Gruhalakshmi : ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಬಂದಿಲ್ವಾ.? 2 ನೇಯ ಕಂತಿನ ಹಣ ಬಿಡುಗಡೆಗೆ ಕ್ಷಣಗಣನೆ.!

Gruhalakshmi : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಮೊದಲನೇ ಕಂತಿನ ₹2,000/- ರೂ. ಹಣ ಪಡೆದ ಎಲ್ಲಾ ಮಹಿಳೆಯರಿಗೆ ಇದೀಗ ಮತ್ತೊಮ್ಮೆ ನಾಳೆ ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಅಂಗನವಾಡಿ ಶಿಕ್ಷಕಿಯರಿಗೆ ಗೃಹಲಕ್ಷ್ಮಿ ಹಣ ಬರದೇ ಇರುವವರ ಲಿಸ್ಟ್ ಕಳುಹಿಸಲಾಗಿದ್ದು, ಇಲ್ಲಿಯವರೆಗೂ ಹಣ ಪಡೆದುಕೊಳ್ಳದೇ ಇರುವ ಮಹಿಳೆಯರು ನಿಮ್ಮ ಆಧಾರ್ ಕಾರ್ಡ್ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಂಜೂರಾತಿ ಆದೇಶ ಪತ್ರ, ಹಾಗು ಬ್ಯಾಂಕ್ ಅಕೌಂಟ್ ಜೊತೆ ರೇಷನ್ ಕಾರ್ಡ್ ಸೇರಿದಂತೆ ಈ ನಾಲ್ಕು ದಾಖಲೆಗಳ ಜೆರಾಕ್ಸ್ ಮಾಡಿಸಿ ಇಂದೇ ನಿಮ್ಮ ಹತ್ತಿರದ ಅಂಗನವಾಡಿ ಶಿಕ್ಷಕಿಯರಿಗೆ ದಾಖಲೆಗಳನ್ನ ಸಲ್ಲಿಸಿ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಎರಡೆರಡು ಲವ್ ಸ್ಟೋರಿ.! ದೊಡ್ಮನೆಯ ಅಸಲಿ ಆಟ ಶುರುವಾಯ್ತಾ.?

ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಲಾಖೆಯ ಅಧೀಕೃತ ಆದೇಶ ಹೊರಡಿಸಲಾಗಿದ್ದು, ಈಗಾಗಲೇ ಎಲ್ಲಾ ಅಂಗನವಾಡಿ ಶಿಕ್ಷಕಿಯರಿಗೆ ಹಣ ಬರದೇ ಇರುವವರ ಲಿಸ್ಟ್ ನೀಡಲಾಗಿದೆ.ಒಂದು ವೇಳೆ ನಿಮಗೂ ಕೂಡ ಮೊದಲನೇ ಕಂತಿನ ಹಣ ಬರದೇ ಇದ್ದರೆ ಕೂಡಲೇ ನಿಮ್ಮ ಹತ್ತಿರದ ಅಂಗನವಾಡಿ ಶಿಕ್ಷಕಿಯರನ್ನ ಭೇಟಿ ಮಾಡಿ. ಹಾಗು ಈ ಕೆಲಸ ಮಾಡಲು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧೀಕೃತ ಆದೇಶ ಹೊರಡಿಸಲಾಗಿದ್ದು, ಈ ಕೆಲಸ ಮಾಡುವುದು ಕಡ್ಡಾಯ ಎಂದು ಹೇಳಿದ್ದಾರೆ.

Whatsapp Group Join
Telegram channel Join

ಗೃಹಲಕ್ಷ್ಮಿ ಯೋಜನೆಯ ಹಣ ಯಜಮಾನಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗದೇ ಇರುವುದಕ್ಕೆ ಮುಖ್ಯ ಕಾರಣ, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೇ ಇರುವುದು. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಆಗದೇ ಇದ್ದರೆ ಬ್ಯಾಂಕ್ ಗೆ ತೆರಳಿ ಆಧಾರ್ ಕಾರ್ಡ್ ನೀಡಿ ಲಿಂಕ್ ಮಾಡಿಸಿಕೊಳ್ಳಿ. ಈ ಕೆಲಸ ಮಾಡಿದರೆ ಖಂಡಿತವಾಗಿಯೂ ನಿಮ್ಮ ಗೃಹಲಕ್ಷ್ಮಿ ಯೋಜನೆಯ ₹2,000/- ರೂ. ಹಣ ನಿಮ್ಮ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ವರ್ಗಾವಣೆಯಾಗಲಿದೆ.

