ನಮ್ಮ ಪಕ್ಷ ಅಧಿಕ್ಕಾರಕ್ಕೆ ಬಂದರೆ ರೈತರ 2 ಲಕ್ಷ ಸಾಲಮನ್ನಾ, ಮಹಿಳೆಯರಿಗೆ 2,000/-, ಫ್ರೀ ಗ್ಯಾಸ್ – ಎಚ್.ಡಿ ಕುಮಾರಸ್ವಾಮಿ

Loan Waiver For Farmers : ನಮಸ್ಕಾರ ಸ್ನೇಹಿತರೇ, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಚ್. ಡಿ ಕುಮಾರಸ್ವಾಮಿ ಅವರು ಈ ಹಿಂದೆ ಈಗಾಗಲೇ ರಾಜ್ಯದ ಎಲ್ಲಾ ರೈತರಿಗೆ 2 ಲಕ್ಷ ರೂಪಾಯಿಗಳ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ ಗಳ ಸಾಲವನ್ನ ಮನ್ನಾ ಮಾಡಿದ್ದಾರೆ. ಹೀಗೆ ಮಾಡಿರುವ ಕೆಲಸಕ್ಕಾಗಿ ಈಗಾಗಲೇ ರೈತರಿಂದ ಎಚ್. ಡಿ ಕುಮಾರಸ್ವಾಮಿ ಅವರಿಗೆ ಪ್ರಶಂಸೆಯನ್ನ ನೀಡಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Free Solar Stove : ಪ್ರತಿಯೊಬ್ಬರಿಗೂ ಸೋಲಾರ್ ಒಲೆ ಉಚಿತ! ಬೆಲೆ ಏರಿಕೆ ಬೆನ್ನಲ್ಲೇ ದೊಡ್ಡ ನಿರ್ಧಾರ!

ಈಗ ಮತ್ತೆ ಕರ್ನಾಟಕ ರಾಜ್ಯದಲ್ಲಿ ಸ್ವತಂತ್ರ ಪಕ್ಷವಾಗಲಿ ಅಥವಾ ಸಮ್ಮಿಶ್ರ ಸರ್ಕಾರವಾಗಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಅಂದರೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ, ಅಡುಗೆ ಮಾಡುವ ಮಹಿಳೆಯರಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ, ನಿರುದ್ಯೋಗಿ ಯುವಕ-ಯುವತಿಯರಿಗೆ ಭರ್ಜರಿ ಘೋಷಣೆ ಮಾಡಿದ್ದಾರೆ. ಎಚ್. ಡಿ ಕುಮಾರಸ್ವಾಮಿ ಅವರು ಚುನಾವಣೆ ಪ್ರಣಾಳಿಕೆಯಲ್ಲಿ ಹೊರಡಿಸಿರುವಂತಹ, ರಾಜ್ಯದ ಜನತೆಗೆ ನೀಡುತ್ತಿರುವ ಭರ್ಜರಿ ಕೊಡುಗೆಗಳೇನು ಅನ್ನುವಂತಹ ಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

Whatsapp Group Join
Telegram channel Join

ಪ್ರತಿ ವರ್ಷ 5 ಉಚಿತ ಸಿಲಿಂಡರ್, ಶ್ರೀ ಶಕ್ತಿ ಸಂಘಗಳ ಸಾಲಮನ್ನಾ, ಗರ್ಭಿಣಿಯರಿಗೆ 6,000/- ರೂಪಾಯಿ ಭತ್ಯೆ ನೀಡುವುದಾಗಿ ಜೆಡಿಎಸ್ ಭರವಸೆಯನ್ನ ನೀಡಿದೆ. ಪ್ರಣಾಳಿಕೆಯ ರೂಪದಲ್ಲಿ 12 ಅಂಶಗಳ ಭರವಸೆಯನ್ನ ಕರುನಾಡ ಜನತೆಗೆ ಜೆಡಿಎಸ್ ಪರಿಹಾರ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. ಜೆಡಿಎಸ್ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ ಅವರ ಪದ್ಮನಾಭ ನಗರದ ನಿವಾಸದಲ್ಲಿ ಪಕ್ಷದ ಮಿನಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಈ ಎಲ್ಲಾ ಭರವಸೆಗಳನ್ನ ಈಡೇರಿಸುವುದಾಗಿ ಘೋಷಣೆ ಕೂಡ ಮಾಡಿದ್ದಾರೆ.

ಇದನ್ನೂ ಕೂಡ ಓದಿ : Breaking News : ಮೇ 2023 ರಿಂದ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ₹5,000/-ಫ್ರೀ ಜಮಾ! ಗುಡ್ ನ್ಯೂಸ್!

ಪ್ರಮುಖವಾಗಿ ರೈತ ಯುವಕರನ್ನ ಮದುವೆಯಾಗುವ ಯುವತಿಯರಿಗೆ 2,00,000/- ರೂಪಾಯಿ ನೀಡುವುದಾಗಿ, ಹೃದಯ, ಶ್ವಾಸಕೋಶ, ಯಕೃತ್ ಕಸಿಗೆ 24 ಗಂಟೆಯಲ್ಲಿ 25,000,00/- ಪರಿಹಾರ ನೀಡಲಾಗುತ್ತದೆ. ಪ್ರೌಢ ಶಾಲಾ ಮಕ್ಕಳಿಗೆ ಸೈಕಲ್ ನೀಡಲಾಗುತ್ತದೆ. ವಿಧವಾ ವೇತನವನ್ನ 2,500/- ಕ್ಕೆ ಹೆಚ್ಚಳ ಮಾಡಲಾಗುತ್ತದೆ. ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ, ಗರ್ಭಿಣಿಯಾರಿಗೆ 6,000/- ರೂಪಾಯಿ ಭತ್ಯೆ ಸೇರಿದಂತೆ ಹಲವಾರು ಜನಪ್ರಿಯ ಯೋಜನೆಗಳನ್ನ ನೀಡುವುದಾಗಿ ಘೋಷಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply

1 Comment