Fixed Deposits : ಹೆಚ್ಚು ಬಡ್ದಿ ದುಡ್ಡು ಕೊಡುವ ಪ್ರಮುಖ 7 ಬ್ಯಾಂಕ್‌ಗಳು, ಎಷ್ಟಿದೆ ಬಡ್ಡಿ ದರ.? ಸಂಪೂರ್ಣ ಮಾಹಿತಿ

ಹಣ ಉಳಿತಾಯ ಮಾಡುವುದಕ್ಕೆ ಪ್ರತಿಯೊಬ್ಬರೂ ಒಂದಿಲ್ಲೊಂದು ಸರ್ಕಸ್‌ಗಳನ್ನು ಮಾಡುತ್ತಲ್ಲೇ ಇರುತ್ತಾರೆ. ಈ ಸರ್ಕಸ್‌ಗಳು ಸುಲಭವಾಗಿ ಅಂತ್ಯವಾಗುವುದಿಲ್ಲ. ಎಲ್ಲಿ ಹೂಡಿಕೆ ಮಾಡಬೇಕು ಹಾಗೂ ಎಲ್ಲಿ ಹೂಡಿಕೆ ಮಾಡಿದರೆ ಲಾಭವಾಗಲಿದೆ ಎನ್ನುವ ಗೊಂದಲ ಎಲ್ಲರಲ್ಲೂ ಇದ್ದೇ ಇದೆ.

ಆದರೆ ಕೆಲವೊಂದು ಬ್ಯಾಂಕ್‌ಗಳು ಹೆಚ್ಚು ಬಡ್ಡಿ ದುಡ್ಡನ್ನು ಕೊಡುತ್ತಿವೆ. Fixed Deposits (FDs) ಸ್ಥಿರ ಠೇವಣಿ ಇರಿಸಿದರೆ, ಒಳ್ಳೆಯ ಉಳಿತಾಯವನ್ನು ನಿರೀಕ್ಷೆ ಮಾಡಬಹುದು. ಹೆಚ್ಚು ಬಡ್ಡಿಯನ್ನು ಕೊಡುವ ಪ್ರಮುಖ ಏಳು ಬ್ಯಾಂಕ್‌ಗಳ ವಿವರ ಹಾಗೂ ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿ ಕೊಡುತ್ತಾರೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಈಗೆಲ್ಲವೂ ಉಳಿತಾಯಕ್ಕಿಂತಲೂ ಖರ್ಚೇ ಹೆಚ್ಚಾಗುತ್ತಿದೆ. ಜನ ಹೇಗಾದರೂ ಹಣ ಉಳಿತಾಯ ಮಾಡಬೇಕು ಎಂದು ಯೋಚಿಸಿದರೂ ಬಹಳಷ್ಟು ಜನರಿಗೆ ಇದು ಸಾಧ್ಯವಾಗುತ್ತಿಲ್ಲ. ಬ್ಯಾಂಕಿನಲ್ಲಿ (ಸ್ಥಿರ ಠೇವಣಿ) Fixed Deposits ಪ್ರಾರಂಭಿಸುವುದಕ್ಕೂ ಮೊದಲು ಯಾವ ಬ್ಯಾಂಕ್‌ನಲ್ಲಿ ಎಷ್ಟು ಬಡ್ಡಿ ಕೊಡುತ್ತಾರೆ ಎಂದು ತಿಳಿದುಕೊಳ್ಳುವುದು ಮುಖ್ಯ. ಆರ್‌ಬಿಐ ರೆಪೋ ದರವನ್ನು ಇಳಿಕೆ ಮಾಡಿದ ಮೇಲೆ ಹಲವು ಪ್ರಮುಖ ಬ್ಯಾಂಕ್‌ಗಳು ಠೇವಣಿ (ಹಣ ಉಳಿತಾಯ)ದ ಬಡ್ಡಿ ದರವನ್ನು ಹೆಚ್ಚಳ ಮಾಡಿವೆ. ಹಾಗಾದರೆ ಯಾವ ಬ್ಯಾಂಕ್ ಎಷ್ಟು ಮೊತ್ತದ ಬಡ್ಡಿಯನ್ನು ನೀಡುತ್ತಿವೆ. ಯಾವುದರಲ್ಲಿ ನೀವು ಹೂಡಿಕೆ ಮಾಡುವುದು ಉತ್ತಮ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. FDs ಮೇಲೆ ಹೆಚ್ಚು ಬಡ್ಡಿ ನೀಡುವ ಪ್ರಮುಖ 7 ಬ್ಯಾಂಕ್‌ಗಳ ವಿವರ ಇಲ್ಲಿದೆ.

1. ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) : ಸದ್ಯ ಉಳಿದೆಲ್ಲಾ ಬ್ಯಾಂಕ್‌ಗಳಿಗಿಂತಲೂ ಎಚ್‌ಡಿಎಫ್‌ಸಿ ಒಳ್ಳೆಯ ಬಡ್ಡಿದವರನ್ನು ನೀಡುತ್ತಿದೆ. HDFC ಬ್ಯಾಂಕ್‌ನಲ್ಲಿ ನೀವು ನಿರ್ದಿಷ್ಟ ಮೊತ್ತವನ್ನು ಎಫ್‌ಡಿ ಮಾಡಿದರೆ, ಅತ್ಯಧಿಕ ಬಡ್ಡಿ ದುಡ್ಡು ಸಿಗಲಿದೆ. ಎಫ್‌ಡಿ ಮೊತ್ತವನ್ನು 15 ರಿಂದ 21 ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚಿನ ಅವಧಿ ಇರಿಸಿದರೆ ಬಡ್ಡಿ ದುಡ್ಡು ಸಿಗಲಿದೆ. ಅತ್ಯಧಿಕ ಬಡ್ಡಿ ಮೊತ್ತವು ಸಾಮಾನ್ಯರಿಗೆ ವಾರ್ಷಿಕ ಶೇ 6.60 ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ 7.10 ಪ್ರತಿಶತ ಇರಲಿದೆ. ಒಂದು ವರ್ಷದ ಅವಧಿಯಲ್ಲಿ ಬ್ಯಾಂಕ್ ಕ್ರಮವಾಗಿ ಶೇ 6.25 ಮತ್ತು ಶೇ 6.75 ಬಡ್ಡಿ ಮೊತ್ತವನ್ನು ನೀಡುತ್ತಿದೆ.

2. ಐಸಿಐಸಿಐ ಬ್ಯಾಂಕ್ (ICICI Bank) : ICICI ಬ್ಯಾಂಕ್‌ನಲ್ಲಿಯೂ FDಯ ಮೇಲೆ ಒಳ್ಳೆಯ ಬಡ್ಡಿದರವಿದೆ. 2 ರಿಂದ 5 ವರ್ಷಗಳ ಅವಧಿಗೆ ಹಣವನ್ನು ಇರಿಸಿದರೆ ಅದರ ಮೇಲೆ ಶೇ 6.60 ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ ಶೇ 7.10 ಪ್ರತಿಶತ ಬಡ್ಡಿ ಮೊತ್ತ ಸಿಗಲಿದೆ.

3. ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) : ಇನ್ನು ಕೋಟಕ್ ಬ್ಯಾಂಕ್‌ನಲ್ಲಿಯೂ ಒಳ್ಳೆಯ ಬಡ್ಡಿದರವಿದೆ. 391 ದಿನಗಳಿಂದ 23 ತಿಂಗಳ ವರೆಗಿನ ಅವಧಿಯಲ್ಲಿ ನೀವು ಠೇವಣಿಯನ್ನು ಇರಿಸಿದರೆ, ಈ ಅವಧಿಗೆ ಶೇ. 6.6 ರಷ್ಟು ಬಡ್ಡಿ ಸಿಗಲಿದೆ. ಈ ಬ್ಯಾಂಕ್‌ನಲ್ಲಿ ಉತ್ತಮ ಸಾಲ ಸೌಲಭ್ಯವೂ ಇದೆ.

4. ಫೆಡರಲ್ ಬ್ಯಾಂಕ್ (Federal Bank) : 444 ದಿನಗಳ ಅವಧಿಗೆ ಅಂದರೆ ಒಂದೂವರೆ ವರ್ಷದ ಅವಧಿಗೆ ದುಡ್ಡನ್ನು ಇರಿಸಿದರೆ ಬಳಕೆದಾರರಿಗೆ ಶೇ. 6.85 ಬಡ್ಡಿ ಮೊತ್ತ ಸಿಗಲಿದೆ. ಇದೇ ಹಿರಿಯ ನಾಗರಿಕರಾಗಿದ್ದರೆ, ಅವರಿಗೆ ಶೇ. 7.35 ರಷ್ಟು ಬಡ್ಡಿ ಸಿಗಲಿದೆ.

5. ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) : ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿಯೂ ಒಳ್ಳೆಯ ಬಡ್ಡಿ ದರ ಇದೆ. ಎಫ್‌ಡಿಗೆ ಒಳ್ಳೆಯ ಬಡ್ಡಿ ಇದೆ. ಸಾಮಾನ್ಯ ಗ್ರಾಹಕರಿಗೆ 390 ದಿನಗಳ ಅವಧಿಗೆ ಶೇ. 6.70 ಹಾಗೂ ಹಿರಿಯ ನಾಗರಿಕರಿಗೆ ಶೇ. 7.20 ರಷ್ಟು ಮೊತ್ತದ ಬಡ್ಡಿ ಸಿಗಲಿದೆ.

6. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank Of India) : ಇನ್ನು ಯೂನಿಯನ್ ಬ್ಯಾಂಕ್‌ನಲ್ಲಿಯೂ ಎಫ್‌ಡಿಗೆ ಒಳ್ಳೆಯ ಮೊತ್ತವೇ ಇದೆ. ಈ ಬ್ಯಾಂಕ್‌ನಲ್ಲಿ ಗ್ರಾಹಕರು 456 ದಿನಗಳ ಅವಧಿಗೆ ನಿರ್ದಿಷ್ಟ ಮೊತ್ತವನ್ನು ಠೇವಣಿ ಇರಿಸಿದರೆ ಶೇ. 6.85 ಹಾಗೂ ಹಿರಿಯ ನಾಗರಿಕರಿಗೆ ಶೇ. 7.35 ರಷ್ಟು ಬಡ್ಡಿ ಸಿಗಲಿದೆ.

7. ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) : ಭಾರತದ ಪ್ರಮುಖ ಹಾಗೂ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ಎಸ್‌ಬಿಐನಲ್ಲೂ ಒಳ್ಳೆಯ ಬಡ್ಡಿ ದರವೇ ಇದೆ. ಈ ಬ್ಯಾಂಕ್‌ನಲ್ಲಿ ಠೇವಣಿಯನ್ನು 2 ರಿಂದ 3 ವರ್ಷಗಳ ಅವಧಿಯ ಇರಿಸಿದರೆ, ಶೇ 6.45 ಪ್ರತಿ ಶತದಷ್ಟು ಬಡ್ಡಿ ದುಡ್ಡು ಸಿಗಲಿದೆ. ಹಿರಿಯ ನಾಗರಿಕರಿಗೆ ಇನ್ನಷ್ಟು ಹೆಚ್ಚಿನ ಬಡ್ಡಿ ಮೊತ್ತ ಸಿಗಲಿದೆ.

Leave a Comment