Gruhalakshmi Scheme : ಉಚಿತ ₹2,000/- ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಆರಂಭ.! ಹೇಗೆ ಅರ್ಜಿ ಸಲ್ಲಿಸುವುದು

Gruhalakshmi Scheme : ನಮಸ್ಕಾರ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾಗಿರುವ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತೀ ಕುಟುಂಬದ ಮಹಿಳೆಗೆ 2,000/- ರೂಪಾಯಿಯನ್ನ ಒದಗಿಸಿಕೊಡುವ ಗೃಹಲಕ್ಷ್ಮಿ ಯೋಜನೆಯನ್ನ ಅಧೀಕೃತವಾಗಿ ಇದೀಗ ಮುಖ್ಯಮಂತ್ರಿಯವರು ಚಾಲನೆ ಮಾಡಿದ್ದು, ಸುಲಭವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದರ ಮೂಲಕ ಪ್ರತೀ ತಿಂಗಳಿಗೆ 2,000/- ರೂಪಾಯಿ ನೀವು ಪಡೆದುಕೊಳ್ಳಬಹುದಾಗಿದೆ. ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲಾತಿಗಳು ಏನು.? ಎಲ್ಲಿ ಅರ್ಜಿ ಸಲ್ಲಿಸುವುದು.? ವೆಬ್ ಸೈಟ್ ಲಿಂಕ್ ಏನು.? ಅನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : BPL APL AAY ರೇಶನ್ ಕಾರ್ಡ್ ಹೊಂದಿರುವ ಜನತೆಗೆ ಬಂಪರ್.! ಹೊಸ ಕೊಡುಗೆ ಘೋಷಣೆ

ಮಹಿಳೆಯರಿಗೆ 2,000/- ರೂಪಾಯಿ ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆಯು ಇದೀಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಸುದ್ಧಿಗೋಷ್ಠಿ ನಡೆಸಿ ಸಿಎಂ ಸಿದ್ದರಾಮಯ್ಯ ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧೀಕೃತವಾಗಿ ಈ ಯೋಜನೆಯನ್ನ ಘೋಷಣೆ ಮಾಡಿದ್ದಾರೆ. ಇನ್ನು ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಕೊನೆಯ ದಿನವಿರುವುದಿಲ್ಲ. ಆಗಸ್ಟ್ ತಿಂಗಳಲ್ಲಿ ಅರ್ಜಿ ಸಲ್ಲಿಸಿದ ಪ್ರತೀ ಎಲ್ಲಾ ಫಲಾನುಭವಿ ಮಹಿಳೆಯ ಖಾತೆಗೆ ಹಣ ಜಮಾವಣೆಯಾಗಲಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : PM Kisan : 14 ನೇಯ ಕಂತಿನ ಹಣ ಎಲ್ಲಾ ರೈತರ ಖಾತೆಗೆ ಜಮಾ / ಭರ್ಜರಿ ಗುಡ್ ನ್ಯೂಸ್!

ಇನ್ನು ಅರ್ಜಿ ಸಲ್ಲಿಸುವ ವೇಳೆಯಲ್ಲಿ ಮಹಿಳೆಯರು ಏನೆಲ್ಲಾ ದಾಖಲಾತಿಗಳು ಹೊಂದಿರಬೇಕಂದ್ರೆ, ಮೊದಲಿಗೆ ಮಹಿಳೆಯ ಆಧಾರ್ ಕಾರ್ಡ್, ವಾಸಸ್ಥಳ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ, ಎರಡು ಪಾಸ್ ಪೋರ್ಟ್ ಸೈಜ್ ಫೋಟೋ, ವೋಟರ್ ಐಡಿ ಕಾರ್ಡ್ ಸೇರಿದಂತೆ ನಿಮ್ಮ ರೇಷನ್ ಕಾರ್ಡ್ ಹಾಗು ನಿಮ್ಮ ಬ್ಯಾಂಕ್ ಪಾಸ್ ಬುಕ್ ನ ಜೆರಾಕ್ಸ್ ಪ್ರತಿ, ಹಾಗು ಅರ್ಜಿಯನ್ನ ಭರ್ತಿ ಮಾಡುವುದರ ಮೂಲಕ ಈ ಎಲ್ಲಾ ದಾಖಲಾತಿಗಳನ್ನ ಸಲ್ಲಿಸಿ, ನೀವು ಸುಲಭವಾಗಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ನಿಮಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಾರದಿದ್ದಲ್ಲಿ, ನಿಮ್ಮ ವಲಯದ CSC(Comman Service Centre ) ಸೆಂಟರ್, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ನಂತಹ ಆನ್ಲೈನ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ಸುಲಭವಾಗಿ ನೀವು ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭವನ್ನ ಪಡೆದುಕೊಳ್ಳಿ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..