Drought Relief : ಬರಪೀಡಿತ ಜಿಲ್ಲೆಗಳ ರೈತರಿಗೆ ಸಿಹಿಸುದ್ಧಿ.! ಬರ ಪರಿಹಾರ ಹಣ ಬಿಡುಗಡೆ / ಈ ದಾಖಲೆಗಳು ಸಲ್ಲಿಸಿ

Drought Relief : ನಮಸ್ಕಾರ ಸ್ನೇಹಿತರೇ, ರಾಜ್ಯದಾದ್ಯಂತ ಬರಗಾಲ ಪೀಡಿತ ತಾಲೂಕುಗಳಿಗೆ ರಾಜ್ಯ ಸರ್ಕಾರದಿಂದ ಬರ ಪರಿಹಾರ ಹಣ ಬಿಡುಗಡೆ. ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ರಾಜ್ಯದ ಎಲ್ಲಾ ರೈತರಿಗೆ ಬರ ಪರಿಹಾರ ಹಣ ಬಿಡುಗಡೆ ಮಾಡಿ, ರಾಜ್ಯದ ಎಲ್ಲಾ ರೈತರಿಗೆ ಸಿಹಿಸುದ್ಧಿಯನ್ನ ನೀಡಿದೆ. ರಾಜ್ಯ ಸರ್ಕಾರವು ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿಯನ್ನ ಸಲ್ಲಿಸಲಾಗಿದ್ದು, ಇನ್ನೂ ಕೂಡ ಕೇಂದ್ರ ಸರ್ಕಾರ ಯಾವುದೇ ಬರ ಪೀಡಿತ ತಾಲೂಕು ಮತ್ತು ಜಿಲ್ಲೆಗಳ ರೈತರಿಗೆ ಬರ ಪರಿಹಾರ ನೀಡಲು ಹಣವನ್ನ ಬಿಡುಗಡೆ ಮಾಡಿಲ್ಲ.

Whatsapp Group Join
Telegram channel Join

ಇದನ್ನೂ ಕೂಡ ಓದಿ : ಲುಂಗಿ ಹಾಕಿಕೊಂಡು 5 ಸ್ಟಾರ್ ಹೋಟೆಲ್ ಗೆ ಹೋದ ರೈತನಿಗೆ ಮ್ಯಾನೇಜರ್ ಬೈದು ಆಚೆ ತಳ್ಳಿದ / ಆಗ ರೈತ ಮಾಡಿದ್ದೇನು ನೋಡಿ.!

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಿಂದಲೇ ಹಣವನ್ನ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲು ಬರ ಪರಿಹಾರವಾಗಿ ಹಣ ಘೋಷಣೆ ಮಾಡಿದೆ. ಆದರೆ ರೈತರು ಈ ಬರಪೀಡಿತ ತಾಲೂಕಿಗೆ ಒಳಪಡುವ ಎಲ್ಲಾ ರೈತರು ಬರ ಪರಿಹಾರ ಹಣ ಪಡೆದುಕೊಳ್ಳಲು ಈ ಕೂಡಲೇ ಈ ದಾಖಲೆಗಳನ್ನ ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸಲ್ಲಿಸಿ. ರಾಜ್ಯದ ಎಲ್ಲಾ ರೈತರು ಬರ ಪರಿಹಾರ ಹಣವನ್ನ ಪಡೆದುಕೊಳ್ಳಿ.

Whatsapp Group Join
Telegram channel Join

ಇಷ್ಟಕ್ಕೂ ರಾಜ್ಯ ಸರ್ಕಾರದಿಂದ ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಕೋಟಿ ಬಿಡುಗಡೆ ಮಾಡಲಾಗಿದೆ.? ರೈತರು ಯಾವ ದಾಖಲೆಗಳನ್ನ ಎಲ್ಲಿ ಸಲ್ಲಿಸಬೇಕು.? ಬೇಕಾಗುವ ದಾಖಲೆಗಳು ಯಾವುದು.? ಹಣ ನಮ್ಮ ಖಾತೆಗೆ ಯಾವಾಗ ಜಮೆ ಆಗುತ್ತದೆ.? ಪ್ರತೀ ಎಕರೆಗೆ ಎಷ್ಟು ಹಣ ಬಿಡುಗಡೆ ಮಾಡಲಾಗುತ್ತದೆ.? ಈ ಎಲ್ಲಾ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : ತನ್ನ ತಂದೆ ತೀರಿಕೊಂಡಾಗ ಅಂತ್ಯಕ್ರಿಯೆಗೆ ಹೋಗಲು ಬಸ್ ಟಿಕೆಟ್ ಗೂ ದುಡ್ಡಿಲ್ಲದೆ ಪರದಾಡಿದ ಹುಡುಗ ಈಗ ಕನ್ನಡದ ಟಾಪ್ ನಟ

ರಾಜ್ಯದಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯಿದೆ. ಹೀಗಾಗಿ ಕೇಂದ್ರದಿಂದ ಬರ ಪರಿಹಾರ ಘೋಷಣೆಗೆ ಆಗ್ರಹಗಳು ಕೇಳಿಬರುತ್ತಿದ್ದವು. ಆದರೆ ಕೇಂದ್ರ ಸರ್ಕಾರದಿಂದ ಇದುವರೆಗೂ ಯಾವುದೇ ಬರ ಪರಿಹಾರ ಹಣ ಬಿಡುಗಡೆಯಾಗಿಲ್ಲ. ಈ ನಡುವೆ ರಾಜ್ಯ ಸರ್ಕಾರ ಬರ ಪರಿಹಾರ ಹಣ ಬಿಡುಗಡೆಯನ್ನ ಮಾಡಿದೆ. 31 ಜಿಲ್ಲೆಗಳಿಗೆ 354 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ರಾಜ್ಯದ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ಬರ ಪರಿಹಾರವಾಗಿ 17,000 ಕೋಟಿ ರೂ. ಕೇಳಲಾಗಿದೆ.

ಆದರೆ ಕೇಂದ್ರದಿಂದ ಇನ್ನು ಕೂಡ ಯಾವುದೇ ಅನುದಾನ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಸಣ್ಣ ಪ್ರಮಾಣದ ಪರಿಹಾರದ ಹಣವನ್ನ ಬಿಡುಗಡೆ ಮಾಡಿದೆ.

ಇದನ್ನೂ ಕೂಡ ಓದಿ : ಮದುವೆ ಹಾಗು ಗಂಡ ಹೆಂಡತಿ ಸೇರೋಕೆ ಸೂಕ್ತ ವಯಸ್ಸು ಯಾವುದು?

ಯಾವ ಜಿಲ್ಲೆಗೆ ಎಷ್ಟು ಅನುದಾನ ನೀಡಲಾಗುತ್ತದೆ.?

ಬೆಂಗಳೂರು ನಗರ – 7.50 ಕೋಟಿ, ಬೆಂಗಳೂರು ಗ್ರಾಮಾಂತರ – 6 ಕೋಟಿ, ರಾಮನಗರ – 7.50 ಕೋಟಿ, ಕೋಲಾರ – 9 ಕೋಟಿ, ಚಿಕ್ಕಬಳ್ಳಾಪುರ – 9 ಕೋಟಿ, ತುಮಕೂರು – 15 ಕೋಟಿ, ಚಿತ್ರದುರ್ಗ – 9 ಕೋಟಿ, ದಾವಣಗೆರೆ – 9 ಕೋಟಿ, ಚಾಮರಾಜನಗರ – 7.50 ಕೋಟಿ, ಮೈಸೂರು – 13.50 ಕೋಟಿ, ಮಂಡ್ಯ – 10.50 ಕೋಟಿ, ಬಳ್ಳಾರಿ – 7.50 ಕೋಟಿ, ಕೊಪ್ಪಳ 10.50 ಕೋಟಿ, ರಾಯಚೂರು – 9 ಕೋಟಿ, ಕಲಬುರಗಿ 16.50 ಕೋಟಿ, ಬೀದರ್ – 4.50 ಕೋಟಿ, ಬೆಳಗಾವಿ – 22.50 ಕೋಟಿ, ಬಾಗಲಕೋಟೆ – 13.50 ಕೋಟಿ, ವಿಜಯಪುರ – 18 ಕೋಟಿ, ಗದಗ – 10.50 ಕೋಟಿ, ಹಾವೇರಿ – 12 ಕೋಟಿ , ಧಾರವಾಡ – 12 ಕೋಟಿ, ಶಿವಮೊಗ್ಗ – 10.50 ಕೋಟಿ, ಹಾಸನ – 12 ಕೋಟಿ, ಚಿಕ್ಕಮಗಳೂರು – 12 ಕೋಟಿ, ಕೊಡಗು – 7.50 ಕೋಟಿ, ದಕ್ಷಿಣ ಕನ್ನಡ – 3 ಕೋಟಿ, ಉಡುಪಿ – 4.50 ಕೋಟಿ, ಉತ್ತರ ಕನ್ನಡ – 16.50 ಕೋಟಿ, ಯಾದಗಿರಿ – 9 ಕೋಟಿ, ವಿಜಯನಗರ – 9 ಕೋಟಿ…

ಇದನ್ನೂ ಕೂಡ ಓದಿ : ವೀರ್ಯ ದಾನ ಯಾರು ಮಾಡಬಹುದು.? – ಆರೋಗ್ಯ ಸಲಹೆ

ಈ ಎಲ್ಲಾ ಜಿಲ್ಲೆಗಳಿಗೆ ಹಾಗು ತಾಲೂಕುಗಳಿಗೆ ಹಣ ಬಿಡುಗಡೆ ಮಾಡಲಾಗಿದ್ದು, ಎಲ್ಲಾ ತಾಲೂಕು ಹಾಗು ಜಿಲ್ಲೆಗಳ ವ್ಯಾಪ್ತಿಗೆ ಬರುವ ಎಲ್ಲಾ ರೈತರು ಬರ ಪರಿಹಾರ ಹಣ ಪಡೆದುಕೊಳ್ಳಲು ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳನ್ನ ಸಂಪರ್ಕಿಸಿ. ಹಾಗು ಅವರು ಕೇಳುವುವ ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ಜಮೀನಿನ ಪಹಣಿ, ಬ್ಯಾಂಕ್ ಖಾತೆ ಇದೆಲ್ಲ ಅಜಿತವಾಗಿ ಬೇಕಾಗಬಹುದು. ದಾಖಲೆಗಳನ್ನ ಸಲ್ಲಸಿ, ಪ್ರತೀ ಎಕರೆಗೆ ಎಷ್ಟು ಹಣ ನಿಗದಿಪಡಿಸಿ ನೀಡಬೇಕು ಎನ್ನುವ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ, ಎಷ್ಟು ಹಣ ನೀಡಬೇಕು ಎಂದು ನಿರ್ಧರಿಸಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡುತ್ತಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply