Gruhalakshmi Scheme : ದಾಖಲೆ ಎಲ್ಲಾ ಸರಿ ಇದೆ. ಆದರೂ ಗೃಹಲಕ್ಷ್ಮಿ ಯೋಜನೆಯ ₹2,000/- ಹಣ ಬ್ಯಾಂಕ್ ಖಾತೆಗೆ ಯಾಕೆ ಬಂದಿಲ್ಲ ಗೊತ್ತಾ.?

Gruhalakshmi Scheme : ನಮಸ್ಕಾರ ಸ್ನೇಹಿತರೇ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕಳೆದ ಆಗಸ್ಟ್ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ₹2,000/- ರೂಪಾಯಿಗಳನ್ನು ಪ್ರತಿ ಫಲಾನುಭವಿ ಯಜಮಾನಿಯರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ.

Whatsapp Group Join
Telegram channel Join

ಹಲವಾರು ಮಹಿಳೆಯರು ಈಗಾಗಲೇ ಈ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಆದರೆ ಒಂದು ತಿಂಗಳು ಕಳೆದರೂ ಕೂಡ ಬಾಕಿ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಬಂದಿಲ್ಲವೆನ್ನುವ ಚಿಂತೆಯಲ್ಲಿದ್ದಾರೆ. ನಾವು ಸಲ್ಲಿಸಿರುವ ದಾಖಲೆಗಳು ಸರಿಯಾಗಿಯೇ ಇದೆ ಆದರೂ ಹಣ ಖಾತೆಗೆ ಜಮಾ ಆಗಿಲ್ಲ ಎನ್ನುವ ಪ್ರಶ್ನೆಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : Business Loan : ಸ್ವಂತ ಬಿಸಿನೆಸ್ ಮಾಡಲು ಸರ್ಕಾರದಿಂದ ನೇರಸಾಲ / ನಿರುದ್ಯೋಗಿ ಯುವಕ-ಯುವತಿಯರಿಗೆ

Whatsapp Group Join
Telegram channel Join

ಎಲ್ಲಾ ದಾಖಲೆ ಸರಿಯಾಗಿದ್ದರೂ ಕೂಡ ಹಣ ಯಾಕೆ ಖಾತೆಗೆ ಜಮಾ ಆಗಿಲ್ಲ.?

ಈಗಾಗಲೇ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ₹2,000/- ರೂಪಾಯಿ ಹಣವನ್ನ ಕೂಡ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಆದರೆ ಇನ್ನೂ ಹಲವಾರು ಮಹಿಳೆಯರ ಖಾತೆಗೆ ಮೊದಲನೇ ಕಂತಿನ ಹಣವೇ ಜಮಾ ಆಗಿಲ್ಲ. ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯ ಅಡಿಯಲ್ಲಿ ನೀಡಲಾಗುವ ₹2,000/- ರೂಪಾಯಿ ಹಣವನ್ನ ನೀವು ಉಚಿತವಾಗಿ ಪಡೆಯಬೇಕೆಂದರೆ ಕೆಲವೊಂದು ನಿಯಮಗಳನ್ನ ಪಾಲಿಸಲೇಬೇಕಾಗುತ್ತದೆ. ನಿಮ್ಮ ಪಡಿತರ ಚೀಟಿಯಲ್ಲಿ ಮಹಿಳೆಯ ಹೆಸರು ಮೊದಲ ಸ್ಥಾನದಲ್ಲಿ ಇರಬೇಕು ಅಂದರೆ ಮಹಿಳೆಯೇ ಮನೆಯ ಯಜಮಾನಿ ಅಂತ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರಬೇಕು.

ಹಾಗು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅಗತ್ಯವಿರುವಂತಹ ಎಲ್ಲಾ ಬದಲಾವಣೆಗಳನ್ನ ಮಾಡಿಸಿಕೊಂಡಿದ್ದರೂ ಕೂಡ ಕೆಲವೊಮ್ಮೆ ಸರ್ವರ್ ಸಮಸ್ಯೆಯಿಂದಾಗಿ ನೀವು ಮಾಡಿಸಿರುವ ಬದಲಾವಣೆಗಳು ಅಪ್ಡೇಟ್ ಆಗಿರುವುದಿಲ್ಲ. ಇದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ. ಮತ್ತೊಮ್ಮೆ ನೀವು ಬ್ಯಾಂಕ್ ಅಥವಾ ನ್ಯಾಯಬೆಲೆ ಅಂಗಡಿಗೆ ಹೋಗಿ ನೀವು ಮಾಡಿಸಿರುವ ಎಲ್ಲಾ ಬದಲಾವಣೆಗಳು ಅಪ್ ಡೇಟ್ ಆಗಿದೆಯೋ ಇಲ್ಲವೋ ಅನ್ನುವುದನ್ನ ಪುನಃ ಚೆಕ್ ಮಾಡಿಸಿಕೊಳ್ಳಿ.

ಇದನ್ನೂ ಕೂಡ ಓದಿ : Darshan Thoogudeepa : ವಿವಾದ ಸೃಷ್ಟಿಸಿದ ಡಿಬಾಸ್ ದರ್ಶನ್ ಹಾಗು ಧ್ರುವ ಸರ್ಜಾ ನಡೆ..! ಇದಕ್ಕೆ ಅಸಲಿ ಕಾರಣ ಏನು ಗೊತ್ತಾ.?

ಫಲಾನುಭವಿ ಮಹಿಳೆಯರು ಇನ್ನೂ ಕೂಡ ತಮ್ಮ ಖಾತೆಗೆ ಹಣ ಜಮಾ ಆಗಿಲ್ಲ ಎಂದು ಬೇಸರ ಪಟ್ಟುಕೊಳ್ಳುತ್ತಿದ್ದಾರೆ. ಅಂತಹ ಮಹಿಳೆಯರಿಗೆ ಒಂದು ಸಿಹಿ ಸುದ್ಧಿ ಇದೆ. ನೀವು ನಿಮ್ಮ ಬ್ಯಾಂಕ್ ಖಾತೆಯ ಎಲ್ಲಾ ವಿವರಗಳನ್ನು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗೆ ತಿಳಿಸಿದರೆ, ಅವರು ಆ ಸಮಸ್ಯೆಯನ್ನು ಪರಿಶೀಲಿಸಿ ಅದಕ್ಕೇನು ಪರಿಹಾರ ಅನ್ನುವ ಮಾಹಿತಿಯನ್ನ ನೀಡುತ್ತಾರೆ. ಅಥವಾ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಹಾಯಕಿ ಬಳಿ ನಿಮ್ಮ ಸಮಸ್ಯೆಯನ್ನು ತಿಳಿಸಿ. ಹಾಗು ನಿಮ್ಮ ಖಾತೆಯಲ್ಲಿ ಏನಾದರೂ ಸಮಸ್ಯೆ ಇದೆಯಾ ಅನ್ನುವುದನ್ನು ಪರಿಶೀಲಿಸಿಕೊಳ್ಳಿ.

ರಾಜ್ಯ ಸರ್ಕಾರ ಅರ್ಹ ಫಲಾನುಭವಿಗಳ ಹೆಸರುಗಳ ಪಟ್ಟಿಯನ್ನು ಈಗಾಗಲೇ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಿದ್ದು, ಆಯಾ ಗ್ರಾಮದ ಅಂಗನವಾಡಿ ಟೀಚರ್ ಅಥವಾ ಸಹಾಯಕಿಯರು ನಿಮ್ಮ ಮನೆಗೆ ಭೇಟಿ ನೀಡಿ ₹2,000/- ರೂಪಾಯಿ ಹಣ ನಿಮ್ಮಾ ಖಾತೆಗೂ ಬರುವಂತೆ ಮಾಡಲಿದ್ದಾರೆ. ಆದ್ದರಿಂದ ಅರ್ಹ ಫಲನುಭವಿಗಳು ಯಾರೂ ಕೂಡ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಸಲ್ಲಿಸಿರುವ ದಾಖಲೆಗಳು ಸರಿ ಇದ್ದರೆ ನಿಮ್ಮ ಖಾತೆಗೆ ಮುಂದಿನ ತಿಂಗಳು ಗೃಹಲಕ್ಷ್ಮಿ ಹಣ ಜಮಾ ಆಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply