Ganga Kalyana Scheme : ನಮಸ್ಕಾರ ಸ್ನೇಹಿತರೇ, 2023-24ನೇ ಸಾಲಿನ ಗಂಗಾ ಕಲ್ಯಾಣ ನೀರಾವರಿ ಯೋಜನೆಗೆ ಹೊಸ ಅರ್ಜಿಗಳನ್ನ ಆಹ್ವಾನಿಸಲಾಗಿದ್ದು, ಅರ್ಹರು ಆನ್‌ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ಉಚಿತ ಕೊಳವೆ ಬಾವಿ ಸೌಲಭ್ಯವನ್ನ ಪಡೆಯಬಹುದು. ಆನ್‌ಲೈನ್ ಮೂಲಕ ಹೇಗೆ ಅರ್ಜಿ ಸಲ್ಲಿಸುವುದು.? ವೆಬ್‌ಸೈಟ್ ಲಿಂಕ್ ಏನು.? ಹೇಗೆ ಅರ್ಜಿ ಸಲ್ಲಿಸುವುದು.? ಯಾವೆಲ್ಲಾ ದಾಖಲಾತಿಗಳು ಬೇಕಾಗುತ್ತವೆ.?
ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ವಿವಿಧ ನಿಗಮಗಳಿಂದ ಅರ್ಜಿಗಳನ್ನ ಆಹ್ವಾನಿಸಲಾಗಿದ್ದು, ವಿವಿಧ ಯೋಜನೆಗಳಲ್ಲಿಯೇ ಪ್ರಮುಖ ಯೋಜನೆಗಳ ಆಗಿರುವ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಒಂದು ಎಕರೆಯಿಂದ ಐದು ಎಕರೆ ಒಳಗಾಗಿ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆದು ಪಂಪ್‌ಸೆಟ್ ಅಳವಡಿಸಿ ವಿದ್ಯುತೀಕರಣಗೊಳಿಸುವ ನೀರಾವರಿ ಸೌಲಭ್ಯವನ್ನು, ಈ ಯೋಜನೆಯ ಅಡಿಯಲ್ಲಿ ಕಲ್ಪಿಸಿಕೊಡಲಾಗುತ್ತಿದೆ.
ಇದನ್ನೂ ಕೂಡ ಓದಿ : Shramashakti : ಮಹಿಳೆಯರಿಗೆ ಸಿಹಿಸುದ್ಧಿ.! ಶ್ರಮಶಕ್ತಿ ಯೋಜನೆಯಡಿ ₹50,000/- ರೂ. ಹಣ ಬ್ಯಾಂಕ್ ಖಾತೆಗೆ ಜಮಾ.!
ಈ ಅರ್ಜಿ ಸಲ್ಲಿಸಲು ಏನೆಲ್ಲ ದಾಖಲಾತಿಗಳು ಬೇಕಾಗುತ್ತದೆ.?
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ, ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು ಹಾಗು 1,50,000 ಹಾಗೂ ₹2,00,000 ಒಳಗಾಗಿ ಆದಾಯ ಮಿತಿಯನ್ನು ಹೊಂದಿರಬೇಕು. ಅರ್ಜಿ ಸಲ್ಲಿಸುವುದಕ್ಕೆ ಕನಿಷ್ಠ 21 ವರ್ಷ ವಯೋಮಾನ ಹೊಂದಿರಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ. ಹಾಗು ಇತರ ಎಲ್ಲ ದಾಖಲಾತಿಗಳನ್ನು ಲಗತ್ತಿಸಿ ನಿಮ್ಮ ಜಿಲ್ಲೆ ಅಥವಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಕೂಡ ಓದಿ : Shramashakti : ಮಹಿಳೆಯರಿಗೆ ಸಿಹಿಸುದ್ಧಿ.! ಶ್ರಮಶಕ್ತಿ ಯೋಜನೆಯಡಿ ₹50,000/- ರೂ. ಹಣ ಬ್ಯಾಂಕ್ ಖಾತೆಗೆ ಜಮಾ.!
ಇಲ್ಲದಿದ್ದರೆ ಆನ್‌ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೀವು ಗ್ರಾಮ ಒನ್ ಹಾಗು ಬೆಂಗಳೂರು ಒನ್ ಸೇವಾ ಕೇಂದ್ರಕ್ಕೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು. ಈ ವಿಡಿಯೋ ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ವಾಟ್ಸಪ್ ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಸ್ನೇಹಿತರೇ.