Free Solar Stove : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಅಡುಗೆ ಮಾಡುವ ಎಲ್ಲಾ ತಾಯಂದಿಯರಿಗೆ ಶುಭ ಸುದ್ದಿ. ಇನ್ನೂ ಮುಂದೆ ನೀವು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ತುಂಬಿಸಿ ಕೊಳ್ಳುವ ಅಗತ್ಯವಿಲ್ಲ. ಪ್ರತಿಯೊಬ್ಬರಿಗೂ ಸೋಲಾರ್ ಒಲೆಯ ವಿತರಣೆ ಮಾಡಲಾಗುತ್ತದೆ. ದಿನ ಕಳೆದಂತೆ ಪೆಟ್ರೋಲ್-ಡೀಸೆಲ್ ಹಾಗೂ ಇಂಧನ ತೈಲ ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ಬಡ ಜನತೆಗೆ ಕೇಂದ್ರ ಸರ್ಕಾರವು ಸೋಲಾರ್ ಸ್ಟೌವ್ ನೀಡಲು ಮಹತ್ವದ ನಿರ್ಣಯ ಕೈಗೊಂಡಿದೆ. ನಿಮಗೂ ಕೂಡ ಕೇಂದ್ರ ಸರ್ಕಾರದಿಂದ ಉಚಿತವಾಗಿ ಸೋಲಾರ್ ಓಲೆ ಬೇಕಾಗಿದ್ದರೆ ಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ ನೋಡಿ.
ಇದನ್ನೂ ಕೂಡ ಓದಿ : 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಹಣ ಹೆಚ್ಚಳ // 60 Years Old Age Pension Scheme in Karnataka
ದೇಶದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯತ್ತ ಸಾಗುತ್ತಿದೆ. ಅದರಲ್ಲೂ ದಿನಬಳಕೆಯ ಅಗತ್ಯ ವಸ್ತುಗಳಲ್ಲಿ ಒಂದಾದ ಎಲ್ ಪಿಜಿ(LPG) ಗ್ಯಾಸ್ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಇದೀಗ ಎಲ್ ಪಿಜಿ(LPG) ಗ್ಯಾಸ್ ಸಿಲಿಂಡರ್ ನಿಂದ ರಾಜ್ಯದ ಜನತೆಗೆ ಮುಕ್ತಿ ನೀಡಲು ಸರ್ಕಾರ ಮಹತ್ವದ ನಿರ್ಧಾರವನ್ನ ಕೈಗೊಂಡಿದೆ. ಗ್ಯಾಸ್ ಸಿಲಿಂಡರ್ ಬದಲಿಗೆ ಉಚಿತ ಸೋಲಾರ್ ಸ್ಟೌ ನೀಡುವುದಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಮಾಡಿದೆ. ದೇಶದಲ್ಲಿ ಏರುತ್ತಿರುವ ಎಲ್ ಪಿಜಿ(LPG) ಬೆಲೆಗಳು ಮತ್ತು ಆಗಾಗ ಸ್ಥಗಿತಗೊಳ್ಳುವ ತೊಂದರೆಯಿಂದ ಮುಕ್ತಿ ಪಡೆಯುವ ಸಮಯ ಇದಾಗಿದೆ.
ಅನೇಕ ಮನೆಗಳಲ್ಲಿ ಆಹಾರವನ್ನು ಗ್ಯಾಸ್ ಸಿಲಿಂಡರ್ ಗಳಲ್ಲಿ ತಯಾರಿಸುತ್ತಾರೆ. ಆದರೆ ಕೆಲವರು ಇಂಡೆಕ್ಷನ್ ಕುಕ್ಕರ್ ಅನ್ನ ಬಳಸುತ್ತಾರೆ. ಎರಡರಲ್ಲೂ ವೆಚ್ಚಗಳು ಹೆಚ್ಚಿರುವುದರಿಂದ ದಿನಗೂಲಿ ಮಾಡುವ ಜನರಿಗೆ ದಿನ ಸಾಗಿಸುವುದೇ ಕಷ್ಟಕರವಾಗಿದೆ. ಈ ಸಮಸ್ಯೆಗೆ ಪರಿಹಾರಕ್ಕಾಗಿ ಉಪಯುಕ್ತವಾದ ಸ್ಟೌ ಮಾರುಕಟ್ಟೆಯಲ್ಲಿ ಬರುತ್ತಿದೆ. ಇದರಿಂದಾಗಿ ಅಡುಗೆ ಅನಿಲ ಅಥವಾ ಇಂಡೆಕ್ಷನ್ ಕುಕ್ಕರ್ ಅಗತ್ಯವಿಲ್ಲ. ಇದು ತುಂಬಾ ಅಗ್ಗವೂ ಆಗಿದೆ. ಇದರಲ್ಲಿ ನೀವು ಗ್ಯಾಸ್ ಅಥವಾ ವಿದ್ಯುತ್ ವ್ಯಯಿಸದೇ ಜೀವನ ಪರ್ಯಂತ ನಿಮ್ಮ ಅಡುಗೆಯನ್ನ ಯಾವುದೇ ಖರ್ಚು ಇಲ್ಲದೆ ಮಾಡಬಹುದಾಗಿದೆ. ಸೂರ್ಯನ್ಯೂತನ್ ಸೋಲಾರ್ ಸ್ಟೌ ನಿಮ್ಮ ಸಮಸ್ಯೆಯನ್ನ ಪರಿಹರಿಸಲಿದೆ. ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಈ ಸ್ಟೌ ತಯಾರಿಸಿದೆ.
ಇದನ್ನೂ ಕೂಡ ಓದಿ : 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಹಣ ಹೆಚ್ಚಳ // 60 Years Old Age Pension Scheme in Karnataka
ಇದು ಹಳೆಯ ಸೌರ ಓಲೆಗಿಂತ ಸಂಪೂರ್ಣವಾಗಿ ವಿಭಿನ್ನವಾಗಿದೆ. ಹಳೆಯ ಸೋಲಾರ್ ಓಲೆ ಬಿಸಿಲಿನಲ್ಲಿ ಇಡಬೇಕಿತ್ತು. ಆದರೆ ಸೂರ್ಯನ್ಯೂತನ್ ಹಾಗೆ ಇರುವುದಿಲ್ಲ. ಇದನ್ನ ತಮ್ಮ ಅಡುಗೆ ಮನೆಯಲ್ಲಿ ಅಳವಡಿಸಿ ಬಳಸಬಹುದು. ಇದನ್ನ 24 ಗಂಟೆಗಳ ಕಾಲ ಬಳಸಬಹುದು. ಈ ಒಲೆಯನ್ನ ಬಳಸುವುದು ಹೇಗೆ? ಸೂರ್ಯ ನ್ಯೂತನ್ ಸೋಲಾರ್ ಸ್ಟೌ ಎರಡು ಘಟಕಗಳನ್ನ ಒಳಗೊಂಡಿದೆ. ಒಂದು ಘಟಕವನ್ನ ಅಡುಗೆ ಮನೆಯಲ್ಲಿ ಇರಿಸಲಾಗುವುದು. ಮತ್ತು ಇತರೆ ಘಟಕಗಳನ್ನ ಬಿಸಿಲಿನಲ್ಲಿ ಇಡಲಾಗುತ್ತದೆ. ಇದನ್ನ ಹಗಲು ರಾತ್ರಿ ಎರಡು ಸಮಯದಲ್ಲಿ ಬಳಸಬಹುದು. ಇದು ಹಗಲಿನಲ್ಲಿ ಶಕ್ತಿಯನ್ನ ಸಂಗ್ರಹಿಸುವ ಮೂಲಕ ರಾತ್ರಿಯಲ್ಲಿ ಸರಾಗವಾಗಿ ಕಾರ್ಯ ನಿರ್ವಹಿಸುತ್ತದೆ. ಸೂರ್ಯನ್ಯೂತನ್ ಸೋಲಾರ್ ಸ್ಟೌ ನ ಎರಡು ರೂಪಾಂತರಗಳು ಮಾರುಕಟ್ಟೆಗೆ ಬಂದಿವೆ. ಒಂದು 12,000/- ರೂಪಾಯಿಗಳಲ್ಲಿ ಮತ್ತು 23,000/- ರೂಪಾಯಿಗಳಲ್ಲಿ ಲಭ್ಯವಿದೆ. ಇಲ್ಲಿಯವರೆಗೆ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಈ ಸ್ಟೌವನ್ನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿಲ್ಲ. ಇದು ಶೀಘ್ರದಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ. ಈ ಸ್ಟೌ ಇಂಡಿಯನ್ ಆಯಿಲ್ ಗ್ಯಾಸ್ ಏಜೆನ್ಸಿ ಮತ್ತು ಪೆಟ್ರೋಲ್ ಪಂಪ್ ನಲ್ಲಿ ಲಭ್ಯ ಇರುತ್ತದೆ ಎಂದು ಹೇಳಲಾಗುತ್ತಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..