Free Govt Current : ಎಲ್ಲಾ ಮನೆಗಳಿಗೆ ಉಚಿತ ಕರೆಂಟ್ ಕೊಡಲ್ವಾ.? / ಜೂನ್ 1 ರಿಂದ ಹೊಸ ರೂಲ್ಸ್ ಜಾರಿಗೆ

Free Govt Current : ನಮಸ್ಕಾರ ಸ್ನೇಹಿತರೇ, ನೂತನವಾಗಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಮೊದಲೇ ಘೋಷಿಸಿದಂತೆ ೨೦೦ ಯೂನಿಟ್ ಕರೆಂಟ್ ನೀಡುತ್ತದೋ.? ಇಲ್ಲವೋ.? ಅನ್ನುವುದರ ಬಗ್ಗೆ ಸಂಶಯ ಬೇಡ. ಖಂಡಿತವಾಗಿ ನಿಮಗೆಲ್ಲರಿಗೂ ಕೂಡ ಉಚಿತವಾಗಿ ಕರೆಂಟ್ ಸಿಗುತ್ತದೆ. ಅವರು ಯಾವ ರೀತಿ ಉಚಿತ ಕರೆಂಟ್ ನೀಡುತ್ತಾರೆ ಅನ್ನುವ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

Whatsapp Group Join
Telegram channel Join

ಚುನಾವಣಾ ಸಮಯದಲ್ಲಿ ಈ ಉಚಿತ ಘೋಷಣೆ ಶುರು ಮಾಡಿದ್ದು ಮೊದಲು ತಮಿಳುನಾಡಿನಲ್ಲಿ. ದೇಶದಲ್ಲೇ ಮೊದಲ ಬಾರಿಗೆ ತಮಿಳುನಾಡು ಸರಕಾರ ರಾಜ್ಯದ ಜನರಿಗೆ ಉಚಿತ ಕಲರ್ ಟೀವಿ, ಉಚಿತ ಲ್ಯಾಪ್ ಟಾಪ್ ಮತ್ತು ಉಚಿತ ಮಿಕ್ಸಿ, ಗ್ರ್ಯಾಂಡರ್ ಸೇರಿದಂತೆ ಇವೆಲ್ಲವನ್ನ ಉಚಿತವಾಗಿ ನೀಡುತ್ತಿತ್ತು. ಅಲ್ಲಿ ಶುರುವಾಗಿ ಎಲ್ಲಾ ಪಕ್ಷದವರು ಕೂಡ ಈ ಐಡಿಯಾ ವನ್ನ ಬೇರೆ ಬೇರೆ ರೀತಿಯಾಗಿ ಪ್ರಯೋಗ ಮಾಡಿದ್ರು. ಯಾವ ರಾಜ್ಯದಲ್ಲಿ ಗೆಲ್ಲುವುದಕ್ಕೆ ಸಾಧ್ಯವಿಲ್ಲವೋ, ಅಂತಹ ರಾಜ್ಯಗಳಲ್ಲಿ ನಂಬುವುದಕ್ಕೂ ಸಾಧ್ಯವಿಲ್ಲದಂತ ಭರವಸೆಗಳನ್ನ ಬೇರೆ ಬೇರೆ ಪಕ್ಷದವರು ನೀಡಿದ್ರು.

ಇದನ್ನೂ ಕೂಡ ಓದಿ : PM Kisan Samman Nidhi : 14ನೇಯ ಕಂತು ಹಣ ನಿಮ್ಮ ಖಾತೆಗೆ ಬಂದಿದ್ಯಾ.? ರೈತರಿಗೆ ಭರ್ಜರಿ ಗುಡ್ ನ್ಯೂಸ್.!

Whatsapp Group Join
Telegram channel Join

ಮೊದಲ ಬಾರಿ ತಮಿಳುನಾಡಿನಲ್ಲಿ ಈ ಗ್ಯಾರಂಟಿಗಳನ್ನ ನೀಡಿದಾಗ ಆ ಸರ್ಕಾರದ ಮೇಲೆ ಕೇಸ್ ಹಾಕಿದ್ದರು. ಜನರಿಗೆ ಆಮಿಷ ಒಡ್ಡಿ ಓಟ್ ಹಾಕಿಸಿಕೊಂಡಿದ್ದಾರೆ ಅನ್ನುವ ಕಾರಣ. ಆದರೆ ಸುಪ್ರೀಂ ಕೋರ್ಟ್ ಹೇಳಿದ್ದೇನೆಂದರೆ, ಜನರಿಗೆ ಉಚಿತವಾಗಿ ನೀಡುವುದು ಲಂಚ ಅಥವಾ ಆಮಿಷ ಅಲ್ಲ ಅಂತ ತೀರ್ಪು ನೀಡಿತು. ಇದಾದ ನಂತರ 2013ರಲ್ಲಿ ದಿಲ್ಲಿಯ ಆಮ್ ಆದ್ಮಿ ಪಾರ್ಟಿ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ನಾವು 200 ಯೂನಿಟ್ ಉಚಿತ ಕರೆಂಟ್ ನೀಡ್ತೀವಿ, ಉಚಿತ ಶಿಕ್ಷಣ ನೀಡ್ತೀವಿ, ಉಚಿತ ನೀರು ನೀಡ್ತೀವಿ ಅನ್ನುವ ಭರವಸೆಗಳನ್ನ ನೀಡಿ ಗೆದ್ದಿತ್ತು. ಆದರೆ ಈ ಉಚಿತ ಕರೆಂಟ್ ಘೋಷಣೆಯಿಂದ ಸರಕಾರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ದಿಲ್ಲಿಯಲ್ಲಿ ಸಬ್ಸಿಡಿ ರೂಪದಲ್ಲಿ 200 ಯೂನಿಟ್ ವರೆಗೆ ಉಚಿತ ಕರೆಂಟ್ ನೀಡಲಾಗುತ್ತಿತ್ತು, ಅಲ್ಲಿನ ಸರಕಾರದ ಉದ್ದೇಶವೇನಂದರೆ, ಎಲ್ಲರು ಕೂಡ 200 ಯೂನಿಟ್ ಒಳಗಡೆ ಕರೆಂಟ್ ಉಪಯೋಗಿಸುವ ರೀತಿಯಾಗಲಿ ಅನ್ನುವ ಉದ್ದೇಶ. 300 ಯೂನಿಟ್ ಉಪಯೋಗಿಸುವವರ ಮನೆಯಲ್ಲಿ ಕೂಡ 200 ಯೂನಿಟ್ ಒಳಗಡೆ ಬಳಸಲಿ ಅನ್ನುವ ಪ್ಲಾನ್ ಮಾಡಿದ್ದರು. ಆದರೆ ಈ ಪ್ಲಾನ್ ಎಲ್ಲಾ ಉಲ್ತಾ ಆಗಿತ್ತು. 30 ರಿಂದ 50 ಯೂನಿಟ್ ವಿದ್ಯುತ್ ಬಳಸುವವರು ಕೂಡ 150 ರಿಂದ 180 ಯೂನಿಟ್ ವರೆಗೆ ವಿದ್ಯುತ್ ಬಳಸಲು ಶುರು ಮಾಡಿದ್ದರು. ಇದು ಅಲ್ಲಿನ ಸರಕಾರಕ್ಕೆ ದೊಡ್ಡ ಮೈನಸ್ ಪಾಯಿಂಟ್ ಆಗಿತ್ತು.

ಇದನ್ನೂ ಕೂಡ ಓದಿ : PM Kisan Samman Nidhi : 14ನೇಯ ಕಂತು ಹಣ ನಿಮ್ಮ ಖಾತೆಗೆ ಬಂದಿದ್ಯಾ.? ರೈತರಿಗೆ ಭರ್ಜರಿ ಗುಡ್ ನ್ಯೂಸ್.!

ಇನ್ನು ನಮ್ಮ ರಾಜ್ಯದ ವಿಚಾರಕ್ಕೆ ಬರುವುದಾದರೆ, ಖಂಡಿತವಾಗಿ ನಮಗೂ ಕೂಡ ಉಚಿತ ವಿದ್ಯುತ್ ಸಿಗುತ್ತದೆ. ಆದರೆ ಅದು ಸಬ್ಸಿಡಿ ರೂಪದಲ್ಲಿ ಸಿಗುತ್ತದೆ. ಅಂದರೆ 200 ಯೂನಿಟ್ ಒಳಗಡೆ ಯಾರು ವಿದ್ಯುತ್ ಉಪಯೋಗಿಸುತ್ತಾರೋ, ಅವರಿಗೆ ಮಾತ್ರ ಉಚಿತ ವಿದ್ಯುತ್ ನೀಡಲಾಗುತ್ತದೆ. ಅದಕ್ಕೂ ಜಾಸ್ತಿ ವಿದ್ಯುತ್ ಉಪಯೋಗಿಸಿದರೆ ಪೂರ್ತಿ ಕರೆಂಟ್ ಬಿಲ್ ನೀವು ಕಟ್ಟಬೇಕಾಗುತ್ತದೆ. ಹಾಗಾದ್ರೆ ನಮ್ಮ ಕರೆಂಟ್ ಬಿಲ್ ನಲ್ಲಿ ಏನು ಚೆಕ್ ಮಾಡಬೇಕು.?

ಕರೆಂಟ್ ಬಿಲ್ – ಇಲ್ಲಿ ಇಂದಿನ ಮಾಪನ ಎನ್ನುವುದು ಹಿಂದಿನ ತಿಂಗಳು ನೀವು ಎಷ್ಟು ಯೂನಿಟ್ ಬಳಸಿದ್ದೀರಾ ಅಂತ ಅರ್ಥ. ಹಾಲಿ ಮಾಪನ ಅಂದರೆ, ಈ ತಿಂಗಳು ಕರೆಂಟ್ ಬಿಲ್ ಕೊಡುವುದಕ್ಕೆ ಬಂದಾಗ ಎಷ್ಟು ಯೂನಿಟ್ ಇತ್ತು ಅಂತ. ಇದು ಒಂದು ತಿಂಗಳು ನೀವು ಯೂನಿಟ್ ಅಲ್ಲ, ನೀವು ಹಾಲಿ ಮಾಪನದಲ್ಲಿ ಹಿಂದಿನ ಮಾಪನವನ್ನ ಮೈನಸ್ ಮಾಡಬೇಕು. ನಿಮ್ಮ ಮನೆಯಲ್ಲಿ ಎಷ್ಟು ಯೂನಿಟ್ ಬಳಕೆ ಮಾಡ್ತಾರೆ ಅಂತ ನಿಮಗೆ ಗೊತ್ತಾಗುತ್ತೆ. ₹1,200/- ರೂಪಾಯಿ ಒಳಗಡೆ ಕರೆಂಟ್ ಬಿಲ್ ಯಾರ ಮನೆಗೆ ಬರುತ್ತದೋ, ಅವರೆಲ್ಲರಿಗೂ ಕೂಡ ಇನ್ನು ಮುಂದೆ ಉಚಿತ ವಿದ್ಯುತ್ ಸಿಗುತ್ತದೆ.ಯಾವುದೇ ಬಿಲ್ ಕಟ್ಟುವ ಅವಶ್ಯಕತೆಯಿಲ್ಲ. ನೀವು ₹1,200/- ರೂಪಾಯಿ ಒಳಗಡೆ ನಿಮ್ಮ ಮನೆಯ ಕರೆಂಟ್ ಬಿಲ್ ಬರುವ ಹಾಗೆ ನೋಡಿಕೊಳ್ಳಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply