BigBoss Kannada : ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ರಕ್ಷಕ್ ಅಂದರೆ ತುಂಬಾ ಕೋಪಿಷ್ಠ, ಸಖತ್ ನೇರವಾಗಿ ಮಾತನಾಡುತ್ತಾನೆ ಎಲ್ಲಾ ಅಂದುಕೊಂಡಿದ್ದಾರೆ. ಆದರೆ ಮತ್ತೊಂದು ಸೈಡ್ ಬೇರೇನೇ ಇದೆಯಂತೆ. ಜನರಿಗೆ ತಿಳಿಸಬೇಕು ಅಂತ ಬಿಗ್ ಬಾಸ್ ಮನೆಯೊಳಗೇ ಬರುತ್ತಿರುವೆ. ನಾನ್ ವೆಜ್ ಅಂದರೆ ನನಗೆ ಪ್ರಾಣ, ಜೀವ ಅದು. ದಿನದಲ್ಲಿ ಮೂರು ಸಲ ನಾನ್ ವೆಜ್ ಕೊಟ್ಟರೂ, ಮೂರು ಸಲವೂ ತಿನ್ನುವೆ. ಆದರೆ ಬಿಗ್ ಬಾಸ್ ಮನೆಯೊಳಗೇ ಹೋಗಿ ಊಟ ಬಿಟ್ಟು ಹೇಗಿರುತ್ತೀನಿ.. ಗೊತ್ತಿಲ್ಲ. ಭಯ ಶುರುವಾಗಿದೆ.
ಇದನ್ನೂ ಕೂಡ ಓದಿ : BPL AAY APL : ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ದಾರರಿಗೆ ಭರ್ಜರಿ ಗುಡ್ ನ್ಯೂಸ್.!

ನೆಗೆಟಿವ್ ವಿಚಾರಕ್ಕೆ ಬಂದರೆ ನನ್ನಬಗ್ಗೆ ಸಾಕಷ್ಟು ಟ್ರೊಲ್, ರೋಸ್ಟ್ ಅಂತ ಮಾಡುತ್ತಾರೆ. ತೊಂದರೆ ಇಲ್ಲ. ಜನರು ಮಾಡಲಿ. ನೇರವಾಗಿ ಮಾತನಾಡುತ್ತೀನಿ, ಯಾಕಂದ್ರೆ ನಮ್ಮ ತಂದೆ ಅದೇ ರೀತಿ ಇದ್ದರು. ನನ್ನ ತಾತ ಕೂಡ ಅದೇ ರೀತಿ ಇದ್ದರು. ಅದೇ ರಕ್ತದಲ್ಲಿ ನಾನು ಹುಟ್ಟಿರುವ ಕಾರಣ ನನ್ನಲ್ಲಿ ಏನೂ ಬದಲಾವಣೆ ಆಗುವುದಿಲ್ಲ.
ಇದನ್ನೂ ಕೂಡ ಓದಿ : Darshan Thoogudeepa : ಧ್ರುವ ಸರ್ಜಾ ಮಾತಿಗೆ ವಿನೋದ್ ಪ್ರಭಾಕರ್ ತಿರುಗೇಟು ಕೊಟ್ಟಿದ್ದು ಹೇಗೆ.? ಶಾಕ್ ಆದ ಡಿಬಾಸ್.!
ಅಪ್ಪ ಅಂತ ಬಂದರೆ ಮುಖದಲ್ಲಿ ಖುಷಿ ಬರುತ್ತದೆ. ನನಗೆ ನೆಗೆಟಿವ್ ಯಾವುದು? ಪಾಸಿಟಿವ್ ಯಾವುದು.? ಯಾವ ಕೆಲಸ ಮಾಡಬೇಕು.? ಹಾಗು ಮಾಡಬಾರದು.?ಅಂತ ತೋರಿಸಿಕೊಟ್ಟ ವ್ಯಕ್ತಿ ನನ್ನ ತಂದೆ. ಇಲ್ಲಿಯವರೆಗೂ ಅದೇ ನನಗೆ ಪಿಲ್ಲರ್ ಆಡಗಿದೆ. ನನ್ನ ಮೊದಲ ಸಿನಿಮಾ ಗುರುಶಿಷ್ಯರು. ಚಿತ್ರರಂಗಕ್ಕೆ ನಾನು ಬರಬೇಕು ಅನ್ನುವುದು ತಂದೆಯ ಆಸೆ ಆಗಿತ್ತು. ಅವರ ಹೆಸರನ್ನು ಉಳಿಸಬೇಕು ಹಾಗು ಬೆಳೆಸಬೇಕು ಅಂತ ಬಂದಿರುವೆ. ನನ್ನ ತಂದೆ ಒಂದಿಷ್ಟು ಪಾಠ ಹೇಳಿಕೊಟ್ಟಿದ್ದಾರೆ. ಇಂದು ರಕ್ಷಕ್ ಆಗಿ ನಿಂತಿರುವೆ. ಅಂದರೆ ಅದಕ್ಕೆ ನನ್ನ ತಾಯಿನೇ ಕಾರಣ. ಅವರ ಸಪೋರ್ಟ್ ಹೆಚ್ಚಿದೆ.
ಇದನ್ನೂ ಕೂಡ ಓದಿ : Gruhalakshmi : ಗೃಹಲಕ್ಷ್ಮೀ ಎರಡನೇ ಕಂತಿನ ₹೪,೦೦೦/- ರೂಪಾಯಿ ಹಣ ಬಿಡುಗಡೆ.? ನೀವು ಈ ಕೆಲಸ ಮಾಡುವುದು ಕಡ್ಡಾಯ.!
ಬಿಗ್ ಬಾಸ್ ನಲ್ಲಿ ಇರಬೇಕು ಅನ್ನುವುದು ನನ್ನ ಚಿಕ್ಕ ವಯಸ್ಸಿನ ಕನಸು. ಈಗ ಲಕ್ಷ್ಮಿ ಮನೆ ಬಾಗಿಲಿಗೆ ಬಂದಿದ್ದಾಳೆ. ವೇದಿಕೆ ಮೇಲೆ ನೆಗೆಟಿವ್ ಟ್ರೊಲ್ ಗಳ ಬಗ್ಗೆ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದಾಗ, ಪರವಾಗಿಲ್ಲ ಸರ್, ನೆಗೆಟಿವ್ ಅಣ್ಣ ಪಾಸಿಟಿವ್ ಮಾಡಿಕೊಂಡಿರುವೆ. ನನಗೆ ಪಬ್ಲಿಸಿಟಿ ಬೇಕು. ಅದು ಸಿಗುತ್ತಿದೆ ಅಂದಿದ್ದಾರೆ. ಇನ್ನು ಕೋಪದ ವಿಚಾರ ಪ್ರಶ್ನೆ ಮಾಡಿದಾಗ, ನಾನು ಹೊಡೆಯುವುದು, ಮುರಿದು ಹಾಕುವ ಕೆಲಸ ಮಾಡಲ್ಲ. ಕೋಪ ಬಂದಾಗ ಬಾಯಲ್ಲಿ ಕೆಲವೊಂದು ಬೀಪ್ ಪದಗಳು ಬರುತ್ತದೆ. ಅದನ್ನು ಕಂಟ್ರೋಲ್ ಮಾಡಬೇಕು ಅಂದಿದ್ದಾರೆ ರಕ್ಷಕ್.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.