Farmer Scheme : ನಮಸ್ಕಾರ ಸ್ನೇಹಿತರೇ, ರಾಜ್ಯದ ರೈತರಿಗೆ ಬಂಪರ್ ಸಿಹಿಸುದ್ಧಿ ನೀಡಲಾಗಿದ್ದು, ನೀವು ಕೂಡ ರೈತರಾಗಿದ್ರೆ, ರೈತ ಕುಟುಂಬಕ್ಕೆ ಸೇರಿದವರಾಗಿದ್ದರೆ, ಇಲ್ಲಿದೆ ನಿಮಗೆ ಬಂಪರ್ ಗುಡ್ ನ್ಯೂಸ್. ಒಟ್ಟು ಮೂರು ಭಾರೀ ಕೊಡುಗೆಗಳನ್ನ ಇದೀಗ ರಾಜ್ಯ ಸರ್ಕಾರದಿಂದ ಘೋಷಣೆ ಮಾಡಲಾಗಿದ್ದು, ಸುಲಭವಾಗಿ ಎಲ್ಲಾ ರೈತರು ಈ ಎಲ್ಲಾ ಸೌಲಭ್ಯವನ್ನ ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಕೂಡ ಓದಿ : Revenue Department : ಜಮೀನಿನ ಪಹಣಿಯಲ್ಲಿ ತಂದೆ, ತಾಯಿ, ಮುತ್ತಾತನ ಹೆಸರಿನಲ್ಲಿದ್ದರೆ / ದಾಖಲೆಗಳು ಇಲ್ಲದೆ ರೈತನ ಹೆಸರಿಗೆ ವರ್ಗಾವಣೆ
ಹೌದು, ರೈತರಿಗೆ ಕೃಷಿ ಇಲಾಖೆಯಿಂದ ಯಂತ್ರೋಪಕರಣಗಳನ್ನ ಖರೀದಿಸಲು ಸಬ್ಸಿಡಿ ಸಹಾಯಧನ ಸೇರಿದಂತೆ, ತೋಟಗಾರಿಕೆ ಅಡಿಯಲ್ಲಿ ಇದೀಗ ಬೋರ್ ವೆಲ್ – ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಕೊಳವೆ ಬಾವಿ ನಿರ್ಮಾಣ ಸೇರಿದಂತೆ ಎಲ್ಲಾ ರೈತರಿಗೆ ಕೃಷಿ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ ಹಾಗು ಇನ್ನು ಬಂಪರ್ ಸಿಹಿಸುದ್ಧಿಯನ್ನ ರೈತರಿಗೆ ನೀಡಲಾಗಿದ್ದು, ಮೊದಲಿಗೆ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನ ಪಡೆದುಕೊಳ್ಳಲು ೨೦೨೩-೨೪ ರ ವಾರ್ಷಿಕ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಕೆಗಳು ಪ್ರಾರಂಭವಾಗಿದ್ದು, ರೈತರಿಗೆ ಒಟ್ಟು ಶೇಕಡಾ ೬೦% ರಷ್ಟು ಸಬ್ಸಿಡಿ ಹಣ ಸಹಾಯಧನ ನೀಡಲಾಗುತ್ತಿದ್ದು, ರೈತರು ಕೃಷಿ ಯಂತ್ರೋಪಕರಣಗಳಾದ ಟ್ರಾಕ್ಟರ್, ಟಿಲ್ಲರ್, ಕೊಯ್ಲು ಮಾಡುವ ಯಂತ್ರ, ಕಳೆ ತೆಗೆಯುವ ಯಂತ್ರ, ಔಷಧ ಸಿಂಪಡಿಸುವ ಯಂತ್ರ, ಮಿನಿ ಪವರ್ ಟಿಲ್ಲರ್ ಸೇರಿದಂತೆ ವಿವಿಧ ಬಗೆಯ ಕೃಷಿ ಯಂತ್ರೋಪಕರಣಗಳನ್ನ ಸುಲಭವಾಗಿ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಗೆ ಭೇಟಿ ಮಾಡುವುದರ ಮೂಲಕ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
ಇದನ್ನೂ ಕೂಡ ಓದಿ : BPL APL AAY : ರೇಶನ್ ಕಾರ್ಡ್ ದಾರರಿಗೆ ಭರ್ಜರಿ ಸಿಹಿಸುದ್ಧಿ // ಅಕ್ಕಿಯ ಜೊತೆಗೆ ಹಣ, ರಾಗಿ, ಜೋಳ, ಗೋಧಿ ವಿತರಣೆ.!
ಇನ್ನು ಕೃಷಿ ಪಂಪ್ ಸೆಟ್ ಗು ಕೂಡ ನೀವು ಸುಲಭವಾಗಿ ಅರ್ಜಿಯನ್ನ ಸಲ್ಲಿಸಬಹುದು. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತವಾಗಿ ಕೊಳವೆ ಬಾವಿ / ಬೋರ್ ವೆಲ್ ಹಾಕಿಸಿಕೊಳ್ಳಲು ನೀವು ಸುಲಭವಾಗಿ ನಿಮಗೆ ಸಂಬಂಧಪಡುವ ನಿಗಮಕ್ಕೆ ಪ್ರಮುಖ ದಾಖಲಾತಿಯಾದ ಪಹಣಿ, ರೈತರ ಬ್ಯಾಂಕ್ ಖಾತೆ ವಿವರ, ಪಾಸ್ ಪೋರ್ಟ್ ಸೈಜ್ ಫೋಟೋ ಹಾಗು ಆದಾಯ ಪ್ರಮಾಣ ಪತ್ರ, ಜಮೀನಿನ ಜಮಾಬಂದಿ ಹಾಗು ಎಸ್ ಸಿ – ಎಸ್ ಟಿ ವರ್ಗಕ್ಕೆ ಸೇರಿದರೆ ಜಾತಿ ಪ್ರಮಾಣಪತ್ರ ಸೇರಿದಂತೆ ವಿವಿಧ ಬಗೆಯ ಅಗತ್ಯ ದಾಖಲಾತಿಗಳನ್ನ ತೆಗೆದುಕೊಂಡು ಹೋಗಿ ನೀವು ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿ ಸಲ್ಲಿಸಬಹುದು. ಹೀಗಾಗಿ ಆದಷ್ಟು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..