Gruha Jyothi Scheme : ಉಚಿತ ವಿದ್ಯುತ್ ಬೇಕಾ.? ನಾಳೆಯಿಂದಲೇ ಅರ್ಜಿ ಸಲ್ಲಿಸಿ

Gruha Jyothi Scheme : ರಾಜ್ಯದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಂತಹ ಕಾಂಗ್ರೆಸ್ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳಲ್ಲೊಂದಾದ ಗೃಹಜ್ಯೋತಿ ಯೋಜನೆಗೆ ಜೂನ್ 15 ರಿಂದಲೇ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಅರ್ಜಿಯನ್ನ ಸಲ್ಲಿಸಲು ಸೇವಾಸಿಂಧು ಪೋರ್ಟಲ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಇದರ ಪ್ರಯೋಜನೆಯನ್ನ ಪಡೆಯಬಯಸುವವರು ಮಾಸಿಕ 200 ಯೂನಿಟ್ ಒಳಗಿನ ವಿದ್ಯುತ್ ಬಳಸುವವರಾಗಿರಬೇಕು. ಅಂತಹ ಬಳಕೆದಾರರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು.

Whatsapp Group Join
Telegram channel Join

ಇದೇ ಜೂನ್ 15 ರಿಂದ ಜುಲೈ 5 ರವೆರೆಗೆ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಅಂದಾಜು 2.14 ಕೋಟಿಯಷ್ಟು ಜನರು ಈ ಗೃಹಜ್ಯೋತಿ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಆರ್ ಆರ್ ನಂಬರ್ ಜೊತೆಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಇನ್ನು ಸ್ವಂತ ಮನೆಯಿಲ್ಲದವರಿಗೆ(ಬಾಡಿಗೆ ಮನೆಯಲ್ಲಿರುವವರು) ಮನೆ ಕರಾರು ಪತ್ರ ಅಥವಾ ಚುನಾವಣಾ ಗುರುತಿನ ಚೀಟಿ(ವೋಟರ್ ಐಡಿ) ಕಡ್ಡಾಯವಾಗಿದೆ.

ಇದನ್ನೂ ಕೂಡ ಓದಿ : BPL APL AAY : ಬಿಪಿಎಲ್ ಹಾಗು ಎಪಿಎಲ್ ರೇಶನ್ ಕಾರ್ಡ್ ಇರುವವರಿಗೂ, ಇಲ್ಲದವರಿಗೂ ಬಿಗ್ ಶಾಕ್.!

Whatsapp Group Join
Telegram channel Join

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಡಿಯಲ್ಲಿ ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ. ಇದು ಸ್ವಂತ ಮನೆ ಹೊಂದಿದವರಿಗೂ ಹಾಗೂ ಬಾಡಿಗೆದಾರರಿಗೂ ಕೂಡ ಅನ್ವಯವಾಗಲಿದೆ. ಉಚಿತ ವಿದ್ಯುತ್ ಗೆ ಕಡ್ಡಾಯವಾಗಿ ದಾಖಲೆಗಳನ್ನು ಸಲ್ಲಿಸಬೇಕು ಎಂದು ನೂತನ ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಇನ್ನು ಬೆಸ್ಕಾಂ ಹೆಡ್ ಆಫೀಸ್ ನಲ್ಲಿ ಗೃಹಜ್ಯೋತಿ ಹೆಸರಿನಲ್ಲಿಯೇ ಅಪ್ಲಿಕೇಶನ್ ಸಿದ್ಧವಾಗುತ್ತಿದೆ. ಸ್ಮಾರ್ಟ್ ಫೋನ್ ಗಳಲ್ಲಿಯೂ ಕೂಡ ಈ ಗೃಹ ಜ್ಯೋತಿ ಅಪ್ಲಿಕೇಶನ್ ಲಭ್ಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಕೂಡ ಓದಿ : Farmers News Today : ರೈತರಿಗೆ ಬಂಪರ್ ಸುದ್ಧಿ.! ಕೇಂದ್ರ ಸರ್ಕಾರದಿಂದ ಧಾನ್ಯಗಳ ಬೆಂಬಲ ಬೆಲೆ ಏರಿಕೆ.!

ಗೃಹ ಜ್ಯೋತಿ ಅಪ್ಲಿಕೇಶನ್ ಎಲ್ಲಾ ಆಪ್ ಗಳಂತೆಯೇ ಗೂಗಲ್ ಪ್ಲೇ ಸ್ಟೋರ್, ಆಪಲ್ ಸ್ಟೋರ್ ಗಳಲ್ಲಿಯೂ ಅಪ್ಲಿಕೇಶನ್ ಲಭ್ಯವಿರಲಿದ್ದು, ಮೊಬೈಲ್ ನಲ್ಲಿ ಆಪ್ ಡೌನ್ ಲೋಡ್ ಮಾಡಿ ಕೊಂಡು ಅರ್ಜಿಯನ್ನ ತುಂಬಬೇಕು. ಆರ್ ಆರ್ ನಂಬರ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ಸ್ವಂತ ಮನೆ ಹೊಂದಿದವರು ಅಥವಾ ಬಾಡಿಗೆ ಮನೆಯಲ್ಲಿರುವವರು ಮನೆ ಕರಾರು ಪತ್ರದ ದಾಖಲೆ ಹೊಂದಿರಬೇಕು. ಇನ್ನು ಬಾಡಿಗೆ ಕರಾರು ಪತ್ರ ಹೊಂದಿಲ್ಲದವರು ವೋಟರ್ ಐಡಿ ಪ್ರತಿಯನ್ನ ಸಲ್ಲಿಸಬೇಕು. ಸೇವಾ ಸಿಂಧು ಪೋರ್ಟಲ್ ಮೂಲಕವೂ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..