Housing Scheme : ಸ್ವಂತ ಮನೆ ಇಲ್ಲದ ರಾಜ್ಯದ ಎಲ್ಲಾ ಬಡ ಕುಟುಂಬಗಳಿಗೆ ಬಂಪರ್ ಸುದ್ಧಿ.!

Housing Scheme : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯ ಸರ್ಕಾರದ ನೂತನ ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ರಾಜ್ಯದಲ್ಲಿ ವಾಸಿಸಲು ಸ್ವಂತ ಮನೆಯಿಲ್ಲದವರಿಗೆ, ಸ್ವಂತ ಜಾಗವಿಲ್ಲದವರಿಗೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ರಾಜ್ಯದ ಎಲ್ಲಾ ಬಡವರಿಗೆ ಭಾರೀ ದೊಡ್ಡ ಸಿಹಿಸುದ್ಧಿ ನೀಡಿದ್ದಾರೆ. ನೂತನ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮನೆಯಿಲ್ಲದವರಿಗೆ ನೀಡಿರುವ ಗುಡ್ ನ್ಯೂಸ್ ಏನು.? ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನ ನೀಡುವ ಮೂಲಕ, ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಕೇವಲ ಐದು ಗ್ಯಾರಂಟಿಗಳನ್ನು ಮಾತ್ರ ನೀಡುವುದಿಲ್ಲ. ಇನ್ನು ಮುಂದೆ ಬಡವರಿಗೆ, ಸಾರ್ವಜನಿಕರಿಗೆ ಗ್ಯಾರಂಟಿಗಳಿಗಿಂತಲೂ ಹೆಚ್ಚಿನ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ಅವರು ತಿಳಿಸಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Govt Scheme : ಈ ಪ್ಲಾನ್ ಮಾಡಿದ್ರೆ ಅತ್ತೆಗೂ 2,000 ಹಾಗೂ ಸೊಸೆಗೂ 2,000 ರೂ. ಸಿಗುತ್ತೆ! ಏನಿದು ಪ್ಲಾನ್?

ರಾಜ್ಯದಲ್ಲಿ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗು ಕೇಂದ್ರ ಸರ್ಕಾರ ವಾಸಿಸಲು ಸ್ವಂತ ಮನೆಯಿಲ್ಲದವರಿಗೆ ಹಾಗು ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಮೇಲಿಂದ ಮೇಲೆ ಹೊಸ ಹೊಸ ಯೋಜನೆಗಳನ್ನ ಜಾರಿಗೊಳಿಸಲಾಗುತ್ತಿದೆ. ರಾಜ್ಯದ ನೂತನ ವಸತಿ ಸಚಿವರಾದ ಜಮೀರ್ ಅಹ್ಮದ್ ಅವರು ರಾಜ್ಯದಾದ್ಯಂತವಿರುವ ಎಲ್ಲಾ ಗ್ರಾಮೀಣ ಭಾಗ ಹಾಗು ನಗರ ಭಾಗದ ನಿವಾಸಿಗಳಿಗೆ, ಅದರಲ್ಲೂ ಸ್ವಂತ ಮನೆಯಿಲ್ಲದ ಬಡ ಕುಟುಂಬಗಳಿಗೆ ಸಿಹಿಸುದ್ಧಿಯನ್ನ ನೀಡುವ ಮೂಲಕ ತಮ್ಮ ಕಾಂಗ್ರೆಸ್ ಸರ್ಕಾರದ ಛಾಯೆ ಮೂಡಿಸುವ ಹಾಗು ಹಿಂದಿನ ಸರ್ಕಾರಗಳಿಗಿಂತ ಹೆಚ್ಚಿನ ಯೋಜನೆಗಳನ್ನ ಜನರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Pension Scheme : ಎಲ್ಲಾ ಪಿಂಚಣಿದಾರರಿಗೆ ಬಿಗ್ ಶಾಕ್! ಜೂನ್ 20 ರೊಳಗೆ ಈ ಕೆಲಸ ಮಾಡಲೇಬೇಕು!

ಇದೀಗ ವಸತಿ ರಹಿತರಿಗೆ ನೀಡಿರುವ ಮಾಹಿತಿ ಏನೆಂದರೆ, ಬಡವರಿಗೆ ರೂಪಿಸಿದ ವಸತಿ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ವಸತಿ ಸಚಿವ ಜಮೀರ್ ಅಹ್ಮದ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಸತಿ ಇಲಾಖೆ ವ್ಯಾಪ್ತಿಗೆ ಬರುವ ರಾಜೀವ್ ಗಾಂಧಿ ವಸತಿ ನಿಗಮದ ಪ್ರಗತಿ ಪರಿಶೀಲನೆ ನಡೆಸಿದ ಅವರು ಬಡವರಿಗೆ ರೂಪಿಸಿದ ವಸತಿ ಯೋಜನೆಗೆ ನಿಗದಿತ ಕಾಲಮಿತಿ ಹಾಕಿಕೊಂಡು ಅದನ್ನ ಪೂರ್ಣಗೊಳಿಸಿದ ನಂತರ ಮತ್ತೊಂದು ಯೋಜನೆ ಕೈಗೊಳ್ಳುವಂತೆ ತಿಳಿಸಿದ್ದಾರೆ. ನಿಗದಿತ ಅವಧಿಯೊಳಗೆ ಯೋಜನೆ ಪೂರ್ಣಗೊಳ್ಳದಿದ್ದರೆ, ಬಡವರಿಗೆ ವಸತಿ ಕಲ್ಪಿಸುವ ಉದ್ದೇಶ ಈಡೇರುವುದಿಲ್ಲ. ಹೀಗಾಗಿ ಕಾಲಮಿತಿಯೊಳಗೆ ಯೋಜನೆ ಕ್ರಮ ಕೊಳ್ಳಬೇಕು. ವಿಳಂಬವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಕಲ್ಪಿಸುವ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಆರಂಭಿಕ ಹಣ ಪಾವತಿಸಿದ ಅರ್ಜಿದಾರರಿಗೆ, ಫಲಾನುಭವಿಗಳಿಗೆ ಇನ್ನೂ ಮನೆ ಸಿಗದಿರುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..