Darshan Thoogudeepa : ಡಾಲಿ ಮಾಡಿದ ಕೆಲಸಕ್ಕೆ ಕೈ ಮುಗಿದ ನಟ ದರ್ಶನ್.! ಡಾಲಿ ಹಾಗು ಡಿಬಾಸ್ ನಡುವೆ ನಡೆದ ಮಾತುಕತೆಯಾದರು ಏನು.?

Darshan Thoogudeepa : ಕರುನಾಡಿನಲ್ಲಿ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ಸ್ಯಾಂಡಲ್ ವುಡ್ ನಟ ಡಿಬಾಸ್ ದರ್ಶನ್ ಸಾಕಷ್ಟು ಮಂದಿಗೆ ಅಚ್ಚುಮೆಚ್ಚು. ಹಾಗೆಯೇ ವಿರೋಧಿಗಳು ಕೂಡ ಇದ್ದಾರೆ. ಆದರೆ ಇದೀಗ ನಟ ಡಾಲಿ ಧನಂಜಯ್(Dhananjay) ಅವರು ಮಾಡಿರುವಂತಹ ಕೆಲಸಕ್ಕೆ ದರ್ಶನ್ ಅವರು ಕೈಮುಗಿದಿದ್ದಾರೆ. ಹಾಗಾದ್ರೆ ಡಿಬಾಸ್ ಹೇಳಿದ್ದೇನು.? ಡಾಲಿ ಧನಂಜಯ್ ಮಾಡಿದ್ದೇನು.? ಅಂತ ನೋಡೋಣ.

Whatsapp Group Join
Telegram channel Join

Kisan Credit Card : ಇನ್ನು ಮುಂದೆ ಕುರಿ, ಕೋಳಿ, ಹಸು, ಎಮ್ಮೆ ಸಾಕಾಣಿಕೆಗೆ ಸಾಲ ಸಿಗಲಿದೆ / ಸಬ್ಸಿಡಿ ಘೋಷಣೆ.!

ನಟ ದರ್ಶನ್ ಸ್ಟಾರ್ ನಟ. ಡಿಬಾಸ್(Darshan Thoogudeepa) ಅವರ ಕಾಲ್ ಶೀಟ್ ಗೆ ಹಲವು ನಿರ್ಮಾಪಕರು ಕಾಯುತ್ತಿದ್ದಾರೆ. ಆದರೆ ದರ್ಶನ್ ಅವರು ತಮ್ಮ ಸಹನಟ ಹಾಗು ಗೆಳೆಯ ಡಾಲಿ ಧನಂಜಯ್ ಬಳಿ ತಮಗೆ ಅವಕಾಶನವನ್ನ ಕೇಳಿದ್ದಾರೆ. ಹೌದು, ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ಟಗರು ಪಲ್ಯ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನಟ ದರ್ಶನ್, ನಾನು ಸ್ಟ್ರಗಲ್ ಮಾಡಿ ಬಂದವನು. ಈಗಲೂ ಸ್ಟ್ರಗಲ್ ಮಾಡುತ್ತಿರುವೆ. ನಿರ್ಮಾಪಕರ ಬಳಿ ಅವಕಾಶ ಕೇಳಲು ಹಿಂದೇಟು ಹಾಕಬಾರದು. ದಯವಿಟ್ಟು ನಿಮ್ಮ ನಿರ್ಮಾಣ ಸಂಸ್ಥೆಯಲ್ಲಿ ಅವಕಾಶ ಇದ್ದರೆ ಕೊಡಿ, ಖಂಡಿತಾ ಬಂದು ಸಿನಿಮಾ ಮಾಡಿ ಕೊಡುತ್ತೇನೆ ಎಂದರು ನಟ ಡಿಬಾಸ್ ದರ್ಶನ್.

Whatsapp Group Join
Telegram channel Join

Free Current Scheme : ಉಚಿತ ವಿದ್ಯುತ್ ಪಡೆಯುವ ಗೃಹಜ್ಯೋತಿ ಬಳಕೆದಾರರಿಗೆ.! ಉಚಿತ ಕರೆಂಟ್ ನಿಲ್ಲಿಸಿ ಶಾಕ್ ನೀಡುತ್ತಾ ಸರ್ಕಾರ.?

ಅದಕ್ಕೆ ನಗುತ್ತಲೇ ಒಪ್ಪಿಗೆಯನ್ನು ಸೂಚಿಸಿದ್ದಂತಿತ್ತು ಧನಂಜಯ್(Dhananjay) ನೋಟ. ನಾಗಭೂಷಣ್ ಹಾಗು ಪ್ರೇಮ್ ಪುತ್ರಿ ಅಮೃತ ನಟಿಸಿರುವ ಟಗರು ಪಲ್ಯ ಸಿನಿಮಾದ ಟ್ರೈಲರ್ ಅನ್ನು ದರ್ಶನ್ ಬಿಡುಗಡೆ ಮಾಡಿದರು. ಸಿನಿಮಾವನ್ನು ಡಾಲಿ ಪಿಕ್ಚರ್ಸ್ ವತಿಯಿಂದ ಧನಂಜಯ್ ನಿರ್ಮಾಣ ಮಾಡಿದ್ದಾರೆ. ನಟ ದರ್ಶನ್ ಅವರು ತಮ್ಮ ಸಹಕಲಾವಿದರಿಗೆ ಸಮಾನ ಗೌರವ ನೀಡುತ್ತಾರೆ. ಸಾಕಷ್ಟು ಪ್ರೀತಿ ಕೊಡುತ್ತಾರೆ. ಕಷ್ಟದಲ್ಲಿರುವ ಅನೇಕರಿಗೆ ಗೊತ್ತಾಗದಂತೆ ಸಹಾಯ ಮಾಡಿದ್ದಾರೆ.

ಇದೀಗ ಡಾಲಿ ಅವರ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದು, ಡಾಲಿ ಧನಂಜಯ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ದರ್ಶನ್ ಅವರ ಸರಳತೆಗೆ ಡಿಬಾಸ್ ಅಭಿಮಾನಿಗಳು ಹಾಗು ಡಾಲಿ ಧನಂಜಯ್ ಅಭಿಮಾನಿಗಳು ಸಲಾಂ ಎನ್ನುತ್ತಿದ್ದಾರೆ. ಡಿಬಾಸ್ ದರ್ಶನ್(Darshan Thoogudeepa) ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply