳನ್ನ ಪುನಶ್ಚೇತನ ಗೊಳಿಸುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಅತೀ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ ಗಳು ಸ್ವಸ್ಥ ಮತ್ತು ರುಚ್ಘಿಕರವಾದ ಊಟ ತಿಂಡಿಗಳೊಂದಿಗೆ ಜನರ ಸೇವೆ ಶುರುಮಾಡಲಿವೆ. ಹಸಿದವರ ಪಾಲಿಗೆ ಅನ್ನವೇ ದೇವರು ಎನ್ನುವುದಾಗಿ ಹೇಳಿದ್ದಾರೆ.

ಈಗಾಗಲೇ ಇಂದಿರಾ ಕ್ಯಾಂಟೀನ್ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕ್ಯಾಂಟೀನ್ ಗೆ ಅಡುಗೆ ಕೋಣೆ ವಸ್ತುಗಳನ್ನ ಬದಲಾಯಿಸಬೇಕಿದೆ. ಉಪಹಾರ ದರ 5 ರಿಂದ 10 ರೂಪಾಯಿಗೆ ಏರಿಕೆ ಮಾಡಲಾಗುತ್ತದೆ. ರಾತ್ರಿ ಊಟಕ್ಕೆ ಬೇಡಿಕೆ ಕಡಿಮೆ ಹಿನ್ನಲೆ ಅದು ಹಾಗೆಯೇ ಮುಂದುವರೆಯುತ್ತದೆ. ಹಣ ಪಾವತಿಯಾಗಿಲ್ಲ ಎನ್ನುವ ದೂರು ಕೇಳಿಬಂದಿದೆ. ಒಂದು ತಿಂಗಳಲ್ಲಿ ಟೆಂಡರ್ ಗುತ್ತಿಗೆದಾರರಿಗೆ ಹಳೇ ಬಾಕಿ ಚುಕ್ತಾ ಆಗಲಿದೆ ಎಂದರು.

ಇದನ್ನೂ ಕೂಡ ಓದಿ : Bank New Rules : ಬ್ಯಾಂಕ್ ಅಕೌಂಟ್ ಇದ್ದವರ ಗಮನಕ್ಕೆ / ಎಲ್ಲಾ ಬ್ಯಾಂಕ್ ಗ್ರಾಹಕರು ತಪ್ಪದೆ ನೋಡಿ

2017ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. ಕಡಿಮೆ ದರದಲ್ಲಿ ಆಹಾರ ನೀಡುವ ಇಂದಿರಾ ಕ್ಯಾಂಟೀನ್ ಭಾರೀ ಜನಪ್ರಿಯವಾಗಿತ್ತು. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 175 ಇಂದಿರಾ ಕ್ಯಾಂಟೀನ್ ಗಳನ್ನ ಸ್ಥಾಪಿಸಲಾಗಿತ್ತು. ಇದಲ್ಲದೇ ಹಲವು ಜಿಲ್ಲಾ ಕೇಂದ್ರಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಇದು ಸಿದ್ದರಾಮಯ್ಯ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಈಗ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳಲ್ಲಿ ಊಟ ತಿಂಡಿಯನ್ನ ಬಡ ಜನರಿಗೆ ಒದಗಿಸುವಂತಹ ಕೆಲಸವನ್ನ ಪುನರಾರಂಭಿಸಲಾಗುತ್ತದೆ. ಈ ಮೂಲಕ ಇಂದಿರಾ ಕ್ಯಾಂಟೀನ್ ಮೂಲಕ ಮತ್ತೆ ಹಸಿದವರ ಹೊಟ್ಟೆ ತುಂಬಿಸುವಂತಹ ಪ್ರಕ್ರಿಯೆ ಶುರುವಾಗಲಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply