BPL AAY APL : ಬಿಪಿಎಲ್ ಹಾಗು ಅಂತ್ಯೋದಯ ರೇಷನ್ ಕಾರ್ಡ್ ದಾರರಿಗೆ ಆಹಾರ ಇಲಾಖೆ ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಈ ತಿಂಗಳಿನಿಂದಲೇ ಇದೀಗ ಹೊಸ ನಿಯಮ, ಹೊಸ ಬದಲಾವಣೆಯನ್ನ ಜಾರಿಗೆ ಮಾಡುವುದರ ಮೂಲಕ, ಪ್ರತೀ ಎಲ್ಲಾ ರೇಷನ್ ಕಾರ್ಡ್ ದಾರರಿಗೆ ಖುಷಿ ಸುದ್ಧಿಯನ್ನ ನೀಡಿದ್ದಾರೆ.

ಹೌದು, ಈಗಾಗಲೇ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಐದು ಕೆಜಿ ಅಕ್ಕಿ ಸೇರಿದಂತೆ, ಇತರೆ ಆಹಾರ ಸಾಮಗ್ರಿಗಳ ವಿತರಣೆ ಮಾಡಲಾಗುತ್ತಿದ್ದು, ರಾಜ್ಯ ಸರ್ಕಾರದಿಂದ ಇನ್ನು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ಜಮಾವಣೆ ಮಾಡಲಾಗುತ್ತಿದೆ. ಆದರೆ ಪ್ರಸಕ್ತ ಈ ತಿಂಗಳಿನಿಂದಲೇ ಇನ್ನು ಮುಂದೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪ್ರತೀ ಎಲ್ಲಾ ಸದಸ್ಯನಿಗೆ 10 ಕೆಜಿ ಅಕ್ಕಿ ವಿತರಣೆ ಮಾಡುವುದಕ್ಕೆ ಅಧೀಕೃತವಾಗಿ ಆಹಾರ ಇಲಾಖೆಯ ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ಹೇಳಿದ್ದಾರೆ.
ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮೀ ಎರಡನೇ ಕಂತಿನ ₹೪,೦೦೦/- ರೂಪಾಯಿ ಹಣ ಬಿಡುಗಡೆ.? ನೀವು ಈ ಕೆಲಸ ಮಾಡುವುದು ಕಡ್ಡಾಯ.!
ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು ಈ ತಿಂಗಳಿನಿಂದಲೇ ತಲಾ 10 ಕೆಜಿ ಅಕ್ಕಿಯನ್ನ ವಿತರಣೆ ಮಾಡುವುದಕ್ಕೆ ಸರ್ಕಾರವು ಸಿದ್ಧವಾಗಿದೆ. ಈಗಾಗಲೇ ಅಕ್ಕಿ ಖರೀದಿ ಟೆಂಡರ್ ಪ್ರಕ್ರಿಯೆ ಮುಗಿಯುವ ಹಂತಕ್ಕೆ ಬಂದಿದ್ದು, ಪ್ರಸಕ್ತ ಈ ತಿಂಗಳಿನಲ್ಲಿ ಅಕ್ಕಿ ಹಾಗು ಡಿಬಿಟಿ ಹಣ ಎರಡೂ ಕೂಡ ಎಲ್ಲರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವುದರ ಮೂಲಕ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಇದೀಗ ಮಾಹಿತಿಯನ್ನ ಸಚಿವರು ನೀಡಿದ್ದಾರೆ.
ಇಲ್ಲಿ ಖುಷಿಯ ವಿಚಾರ ಏನೆಂದರೆ, ಈ ಬಾರಿ ಅಕ್ಕಿ ವಿತರಣೆ ಮಾಡುವ ವೇಳೆಯಲ್ಲಿ ಸಾರವರ್ಧಿತ ಪೋರ್ಟಿಫೈಡ್ ಅಕ್ಕಿಯನ್ನ ವಿತರಣೆ ಮಾಡಲಾಗುತ್ತದೆ. ಹೌದು, ಹಲವರು ಆಹಾರ ಇಲಾಖೆಗೆ ದೂರು ನೀಡಿದ್ದರು. ರಾಜ್ಯ ಸರ್ಕಾರದಿಂದ ಅಕ್ಕಿ ವಿತರಣೆ ಮಾಡುತ್ತಿರುವುದು ಪೌಷ್ಟಿಕಾಂಶ ಭರಿತವಾಗಿಲ್ಲ. ಇದರನ್ನು ಅನಾರೋಗ್ಯಕ್ಕೆ ಮತ್ತಷ್ಟು ತುತ್ತಾಗುವುದು ಕಾಹ್ಚಿತ ಎಂದು ಹಲವರು ರಾಜ್ಯ ಸರ್ಕಾರಕ್ಕೆ ದೂರು ನೀಡಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಸಾರವರ್ಧಿತ ಪೌಷ್ಟಿಕಾಂಶವುಳ್ಳ ಪೋರ್ಟಿಫೈಡ್ ಅಕ್ಕಿಯನ್ನ, ಪ್ರತೀ ಎಲ್ಲಾ ಬಿಪಿಎಲ್ ಹಾಗು ಅಂತ್ಯೋದಯ ರೇಷನ್ ಕಾರ್ಡ್ ದಾರರಿಗೆ ವಿತರಣೆ ಮಾಡಲಾಗುತ್ತದೆ.
ಇದನ್ನೂ ಕೂಡ ಓದಿ : Dhruva Sarja : ಚಿಕ್ಕಪ್ಪ ಧ್ರುವ ಸರ್ಜಾ ಜೊತೆ ಸಕ್ಕತ್ ಆಗಿ ಡಾನ್ಸ್ ಮಾಡಿದ ರಾಯನ್ / ಧ್ರುವ ಸರ್ಜಾ ರಿಯಾಕ್ಷನ್ ನೋಡಿ
ಇನ್ನು ನೀವು ದೇಶದಾದ್ಯಂತ ಎಲ್ಲಿಯಾದರೂ ಕೂಡ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆಯ ಅಡಿಯಲ್ಲಿ ತಮ್ಮ ರೇಷನ್ ಕಾರ್ಡ್ ನ್ನ ನೀವು ಯಾವುದೇ ರಾಜ್ಯದಲ್ಲಿ, ಯಾವುದೇ ಜಿಲ್ಲೆಯಲ್ಲಿ ಈ ರೇಶನ್ ಕಾರ್ಡ್ ತೋರಿಸುವುದರ ಮೂಲಕ ಅಲ್ಲಿಯೂ ನೀವು ಒನ್ ನೇಷನ್ ಒನ್ ರೇಷನ್ ಕಾರ್ಡ್ ಅಡಿಯಲ್ಲಿ ಆಹಾರ ಧಾನ್ಯವನ್ನ ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಆದಷ್ಟು ಈ ಮಾಹಿತಿಯನ್ನ ಪ್ರತೀಯೊಬ್ಬರಿಗೂ ಶೇರ್ ಮಾಡಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.