Gruhalakshmi 2nd Payment : ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಸರ್ಕಾರದಿಂದ ಬಿಡುಗಡೆ.?

Gruhalakshmi 2nd Payment : ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿತ್ತು. ಈ ಯೋಜನೆಯಡಿ ರಾಜ್ಯದ ಕುಟುಂಬದ ಯಜಮಾನಿ ಮಹಿಳೆಯರಿಗೆ ₹2,000/- ರೂಪಾಯಿ ಪ್ರತೀ ತಿಂಗಳು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವುದಕ್ಕೆ ಚಾಲನೆ ಕೂಡ ನೀಡಲಾಗಿತ್ತು. ಈ ಬೆನ್ನಲ್ಲೇ ಯಜಮಾನಿ ಮಹಿಳೆಯರ ಖಾತೆಗೆ ಆಗಸ್ಟ್ ಹಾಗು ಸೆಪ್ಟೆಂಬರ್ ತಿಂಗಳ ₹2,000/- ರೂಪಾಯಿ ಹಣವನ್ನ ಖಾತೆಗೆ ಜಮಾ ಮಾಡಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : HSRP Number Plate : ಸ್ವಂತ ವಾಹನ ಹೊಂದಿರುವವರು ತಪ್ಪದೇ ನೋಡಿ / ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್ ಜಾರಿಗೆ

ಹೌದು, ಗೃಹ ಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯದ ಯಜಮಾನಿ ಮಹಿಳೆಯರಿಗೆ ಮಾಸಿಕ ₹2,000/- ರೂಪಾಯಿ ಸಹಾಯಧನವನ್ನ ನೀಡಲಾಗುತ್ತಿದೆ. ಇದೀಗ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಅವಧಿಗಾಗಿ ರಾಜ್ಯ ಸರ್ಕಾರ ₹4,600/- ಕೋಟಿ ಅನುದಾನವನ್ನ ಬಿಡುಗಡೆ ಮಾಡಿ ಆದೇಶಿಸಿದೆ. ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕಾಗಿ 2023-24ನೇ ಸಾಲಿಗೆ ₹17,500/- ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ಅದರ ಮೊದಲ ಕಂತಾಗಿ ₹44,375/- ಲೂಟಿ ಬಿಡುಗಡೆ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

Whatsapp Group Join
Telegram channel Join

ಇದನ್ನೂ ಕೂಡ ಓದಿ : Gruhalakshmi Updates : ಗೃಹಲಕ್ಷ್ಮಿ ಹಣ ಜಮಾ ಆಗಿಲ್ವಾ.? ಚಿಂತಿಸಬೇಡಿ ಹೀಗೆ ಮಾಡಿದರೆ ಒಟ್ಟಿಗೆ ₹4,000/- ಬರುತ್ತೆ

ಇಲಾಖೆಯ ಪ್ರಸ್ತಾವನೆಯಂತೆ ರಾಜ್ಯ ಸರ್ಕಾರ, ಗೃಹ ಲಕ್ಷ್ಮಿ ಯೋಜನೆಗೆ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯುವ ಷರತ್ತು ವಿಧಿಸಿ ಮೊದಲ ಕಂತಿನ ಅನುದಾನವಾಗಿ ಅಂದರೆ, ಆಗಸ್ಟ್, ಸೆಪ್ಟೆಂಬರ್ ಗೆ ₹4,600/- ಕೋಟಿ ರೂಪಾಯಿ ಅನುದಾನವನ್ನ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಗೃಹ ಲಕ್ಷ್ಮಿ ಮಹಿಳೆಯರಿಗೆ ಆಗಸ್ಟ್, ಸೆಪ್ಟೆಂಬರ್ ತಿಂಗಳ ₹2,000/- ರೂಪಾಯಿ ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ.

ಇದನ್ನೂ ಕೂಡ ಓದಿ : Gruhalakshmi Scheme : ಗೃಹಲಕ್ಷ್ಮಿ ಮಹಿಳೆಯರ ಗಮನಕ್ಕೆ / ಇಂತಹ ಮಹಿಳೆಯರಿಗೆ ಹಣ ಸಿಗಲ್ಲ / ಇನ್ನೂ ಹಣ ಸಿಗದಿರುವವರು ತಪ್ಪದೇ ನೋಡಿ

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply