Annabhagya Yojane : ಇನ್ನೂ ಅನ್ನಭಾಗ್ಯ ಯೋಜನೆಯ ಹಣ ಖಾತೆಗೆ ಜಮಾ ಆಗಿಲ್ವಾ.? ಈ ಕೆಲಸವನ್ನ ತಪ್ಪದೇ ಮಾಡಿ

Annabhagya Yojane : ನಮಸ್ಕಾರ ಸ್ನೇಹಿತರೇ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯ ಬದಲು ನೀಡುತ್ತಿರುವ ಹಣ ಇನ್ನೂ ಕೂಡ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗದಿದ್ದರೆ, ತಪ್ಪದೇ ಇಂದೇ ನಿಮ್ಮ ಹತ್ತಿರದ ನ್ಯಾಯ ಬೆಲೆ ಅಂಗಡಿಯಲ್ಲಿ ಈ-ಕೆವೈಸಿಯನ್ನ ಕಡ್ಡಾಯವಾಗಿ ಮಾಡಿಕೊಳ್ಳಲೇಬೇಕು ಎಂದು ರಾಜ್ಯ ಆಹಾರ ಇಲಾಖೆ ಮಹತ್ವದ ಸೂಚನೆ ನೀಡಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Kisan Pension Scheme : ಪ್ರತೀ ತಿಂಗಳು ರೈತ ಹಾಗು ರೈತನ ಪತ್ನಿಗೆ ₹3,000/- ರೂಪಾಯಿ ಪಿಂಚಣಿ ಸೌಲಭ್ಯ

ಇದುವರೆಗೂ ಈ-ಕೆವೈಸಿಯನ್ನ ಮಾಡಿಸಿಕೊಳ್ಳದೇ ಇರುವಂತಹ ರಾಜ್ಯದ ಯಾವುದೇ ಅರ್ಹ ಪಡಿತರ ಚೀಟಿದಾರರು ಈ-ಕೆವೈಸಿಯನ್ನ ಕಡ್ಡಾಯವಾಗಿ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿ ಮಾಡಿಸಿಕೊಳ್ಳಲೇಬೇಕು. ಅರ್ಹ ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಿಸಿಕೊಳ್ಳಲು, ಬ್ಯಾಂಕಿನಲ್ಲಿ ನಿಮ್ಮ ಆಧಾರ್ ಕಾರ್ಡ್ ನ್ನ ಬ್ಯಾಂಕ್ ಖಾತೆಯೊಂದಿಗೆ ಈ-ಕೆವೈಸಿ ಹಾಗು ಎನ್ ಪಿಪಿಸಿಐ(NPCI) ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು. ಇನ್ನೂ ಕೂಡ ಖಾತೆಯನ್ನ ಹೊಂದಿರದ ಪಡಿತರ ಚೀಟಿದಾರರು ಅಂಚೆ ಇಲಾಖೆಯಲ್ಲಿ ಇಂಡಿಯನ್ ಪೋಸ್ಟಲ್ ಪೇಮೆಂಟ್ ಖಾತೆ ಅಥವಾ ರಾಷ್ಟೀಕೃತ ಬ್ಯಾಂಕ್ ನಲ್ಲಿ ಹೊಸ ಬ್ಯಾಂಕ್ ಖಾತೆಯನ್ನ ಮಾಡಿಸಿಕೊಳ್ಳಲೇಬೇಕು.

Whatsapp Group Join
Telegram channel Join

ಇದನ್ನೂ ಕೂಡ ಓದಿ : Solar Scheme :ರೈತರಿಗೆ 4 ಲಕ್ಷ ಸಹಾಯಧನ.! ಸೋಲಾರ್ ವಿದ್ಯುತ್ ಅವಳಡಿಕೆಗಾಗಿ ರೈತರಿಗೆ ಹೊಸ ಸ್ಕೀಮ್.!

ಎಸ್ ಸಿ(SC) ಹಾಗು ಎಸ್ ಟಿ(ST) ಪಡಿತರ ಚೀಟಿದಾರರು ತಮ್ಮ ಕುಟುಂಬದ ಮಾಹಿತಿಯನ್ನು ನವೀಕರಿಸಿಕೊಳ್ಳಲು ಎ ಜೆ ಎಸ್ ಕೆ(ಅಟಲ್ ಜಿ ಜನಸ್ನೇಹಿ ಕೇಂದ್ರ ಅಥವಾ ನಾಡ ಕಚೇರಿ) ಯಲ್ಲಿ ನೀಡಲಾಗುವ ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ ಹಾಗು ಪಡಿತರ ಚೀಟಿಯನ್ನ ನ್ಯಾಯಬೆಲೆ ಅಂಗಡಿಯಲ್ಲಿ ನೀಡಲು ಆಹಾರ ಇಲಾಖೆ ತಿಳಿಸಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply