Business Loan : ಸ್ವಂತ ಬಿಸಿನೆಸ್ ಮಾಡಲು ಸರ್ಕಾರದಿಂದ ನೇರಸಾಲ / ನಿರುದ್ಯೋಗಿ ಯುವಕ-ಯುವತಿಯರಿಗೆ

Business Loan : ನಮಸ್ಕಾರ ಸ್ನೇಹಿತರೇ, ರಾಜ್ಯದಾದ್ಯಂತವಿರುವ ಎಲ್ಲಾ ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಬಿಸಿನೆಸ್ ಮಾಡಲು ನೇರ ಸಾಲ ಯೋಜನೆಯನ್ನ ಜಾರಿಗೊಳಿಸಲಾಗಿದೆ. ಈ ನೇರ ಸಾಲ ಯೋಜನೆಯ ಅಡಿಯಲ್ಲಿ ನೀವು ಯಾವುದೇ ಸ್ವಂತ ಬಿಸಿನೆಸ್ ಮಾಡಿಕೊಳ್ಳಲು ಸರ್ಕಾರದಿಂದ ನೇರ ಸಾಲ ಯೋಜನೆಯನ್ನ ನೀಡಲಾಗ್ತಿದೆ. ಇದು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಕೆಲವ ಏಳು ಕೆಲಸದ ದಿನಗಲ್ಲಿ ಜಮಾವಣೆಯಾಗಲಿದೆ. ಹಾಗಿದ್ರೆ ಈ ನೇರ ಸಾಲ ಯೋಜನೆಯು ಕರ್ನಾಟಕ ರಾಜ್ಯಾದ್ಯಾಂತವಿರುವ ಪ್ರತಿಯೊಬ್ಬ ಯುವಕ ಯುವತಿಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದ್ದು, ಎಷ್ಟು ಲಕ್ಷ ರೂಪಾಯಿಗಳವರೆಗೆ ಬಿಸಿನೆಸ್ ಮಾಡಲು ಸಾಲ ನೀಡುತ್ತಾರೆ.? ಇದನ್ನ ಹೇಗೆ ಪಡೆದುಕೊಳ್ಳಬೇಕು.? ಅಗತ್ಯವಾದ ದಾಖಲೆಗಳು ಏನು.? ಯಾರಿಗೆಲ್ಲಾ ಈ ಬಿಸಿನೆಸ್ ಲೋನ್ ಸಿಗುತ್ತೆ.? ಹಾಗು ಸಂಪೂರ್ಣ ಮರುಪಾವತಿ ಮಾಡಬೇಕಾ ಅಥವಾ ಬೇಡ್ವಾ.? ಈ ಎಲ್ಲಾ ಪ್ರಶ್ನೆಗಳಿಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ :Gold Rate :ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ಯಾ? / ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?

ಉದ್ಯಮ ಮಾಡುವಂತಹ ಆಸಕ್ತ ಅಸಂಖ್ಯಾತರಿಗೆ ನೇರ ಸಾಲ ಸೌಲಭ್ಯ ನೀಡುತ್ತಿದೆ. ಈ ಯೋಜನೆಯ ಅಡಿಯಲ್ಲಿ ಆಸ್ತಿ ಅಂದರೆ ಕಟ್ಟಡ ಅಥವಾ ಭೂಮಿಯನ್ನ ಅಡಮಾನವಿಟ್ಟು ತಮ್ಮ ಬಿಸಿನೆಸ್ ಪ್ರಾರಂಭಿಸಲು ಅಥವಾ ವಿಸ್ತರಿಸಲು ಅರ್ಹ ಉದ್ಯಮಿಗಳಿಗೆ ಸಾಲವನ್ನ ಒದಗಿಸಲಾಗುತ್ತದೆ. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ನೇರ ಸಾಲ ಪಡೆಯಲು ಅರ್ಜಿದಾರ ಕರ್ನಾಟದ ನಿವಾಸಿಯಾಗಿರಬೇಕು. ಅರ್ಜಿದಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು. ಅರ್ಜಿದಾರರ ವಯಸ್ಸು18 ರಿಂದ 55 ವರ್ಷ ವಯಸ್ಸಿನವರಾಗಿರಬೇಕು. ಅರ್ಜಿದಾರರು KMDC ಡಿಫಾಲ್ಟರ್ ಆಗಿರಬಾರದು. ನಿಗಮದಿಂದ ಆಸ್ತಿ ಅಡಮಾನದ ಮೇಲೆ ಮಾತ್ರ ಸಾಲ ನೀಡಲಾಗುತ್ತದೆ. ಆಸ್ತಿಯ ಮೌಲ್ಯ ಸಾಲದ ಮೊತ್ತಕ್ಕಿಂತ ಕಡಿಮೆಯಿರಬಾರದು. ವ್ಯಾಪಾರ ಅಥವಾ ಉದ್ಯಮ ಸಾಲವನ್ನ ಕುಟುಂಬದ ಒಬ್ಬ ಸದಸ್ಯನಿಗೆ ಮಾತ್ರ ನೀಡಲಾಗುತ್ತದೆ. ಅರ್ಜಿದಾರರ ಕುಟುಂಬದ ಆದಾಯ 8 ಲಕ್ಷ ರೂಪಾಯಿಗಿಂತ ಕಡಿಮೆಯಿದ್ದರೆ, ಶೇಕಡಾ 4 ರಷ್ಟು ಬಡ್ಡಿದರದಲ್ಲಿ 20 ಲಕ್ಷ ರೂಪಾಯಿಗಳವರೆಗೆ ಸಾಲ ನೀಡಲಾಗುತ್ತೆ. ಅರ್ಜಿದಾರರ ಕುಟುಂಬದ ಆದಾಯ 8 ಲಕ್ಷ ರೂಪಾಯಿಗಳಿಗಿಂತ 15 ಲಕ್ಷ ರೂಪಾಯಿ ಆಗಿದ್ದರೆ, ಶೇಕಡಾ 6 ರ ಬಡ್ಡಿದರದಲ್ಲಿ 20 ಲಕ್ಷ ರೂಪಾಯಿ ಸಾಲ ನೀಡಲಾಗುತ್ತದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ :Gold Rate :ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ಯಾ? / ಎಷ್ಟಾಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ.?

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ನೇರ ಸಾಲ ಪಡೆಯಲು ಬೇಕಾಗಿರುವ ದಾಖಲೆಗಳು :-

ನಿವಾಸದ ಪುರಾವೆಗಾಗಿ ಆಧಾರ್ ಕಾರ್ಡ್ ನಕಲು ಪ್ರತಿ, ಸಕ್ಷಮ ಪ್ರಾಧಿಕಾರದಿಂದ ನೀಡುವಂತಹ ಜಾತಿ ಪ್ರಮಾಣಪತ್ರ, ಸಕ್ಷಮ ಪ್ರಾಧಿಕಾರದಿಂದ ನೀಡುವಂತಹ ಆದಾಯ ಪ್ರಮಾಣಪತ್ರ, ಗುತ್ತಿಗೆ ಪತ್ರ, ವಿಭಜನಾ ಪತ್ರ, ಬಿಡಿಗಡೆ ಪತ್ರ, ಬಾಡಿಗೆ ಪತ್ರ, ಆಸ್ತಿ ಮಾರಾಟ ಪತ್ರವನ್ನ ನೀಡಬೇಕು. ಕಟ್ಟಡದ ಖಾತಾಸಾರ ಮತ್ತು ಖಾತಾ ಪ್ರಾಮಾಣಪತ್ರ ಅಥವಾ ಭೂಮಿಯ ರೂಪಾಂತರ ಪತ್ರ, ಕಂದಾಯ ಭೂಮಿ ಅಥವಾ ಪಹಣಿ ಆರ್ ಟಿಸಿಗೆ ಸಂಬಂಧಿಸಿದಂತೆ ಪೋಡಿ ಅಥವಾ ವಿಭಜನಾ ಪತ್ರ, ಫಾರಂ ನಂಬರ್ ೧೫ ಸ್ಥಳೀಯ ಸಂಸ್ಥೆಗಳಿಗೆ ಇಂದಿನ ವರೆಗೆ ತೆರಿಗೆ ಪಾವತಿಸಿದ ರಶೀದಿ, ಸಕ್ಷಮ ಪ್ರಾಧಿಕಾರದಿಂದ ಭೂಮಿಯ ಮಾರ್ಗದರ್ಶನ ಮೌಲ್ಯ, ಆಸ್ತಿ ಪತ್ರವನ್ನು ಒತ್ತೆಯಿಡಲು ಕುಟುಂಬದ ಸದಸ್ಯರಿಂದ ಯಾವುದೇ ಆಕ್ಷೇಪಣೆಯಿರಬಾರದು. ಕಟ್ಟಡ ನೊಂದಾಯಿತ ಮೌಲ್ಯ ಮಾಪಕರಿಂದ ಮೌಲ್ಯಮಾಪನದ ವರದಿ, ಮೌಲ್ಯಮಾಪನದ ಪ್ರಮಾಣಪತ್ರ, ನೇರ ಸಾಲಕ್ಕೆ ಆಯ್ಕೆಯಾದ ನಂತರ ಬೇಕಾಗಿರುವ ದಾಖಲೆಗಳು, ಸಮಿತಿಯ ಅನುಮೋದನೆಯ ಆದೇಶ, ಅರ್ಜಿದಾರರಿಂದ ಅಫಿಡವಿಟ್, ಫಲಾನುಭವಿ ಮತ್ತು ಖಾತೆದಾರರಿಂದ ಜಂಟಿ ಅಫಿಡವಿಟ್, ಹೈಪೋಥಿಕೇಷನ್ ಮತ್ತು ಅಡಮಾನದ ಪತ್ರ, ಮರುಪಾವತಿಯ ಪತ್ರ, ಖಾತರಿ ಪತ್ರ, ಸಾಲ ಒಪ್ಪಂದ ಪರಿಗಣನೆ ರಶೀದಿ, ಸಾಲಗಾರರಿಂದ ಸ್ವೀಕೃತಿ ಸಾಲ, ಸಮಾನ ಅಡಮಾನಗಳ ಪತ್ರಗಳು ಇತ್ಯಾದಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..