HSRP Number Plate : ಸ್ವಂತ ವಾಹನ ಹೊಂದಿರುವವರು ತಪ್ಪದೇ ನೋಡಿ / ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್ ಜಾರಿಗೆ

HSRP Number Plate : ದೇಶದಾದ್ಯಂತ ಸ್ವಂತ ಹೊಂದಿರುವ ಎಲ್ಲಾ ವಾಹನ ಸವಾರರಿಗೆ ಹೊಸ ರೂಲ್ಸ್ ಜಾರಿಗೆ ಮಾಡಿ ಕೇಂದ್ರ ರಸ್ತೆ ಸಾರಿಗೆ ಇಲಾಖೆಯು ಆದೇಶ ಹೊರಡಿಸಿದೆ. ಈ ಕೆಲಸ ಕಡ್ಡಾಯವಾಗಿ ಮಾಡದಿದ್ದರೆ ೨೦೦೦/- ರೂಪಾಯಿ ದಂಡ ಕಟ್ಟಿಟ್ಟ ಬುತ್ತಿ. ಕೇಂದ್ರ ಸಾರಿಗೆ ಮತ್ತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಎಲ್ಲಾ ವಾಹನ ಸವಾರರಿಗೆ ಹೊಸ ರೂಲ್ಸ್ ಜಾರಿ ಮಾಡಿ, ಕಡ್ಡಾಯವಾಗಿ ಎಲ್ಲಾ ಸ್ವಂತ ವಾಹನ ಮಾಲೀಕರು ಅನುಸರಿಸಲೇಬೇಕಾದ ವಿಷಯವಾಗಿದೆ. ಈ ಹೊಸ ನಿಯಮವು ಸ್ವಂತ ವಾಹನ ಹೊಂದಿರುವ ದ್ವಿಚಕ್ರ ವಾಹನ ಅಂದರೆ ಬೈಕ್ ಹೊಂದಿರುವವರಿಗೆ ಹಾಗು ನಾಲ್ಕು ಚಕ್ರ ಹಾಗು ಮೂರು ಚಕ್ರ ಸೇರಿದಂತೆ ಭಾರೀ ವಾಹನಗಳಿಗೂ ಸಹ ಅನ್ವಹಿಸುತ್ತದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Spandana Vijay : ಪತ್ನಿ ಸ್ಪಂದನ ನಿಧನದ ಬಳಿಕ ವಿಜಯ ರಾಘವೇಂದ್ರ ಜಾತಕ ನೋಡಿ ಶಾಕಿಂಗ್ ಹೇಳಿಕೆ ಕೊಟ್ಟ ಜ್ಯೋತಿಷ್ಯರು.!

ಹಾಗಿದ್ರೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಹೊಸ ರೂಲ್ಸ್ ಏನು.? ಸ್ವಂತ ವಾಹನ ಹೊಂದಿರುವ ಪ್ರತಿಯೊಬ್ಬರೂ ಯಾವ ಕೆಲಸ ಕಡ್ಡಾಯವಾಗಿ ಮಾಡಲೇಬೇಕು.? ಟ್ರಾಫಿಕ್ ಪೊಲೀಸರಿಗೆ ನಾವು ದಂಡ ಕಟ್ಟಬಾರದು ಎನ್ನುವುದಾದರೆ ಯಾವ ಕೆಲಸ ಕಡ್ಡಾಯವಾಗಿ ಮುಗಿಸಿಕೊಳ್ಳಬೇಕು ಎನ್ನುವ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

Whatsapp Group Join
Telegram channel Join

ಹಳೆಯ ವಾಹನಗಳಿಗೆ HSRP (High – security registration plates) ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಏಪ್ರಿಲ್ ೨೦೧೯ ಕ್ಕಿಂತ ಮೊದಲು ನೋಂದಣಿಯಾದ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ. ನವೆಂಬರ್ ೧೭ ರಂದು HSRP ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ದಿನವಾಗಿದೆ. ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರ್ ವಾಹನ, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟ್ರಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲಾ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ. TRANSPORT DEPARTMENT ಅಥವಾ SIAM ನಲ್ಲಿ ನೋಂದಣಿಗೆ ಅವಕಾಶವಿದೆ.

ಇದನ್ನೂ ಕೂಡ ಓದಿ : Dhruva Sarja : ಸೀಮಂತಕ್ಕೆ ಯಾಕೆ ಬಂದಿಲ್ಲ ಎಂದವರಿಗೆ ಖಡಕ್ ಆಗಿ ಮೇಘನಾ ರಾಜ್ ಹೇಳಿದ್ದೇನು.?

HSRP ಅಳವಡಿಕೆಯ ವಿಧಾನ – TRANSPORT DEPARTMENT ಅಥವಾ SIAM ವೆಬ್ ಸೈಟ್ ಗೆ ಭೇಟಿ ನೀಡಿ. Book HSRP ಕ್ಲಿಕ್ ಮಾಡಿ. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ. ವಾಹನದ ಮೂಲ ವಿವರವನ್ನ ಭರ್ತಿ ಮಾಡಿ. ನಿಮ್ಮ ಅನುಕೂಲಕ್ಕೆ ತಕ್ಕ ಡೀಲರ್ ಸ್ಥಳವನ್ನ ಆಯ್ಕೆ ಮಾಡಬೇಕು. ಶುಲ್ಕವನ್ನು ಆನ್ ಲೈನ್ ನಲ್ಲಿಯೇ ಪಾವತಿಸಬೇಕು. ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುತ್ತದೆ. ನಿಮ್ಮ ಅನುಕೂಲಕ್ಕಾಗಿ HSRP ಅಳವಡಿಕೆಯ ದಿನಾಂಕ, ಸಮಯ, ಸ್ಥಳವನ್ನ ಆಯ್ಕೆ ಮಾಡಬೇಕು. ನಂಬರ್ ಪ್ಲೇಟ್ ಅಳವಡಿಕೆಯ ಸ್ಥಳ :- ವಾಹನ ಮಾಲಿಕರ ಕಚೇರಿಯ ಆವರಣ, ಮನೆಯ ಸಮೀಪದ ಸ್ಥಳವನ್ನು HSRP ಅಳವಡಿಕೆಗಾಗಿ ಆಯ್ಕೆ ಮಾಡಿಕೊಳ್ಳಬಹುದು. ವಾಹನ ಮಾಲೀಕರು HSRP ಅಳವಡಿಕೆಗೆ TRANSPORT DEPARTMENT ಅಥವಾ SIAM ವೆಬ್ ಸೈಟ್ ಮೂಲಕ ಕಾಯ್ದಿರಿಸಿಕೊಳ್ಳಬೇಕು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply