Loan waiver : ಬೆಳೆ ಸಾಲ ಪಡೆದಿರುವ ರೈತರಿಗೆ ಸಿಹಿಸುದ್ಧಿ.! ಬೆಳೆ ಪರಿಹಾರ ಹಣ ರೈತರ ಖಾತೆಗೆ ನೇರ ಜಮಾ.!

Loan waiver : ನಮಸ್ಕಾರ ಸ್ನೇಹಿತರೇ, ಈಗಾಗಲೇ ಮಳೆ ಕೊರತೆ ಹಾಗು ಬೆಳೆ ಹಾನಿಯಿಂದ ಕಂಗೆಟ್ಟಿರುವ ರೈತರಿಗೆ ಬ್ಯಾಂಕ್ ಮತ್ತೊಂದು ಶಾಕ್ ನೀಡಿದೆ. ಕೂಡಲೇ ಬೆಳೆ ಸಾಲ ತೀರಿಸುವಂತೆ ರೈತರಿಗೆ ನೋಟೀಸ್ ಕಳುಹಿಸಲಾಗಿದ್ದು, ಪರಿಹಾರದ ನಿರೀಕ್ಷೆಯಲ್ಲಿರುವ ರೈತರು ಕಂಗಾಲಾಗಿದ್ದಾರೆ.

Whatsapp Group Join
Telegram channel Join

ಹೌದು, ರಾಜ್ಯದ ಬಹುತೇಕ ತಾಲೂಕುಗಳನ್ನೂ ಈಗಾಗಲೇ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಕೇಂದ್ರದ ಅಧ್ಯಯನ ಸಂಸ್ಥೆ ಪರಿಶೀಲನೆಯನ್ನು ನಡೆಸಿದ್ದು, ರೈತರು ಕೇಂದ್ರ ಹಾಗು ರಾಜ್ಯ ಸರ್ಕಾರದಿಂದ ಬರ ಪರಿಹಾರ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಈಗ ಬೆಳೆ ಸಾಲವನ್ನು ಕೂಡಲೇ ಪಾವತಿಸುವಂತೆ ಬ್ಯಾಂಕ್ ಗಳು ನೋಟೀಸ್ ಮೂಲಕ ಒತ್ತಾಯಿಸುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ.

ಇದನ್ನೂ ಕೂಡ ಓದಿ : ಮದುವೆಯ ರಾತ್ರಿ ವಧು-ವರರ ಜೊತೆಗೆ ಮಲಗುವ ತಾಯಿ! ಇಂತಹ ಸಂಪ್ರದಾಯ ಇರುವುದೆಲ್ಲಿ ಗೊತ್ತಾ.?

Whatsapp Group Join
Telegram channel Join

ಈ ಒಂದು ಕಾರಣಾಂತರದಿಂದ ರೈತರು ಆತ್ಮಹತ್ಯೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಎಲ್ಲಾ ರೈತ ಸಂಘಟನೆಗಳು, ರೈತರ ಸಾಲವನ್ನು ಮನ್ನಾ ಮಾಡುವಂತೆ ಸರಕಾರವನ್ನು ಒತ್ತಾಯಿಸಿದೆ. ಹಾಗು ರಾಜ್ಯದ 216 ತಾಲೂಕುಗಳನ್ನು ತೀವ್ರ ಬರಪೀಡಿತ ಕೇಂದ್ರ ಎಂದು ಘೋಷಣೆ ಮಾಡಲಾಗಿದ್ದು, 5,200 ಕೋಟಿ ರೂ. ಬೆಳೆ ನಷ್ಟದ ಅಂದಾಜು ಮಾಡಲಾಗಿದೆ ಎಂದು ಕೃಷಿ ಸಚಿವರು ತಿಳಿಸಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವರು, ಈಗಾಗಲೇ ಮೊದಲನೇ ಹಂತದಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಎರಡನೇ ಹಂತದಲ್ಲಿ ಮತ್ತೆ 21 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಪ್ರದೇಶಗಳಿಗೆ ಪರಿಹಾರ ನೀಡುವ ನೀರಿಕ್ಷೆಯ್ಲಲಿರುವ ರೈತರಿಗೆ ಗುಡ್ ನ್ಯೂಸ್ ಬಂದಿದೆ.

ಇದನ್ನೂ ಕೂಡ ಓದಿ : RBI New Rules : ಯಾವುದೇ ಬ್ಯಾಂಕ್ ಗಳಿಂದ ಸಾಲ ಪಡೆದುಕೊಂಡಿರುವವರಿಗೆ ಆರ್ ಬಿಐ ಹೊಸ ರೂಲ್ಸ್ ಜಾರಿಗೆ.!

ಈಗಾಗಲೇ ಕೇಂದ್ರ ಸರ್ಕಾರದ ತಂಡವು ತಮ್ಮ ಕಾರ್ಯವನ್ನು ಪೂರ್ಣಗೊಳಿಸಿದೆ. ಕೇಂದ್ರ ಸರ್ಕಾರ ಅತೀ ಶೀಘ್ರದಲ್ಲಿ ಪರಿಹಾರವನ್ನು ಬಿಡುಗಡೆ ಮಾಡಲಿದೆ. ಕೇಂದ್ರ ಸರ್ಕಾರದಿಂದ ಪರಿಹಾರ ಬಂದ ತಕ್ಷಣವೇ ರೈತರ ಖಾತೆಗೆ ಸಬ್ಸಿಡಿ ಮೊತ್ತವನ್ನು ಜಮಾವಣೆ ಮಾಡಲಾಗುವುದು ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿಯವರು ತಿಳಿಸಿದ್ದಾರೆ.

ಮೊದಲನೇ ಹಂತದಲ್ಲಿ ಒಟ್ಟು 50 ತಾಲೂಕಿನ ರೈತ ಫಲಾನುಭವಿಗಳ ಖಾತೆಗೆ ಸಬ್ಸಿಡಿ ಮೊತ್ತವನ್ನು ಜಮಾವಣೆ ಮಾಡಲಾಗುವುದು. ಹಂತ ಹಂತವಾಗಿ ಎಲ್ಲಾ ರೈತರ ಖಾತೆಗೆ ಬರಪೀಡಿತ ಪ್ರದೇಶಗಳಿಗೆ ಪರಿಹಾರ ಸಿಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply