Dhruva Sarja : ಸರ್ಜಾ ಕುಟುಂಬದಲ್ಲಿ ಇದೀಗ ಸಂತೋಷ ಮನೆಮಾಡಿದ್ದು, ಅಣ್ಣನನ್ನು ಕಳೆದುಕೊಂಡ ಮೇಲೆ ತುಂಬಾ ನೋವಿನಲ್ಲಿದ್ದ ಧ್ರುವ ಸರ್ಜಾ ಬಳಿಕ ಅಣ್ಣನ ಮಗ ರಾಯನ್ ಹುಟ್ಟಿದ ಮೇಲೆ ಸರ್ಜಾ ಕುಟುಂಬದಲ್ಲಿ ಮತ್ತೆ ಚಿರು ಹುಟ್ಟಿಬಂದಿದ್ದಾರೆ ಎಂದು ಅಭಿಮಾನಿಗಳು ಸಂತೋಷ ವ್ಯಕತಪಡಿಸಿದ್ದರು. ಕಳೆದ ವರ್ಷ ಅಕ್ಟೋಬರ್ ೨ ನೇ ತಾರೀಖಿನಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮಗಳೆಂದರೆ ಧ್ರುವ ಸರ್ಜಾಗೆ ಪಂಚಪ್ರಾಣ. ನಿನ್ನೆ ಧ್ರುವ ಸರ್ಜಾ ಮಗಳ ಮೊದಲ ವರ್ಷದ ಹುಟ್ಟುಹಬ್ಬ ನಡೆದಿದ್ದು, ಮಗಳ ಬರ್ತ್ ಡೇಯನ್ನು ಧ್ರುವ ಸರ್ಜಾ ಅದ್ಧೂರಿಯಾಗಿ ಮಾಡಿದ್ದಾರೆ. ಧ್ರುವ ಸರ್ಜಾ ಅಂದ ಹೆಸರನ್ನು ಇನ್ನೂ ರಿವೀಲ್ ಮಾಡಿಲ್ಲ. ಮಗಳಿಗೆ ಪ್ರೀತಿಯಿಂದ ಕಣ್ಮಣಿ ಎಂದು ಕರೆಯುತ್ತಾರೆ.
ಇದನ್ನೂ ಕೂಡ ಓದಿ : ಮಹಿಳೆಯರೇ, ನಿಮಗೆ ಮಾತ್ರವಲ್ಲ ಯುವಕರಿಗೂ ಸಿಕ್ಕಿದೆ ಸರ್ಕಾರದಿಂದ ಸಿಹಿಸುದ್ಧಿ : ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಬಗ್ಗೆ ಅಪ್ಡೇಟ್.!
ನಿನ್ನೆಯಷ್ಟೇ ಮೇಘನಾ ರಾಜ್ ಧ್ರುವ ಸರ್ಜಾ ಮಗಳ ವಿಡಿಯೋವನ್ನ ಹಂಚಿಕೊಂಡಿದ್ದು, ಪುಟಾಣಿಗೆ ವಿಶ್ ಮಾಡಿದ್ದಾರೆ. ಬರ್ತ್ ಡೇ ಬಹಳ ಸಡಗರ ಸಂಭ್ರಮದಿಂದ ನಡೆದಿದ್ದು, ಸಾಕಷ್ಟು ನಟ-ನಟಿಯರು, ಹಾಗು ಧ್ರುವ ಸರ್ಜಾ ಅವರ ಸ್ನೇಹಿತರು, ಸಂಬಂಧಿಕರು ಬರ್ತ್ ಡೇಗೆ ಹೋಗಿ ಪುಟ್ಟ ಕಂದನಿಗೆ ಆಶೀರ್ವಾದ ಮಾಡಿದ್ದಾರೆ. ನಿನ್ನೆ ಮಗಳ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದು, ಹ್ಯಾಪಿ ಬರ್ತ್ ಡೇ ಮಗಳೇ ಎಂದು ಬರೆದುಕೊಂಡಿದ್ದಾರೆ. ನಟಿ ಮೇಘನಾ ರಾಜ್ ಕೂಡ ಧ್ರುವ ಸರ್ಜಾ ಅವರ ಮಗಳ ಬರ್ತ್ ಡೇಯಲ್ಲಿ ಭಾಗವಹಿಸಿದ್ದು, ಕುಟುಂಬದವರೆಲ್ಲಾ ಸೇರಿ ತುಂಬಾನೇ ಖುಷಿಯಿಂದ ಹುಟ್ಟುಹಬ್ಬ ಆಚರಿಸಿದ್ದಾರೆ.
ಇದನ್ನೂ ಕೂಡ ಓದಿ : Darshan Thoogudeepa : ವಿವಾದ ಸೃಷ್ಟಿಸಿದ ಡಿಬಾಸ್ ದರ್ಶನ್ ಹಾಗು ಧ್ರುವ ಸರ್ಜಾ ನಡೆ..! ಇದಕ್ಕೆ ಅಸಲಿ ಕಾರಣ ಏನು ಗೊತ್ತಾ.?
ಮೇಘನಾ ರಾಜ್ ಅವರು ಧ್ರುವ ಸರ್ಜಾ ಅವರ ಮಗಳ ಜೊತೆಗಿನ ಫೋಟೋ ಹಂಚಿಕೊಂಡು ನನ್ನ ಮುದ್ದು ಕಣ್ಮಣಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಧ್ರುವ ಸರ್ಜಾ ಮಗಳ ನಾಮಕರಣ ಈಗಾಗಲೇ ನಡೆದಿದ್ದು, ಆದರೆ ಹೆಸರು ಮಾತ್ರ ಇನ್ನೂ ರಿವೀಲ್ ಮಾಡಿಲ್ಲ. ಹಾಗಾಗ ಮಗಳು ಆಟವಾಡುವ ಫೋಟೋ ಹಾಗು ವಿಡಿಯೋಗಳನ್ನೂ ಧ್ರುವ ಸರ್ಜಾ ಹಾಗು ಪ್ರೇರಣಾ ಅವರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಒಟ್ಟಿನಲ್ಲಿ ಸಾಕಷ್ಟು ದುಃಖ, ನೋವು ತಿಂದ ಸರ್ಜಾ ಕುಟುಂಬ ಈಗ ಮುದ್ದು ಪುಟಾಣಿಗಳ ಆಗಮನದಿಂದ ಸ್ವಲ್ಪ ಸ್ವಲ್ಪವೇ ಎಲ್ಲಾ ನೋವುಗಳನ್ನು ಮರೆತು ಸಂತೋಷದ ಕಡೆಗೆ ಸಾಗುತ್ತಿದ್ದಾರೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..