ಇದನ್ನೂ ಕೂಡ ಓದಿ : Bigg Boss Kannada : ಬಿಗ್ ಬಾಸ್ ನಲ್ಲಿ ರಾತ್ರೋರಾತ್ರಿ ನಡೆಯಿತು ಲವ್ವಿ ಡವ್ವಿ.! ಸಂಗೀತಾ-ಕಾರ್ತಿಕ್ ಮಾಡಿದ್ದೇನು ನೋಡಿ.?

ಇನ್ನು ಕೆಲವರ ಹೆಸರಿನಲ್ಲಿ ವ್ಯತ್ಯಾಸವಾಗಿರುತ್ತದೆ. ಅಂದರೆ ರೇಷನ್ ಕಾರ್ಡ್ ನಲ್ಲಿ ಒಂದು ರೀತಿ, ಆಧಾರ್ ಕಾರ್ಡ್ ನಲ್ಲಿ ಮತ್ತೊಂದು ರೀತಿ ಹಾಗು ಬ್ಯಾಂಕ್ ಪಾಸ್ ಬುಕ್ ನಲ್ಲಿ ಬೇರೆ ರೀತಿಯಿದ್ದರೆ, ಈ ಕಾರಣಕ್ಕೂ ಕೂಡ ಯಜಮಾನಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೂ ₹2,000/- ರೂ. ಹಣ ಜಮಾ ಆಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಗಮನಿಸಿ ಸರಿಪಡಿಸಿ, ಗೃಹಲಕ್ಷ್ಮಿ ಯೋಜನೆಯ ಹಣ ಯಜಮಾನಿ ಮಹಿಳೆಯರ ಖಾತೆಗೆ ವರ್ಗಾವಣೆಯಾಗಬೇಕಾದರೆ ಬ್ಯಾಂಕ್ ಖಾತೆ, ರೇಷನ್ ಕಾರ್ಡ್ ಗೆ ಕೆವೈಸಿ ಅಪ್ ಡೇಟ್ ಆಗಿರುವುದು ಕಡ್ಡಾಯವಾಗಿರುತ್ತದೆ.

ಒಂದು ವೇಳೆ ಈ-ಕೆವೈಸಿ ಅಪ್ ಡೇಟ್ ಆಗದೇ ಇದ್ದರೆ, ₹2,000/- ರೂ. ಹಣ ನಿಮ್ಮ ಖಾತೆಗೆ ಜಮಾ ಆಗಿರುವುದಿಲ್ಲ. ಆದ್ದರಿಂದ ರೇಷನ್ ಅಂಗಡಿಗೆ ಹೋಗಿ, ಪಡಿತರ ಚೀಟಿಗೆ ನಿಮ್ಮ ಆಧಾರ್ ಕಾರ್ಡ್ ಕೊಟ್ಟು ಈ-ಕೆವೈಸಿಯನ್ನ ಅಪ್ ಡೇಟ್ ಮಾಡಿಸಿಕೊಳ್ಳಿ. ಬ್ಯಾಂಕ್ ಗೆ ತೆರಳಿ ಆಧಾರ್ ಕಾರ್ಡ್ ನೀಡಿ, ಅಲ್ಲಿಯೂ ಕೂಡ ಈ-ಕೆವೈಸಿ ಅಪ್ ಡೇಟ್ ಮಾಡಿಸಿ. ಒಟ್ಟಾರೆಯಾಗಿ ಈ ಎಲ್ಲಾ ಕೆಲಸವನ್ನ ನೀವು ಮಾಡಿದರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಯಜಮಾನಿ ಮಹಿಳೆಯರಿಗೆ ₹2,000/- ರೂ. ಹಣ ಆಗಸ್ಟ್ ಹಾಗು ಸೆಪ್ಟೆಂಬರ್ ಸೇರಿ ಒಟ್ಟು ₹4,000/- ರೂಪಾಯಿ ಹಣ ಒಟ್ಟಾಗಿ ನಿಮ್ಮ ಖಾತರಿಗೆ ಜಮಾ ಆಗಲಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply