Health Tips : ವೀರ್ಯ ದಾನ ಯಾರು ಮಾಡಬಹುದು.? – ಆರೋಗ್ಯ ಸಲಹೆ

Health Tips : ಯಾವ ಮಹಿಳೆಯರ ಪತಿಯರಲ್ಲಿ ಸ್ಪರ್ಮ್‌ ಕೌಂಟ್‌ ಸೊನ್ನೆಯಾಗಿರುತ್ತದೆ ಅವರಲ್ಲಿ ತಾಯಿಯಾಗುವ ಚಾನ್ಸಸ್‌ ತುಂಬಾನೆ ಕಡಿಮೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಸ್ಪರ್ಮ್‌ ಬ್ಯಾಂಕ್‌ ಸಹಾಯ ಮಾಡುತ್ತದೆ. ಇಲ್ಲಿ ಒಬ್ಬ ಆರೋಗ್ಯಯುತ ಪುರುಷನ ಸ್ಪರ್ಮ್‌ ತೆಗೆದುಕೊಂಡು ಸ್ಟೋರ್‌ ಮಾಡಿ ಇಡಲಾಗುತ್ತದೆ. ಯಾರಿಗೆ ಇದರ ಅವಶ್ಯಕತೆ ಇದೆ ಅವರಿಗೆ ಫರ್ಟಿಲಿಟಿ ಕ್ಲಿನಿಕ್ಸ್‌‌ನ ಮೂಲಕ ಸ್ಪರ್ಮ್ಸ್‌‌ ಸಿಗುತ್ತದೆ.

ಸ್ಪರ್ಮ್‌ ಬ್ಯಾಂಕ್‌ ಮತ್ತು ಸ್ಪರ್ಮ್‌ ಡೊನೇಶನ್‌ ಕುರಿತಾಗಿ ಜನರಲ್ಲಿ ಹಲವಾರು ರೀತಿಯ ಕುತೂಹಲ ಮೂಡಿದೆ. ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಯಾರು ಸ್ಪರ್ಮ್‌ ದಾನ ಮಾಡಬಹುದು?
ಯಾವುದೇ ಪುರುಷ ಆರೋಗ್ಯವಾಗಿದ್ದು, 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಲ್ಲಿ ಅವರು ತಮ್ಮ ವೀರ್ಯವನ್ನು ದಾನಮಾಡಬಹುದು. ಅದಕ್ಕೆ ವೀರ್ಯ ದಾನ ಮಾಡುವವರಿಗೆ ಹಲವಾರು ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

ವೀರ್ಯ ದಾನ ಮಾಡಬೇಕಾದರೆ ಪುರುಷರಲ್ಲಿ ಇರಬೇಕಾದ ಮುಖ್ಯ ಗುಣಗಳು ಯಾವುದು ಎಂಬುದು ಇಲ್ಲಿದೆ.

ಆರೋಗ್ಯಯುತವಾಗಿರಬೇಕು :-
ವೀರ್ಯ ದಾನ ಮಾಡುವ ವ್ಯಕ್ತಿ ಪೂರ್ಣ ರೀತಿ ಆರೋಗ್ಯವಾಗಿರಬೇಕು. ಆತನಿಗೆ ಹೆಚ್‌ಐವಿ, ಹೆಪಟೈಟೀಸ್‌ ಬಿ , ಸಿ, ಏಡ್ಸ್‌ ಇನ್ನಿತರ ಯಾವುದೇ ರೀತಿಯ ಗುಪ್ತ ರೋಗಗಳಿರಬಾರದು. ಜೊತೆಗೆ ಕ್ಯಾನ್ಸರ್‌, ಮಧುಮೇಹ ಕೂಡಾ ಇರಬಾರದು.

ಮೆಡಿಕಲ್‌ ಟೆಸ್ಟ್‌ :-
ಸ್ಪರ್ಮ್‌ ಬ್ಯಾಂಕ್‌ ಮೂಲಕ ಡೋನರ್‌ನ ಎಚ್‌ಐವಿ, ಹೆಪಟೈಟೀಸ್‌, ಡಯಬಿಟೀಸ್‌ ಮೊದಲಾದ ಟೆಸ್ಟ್‌ ಮಾಡಲಾಗುತ್ತದೆ.

ಟೆಸ್ಟ್‌ ಆದ ಕೂಡಲೆ ಸ್ಪರ್ಮ್‌ ಕೊಡಬಹುದೆ.? :-
ಟೆಸ್ಟ್‌‌ ಆದ ಕೂಡಲೆ ಸ್ಪರ್ಮ್‌ನ್ನು ಆರು ತಿಂಗಳ ಕಾಲ ಅಬ್‌ಸರ್ವೇಶನ್‌ನಲ್ಲಿ ಇಡಲಾಗುತ್ತದೆ. ಎಲ್ಲಾ ಸರಿಯಾಗಿದ್ದರೆ ಆರು ತಿಂಗಳ ನಂತರ ಎರಡನೆ ಬಾರಿ ಟೆಸ್ಟ್‌ ಮಾಡಲಾಗುತ್ತದೆ.

ಎರಡನೆ ಬಾರಿ ಟೆಸ್ಟ್‌ ಯಾಕೆ? :-
ಎಚ್‌ಐವಿ ಮೊದಲಾದ ಗಂಭೀರ ಸಮಸ್ಯೆಗಳ ಲಕ್ಷಣ ಕಾಣಿಸಿಕೊಳ್ಳಲು ಆರು ತಿಂಗಳ ಸಮಯ ಬೇಕಾಗುತ್ತದೆ. ಆದುದರಿಂದ ಆರು ತಿಂಗಳ ನಂತರ ಮತ್ತೆ ಟೆಸ್ಟ್‌ ಮಾಡಲಾಗುವುದು.

ಗೇ ಆಗಿರಬಾರದು :-
ವೀರ್ಯ ದಾನ ಮಾಡುವ ವ್ಯಕ್ತಿ ಗೇ ಆಗಿರಬಾರದು.
ಆತ ಗೇ ಆಗಿರುವ ಕಾರಣದಿಂದ ಗುಪ್ತ ರೋಗಗಳಾಗುವ ಸಮಸ್ಯೆ ಇರುತ್ತದೆ.

ವೀರ್ಯದ ಸ್ಯಾಂಪಲ್‌ :-
ಎಲ್ಲಾ ರೀತಿಯ ಪರೀಕ್ಷೆ ನಡೆಸಿದ ನಂತರ ಆ ವ್ಯಕ್ತಿ ವೀರ್ಯ ದಾನ ಮಾಡಲು ಅರ್ಹನಾಗಿದ್ದಾನೆ ಎಂದು ತಿಳಿದ ನಂತರ ಸ್ಯಾಂಪಲ್ಸ್‌ ಕೊಡಬೇಕಾಗುತ್ತದೆ. ಸೆಕ್ಸ್‌ ನಂತರ ಅಥವಾ ಹಸ್ತಮೈಥುನದ ನಂತರ ಆ ಸ್ಯಾಂಪಲ್‌‌ನ್ನು ಪಡೆಯಲಾಗುತ್ತದೆ. ಇದರಿಂದ ವೀರ್ಯ ಪ್ರಮಾಣ ತಿಳಿಯುತ್ತದೆ. ವೀರ್ಯ ದಾನಮಾಡುವ 5 ದಿನ ಮೊದಲು ವೀರ್ಯದ ಸ್ಯಾಂಪಲ್‌ ನೀಡಿದರೆ ವೀರ್ಯದ ಕ್ವಾಲಿಟಿ ಒಳ್ಳೆದಿರುತ್ತದೆ.

ಈ ರೀತಿ ಮಾಡುವುದು ಯಾಕೆ.?

ಮುಂದೆ ಹುಟ್ಟಲಿರುವ ಮಗುವು ಆರೋಗ್ಯಯುತವಾಗಿ ಹುಟ್ಟಬೇಕೆನ್ನುವ ಕಾರಣದಿಂದಾಗಿ ಈ ಎಲ್ಲಾ ಟೆಸ್ಟ್‌ಗಳನ್ನ ಮಾಡಲಾಗುತ್ತದೆ.

ಪಡೆದುಕೊಳ್ಳುವುದು ಹೇಗೇ? :-
ಸ್ಪರ್ಮ್‌ ಬ್ಯಾಂಕ್‌ನಿಂದ ನೇರವಾಗಿ ವೀರ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಫರ್ಟಿಲಿಟಿ ಕ್ಲಿನಿಕ್ಸ್‌ಗಳ ಮೂಲಕ ಸ್ಪರ್ಮ್‌ ಬ್ಯಾಂಕ್‌ನಿಂದ ವೀರ್ಯಗಳನ್ನು ಪಡೆಯಬಹುದು. ಆದರೆ ಡೋನರ್‌ ಮತ್ತು ಪೇಶೆಂಟ್‌ಗಳ ಬಗ್ಗೆ ಯಾರಿಗೂ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಮಾಹಿತಿ ನೀಡಲಾಗುವುದಿಲ್ಲ. ಇಷ್ಟೇ ಅಲ್ಲ ಇದು ಕಾನೂನಿನ ಮೂಲಕ ಅಪರಾಧ ಎಂದು ನೀವು ಅಂದುಕೊಳ್ಳಬೇಡಿ. ಸ್ಪರ್ಮ್‌ ಡೊನೇಶನ್‌ ಮೂಲಕ ಮಕ್ಕಳನ್ನು ಪಡೆದರೆ ಅದು ಕಾನೂನಿನಿಂದಲೂ ಮಾನ್ಯತೆಯನ್ನು ಪಡೆಯುತ್ತದೆ. 

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply