Gruhalakshmi Scheme : ಗೃಹಲಕ್ಷ್ಮಿ ಯೋಜನೆ ಯಿಂದ ಎಷ್ಟು ಜನರಿಗೆ ಇನ್ನು ಹಣ ಸಿಕ್ಕಿಲ್ಲ.? ಕಾರಣವೇನು.?

Gruhalakshmi Scheme : ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತಷ್ಟು ವಿಳಂಬವಾಗುತ್ತಿದೆ. ಇದೀಗ ಹಲವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಬರಬೇಕಿದ್ದ ಹಣ ಕೂಡ ಇನ್ನೂ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ. ಸೆಪ್ಟೆಂಬರ್ ನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಯಾಕೆ ಜಮೆ ಆಗಿಲ್ಲ.? ಮನೆಯ ಯಜಮಾನಿಯರ ದುಡ್ಡು ಯಾವಾಗ ಬರುತ್ತೆ.? ಗೃಹಲಕ್ಷ್ಮಿ(Gruhalakshmi) ಯೋಜನೆಯಡಿ ಎಷ್ಟು ಜನರಿಗೆ ಹಣ ಇನ್ನೂ ಹೋಗಿಲ್ಲ.? ಇದಕ್ಕೆ ಕಾರಣ ಏನು.? ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಏನು ಸ್ಪಷ್ಟನೆ ಬರುತ್ತಿದೆ.?

Whatsapp Group Join
Telegram channel Join

ಇದನ್ನೂ ಕೂಡ ಓದಿ : Farmer Scheme : ರೈತರು ಈ ಕಾರ್ಡ್ ಮಾಡಿಸಿಕೊಂಡರೆ 5 ಲಕ್ಷದವರೆಗೂ ಹಣವನ್ನ ಪಡೆಯಬಹುದು.? ಯಾವ ಕಾರ್ಡ್ ಗೊತ್ತಾ.?

ಗೃಹಲಕ್ಷ್ಮಿ(Gruhalakshmi) ವಿಳಂಬವಾಗುತ್ತಿರುವುದು ಯಾಕೆ.?

Whatsapp Group Join
Telegram channel Join

ಮನೆಯ ಯಜಮಾನಿಯರ ಬ್ಯಾಂಕ್ ಖಾತೆಗೆ ₹2,000/- ರೂಪಾಯಿ ಹಣವನ್ನ ಜಮಾ ಮಾಡುವುದೇ ಗೃಹಲಕ್ಷ್ಮಿ ಯೋಜನೆ. ಆದರೆ ಈ ಗೃಹಲಕ್ಷ್ಮಿ(Gruhalakshmi) ಯೋಜನೆಯಲ್ಲಿ ಇಷ್ಟೊಂದು ವಿಳಂಬ ಯಾಕೆ ಆಗುತ್ತಿದೆ ಅನ್ನುವುದನ್ನ ತಿಳಿಯೋಣ. ವಿಳಂಬವಾಗುತ್ತಿರುವುದು ಯಾಕೆ ಅನ್ನುವುದನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ವಿಚಾರದಲ್ಲಿ ಸ್ಪಷ್ಟನೆಯನ್ನ ನೀಡಿದೆ.

ಇನ್ನೂ 9,44,155 ಅರ್ಜಿದಾರರಿಗೆ ಹಣ ತಲುಪಿಲ್ಲ. ಅದರಲ್ಲಿ 3,082 ಅರ್ಜಿದಾರರು ಮರಣ ಹೊಂದಿದ್ದು ಅವರನ್ನ ಅನರ್ಹಗೊಳಿಸಲಾಗಿದೆ. 1,59,356 ಅರ್ಜಿದಾರರ ಡೆಮೋ ಧೃಡೀಕರಣ ವಿಫಲವಾಗಿದೆ. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಹೆಸರಿನಲ್ಲಿ ಸ್ವಲ್ಪ ವ್ಯತ್ಯಾಸ. ಇದನ್ನು ಮೊದಲಿನಿಂದಲೂ ಸರ್ಕಾರ ಹೇಳಿಕೊಂಡು ಬರುತ್ತಿದೆ. 5,96,268 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಇನ್ನೂ ಆಧಾರ್ ಕಾರ್ಡ್ ಜೋಡಣೆಯಾಗಿಲ್ಲ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ನೀವು ಮಾಡಲೇಬೇಕು. ಬ್ಯಾಂಕ್ ಗಳ ಮೂಲಕ ಫಲಾನುಭವಿಗಳ ಕೆವೈಸಿ ಮಾಡಿಸುವುದಕ್ಕೆ ಇಲಾಖೆ ಕ್ರಮವನ್ನ ತೆಗೆದುಕೊಂಡಿದೆ.

ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮಿ ಎರಡನೇ ಕಂತಿನ ಹಣಕ್ಕೆ ದಿನಾಂಕ ನಿಗದಿ / ಇನ್ನೂ ಹಣ ಬರದೇ ಇದ್ದರೆ ಈ ಕೆಲಸ ಕಡ್ಡಾಯವಾಗಿ ಮಾಡಿಕೊಳ್ಳಿ

1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸದಲ್ಲಿ ವ್ಯತ್ಯಾಸ. 1.8 ಕೋಟಿ ಅರ್ಹ ಫಾಲಾನುಭವಿಗಳಿಗೆ 169 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಸೆಪ್ಟೆಂಬರ್ ನಲ್ಲಿ 1.14 ಲಕ್ಷ ಫಲಾನುಭವಿಗಳಿಗೆ 2,280 ಕೋಟಿ ಬಿಡುಗಡೆ. ಅಕ್ಟೋಬರ್ 4 ರವರೆಗೆ 93 ಲಕ್ಷ ಫಲಾನುಭವಿಗಳ ಖಾತೆಗೆ ₹2,000/- ರೊಪಾಯಿ ಹಣ ವರ್ಗಾವಣೆಯಾಗಿದೆ. 5.5 ಲಕ್ಷ ಫಲಾನುಭವಿಗಳ ಮಾಹಿತಿ ಪರಿಶೀಲಿಸಿ ಡಿಬಿಟಿ ಮೂಲಕ ಹಣ ಪಾವತಿಗೆ ಕ್ರಮ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply