BPL Card News : ಜೂನ್ 1 ರಿಂದ ಬಿಪಿಎಲ್ ಕಾರ್ಡ್ ವಿತರಣೆ! ಸರಕಾರದ ಘೋಷಣೆ – ಮಿಸ್ ಮಾಡದೆ ನೋಡಿ

BPL Card News : ನಮಸ್ಕಾರ ಸ್ನೇಹಿತರೇ, ಮುಂದಿನ ಸಚಿವ ಸಂಪುಟ ಸಭೆಯಲ್ಲಿಯೇ ಐದು ಗ್ಯಾರಂಟಿಗಳನ್ನ ಜಾರಿಗೊಳಿಸುವುದಾಗಿ ಹೇಳಿರುವ ಕಾಂಗ್ರೆಸ್ ಸರ್ಕಾರ, ಪ್ರತೀ ಯೋಜನೆಯಡಿ ಎಷ್ಟು ಫಲಾನುಭವಿಗಳು ಬರುತ್ತಾರೆ. ಹಾಗು ಯೋಜನೆಗಳ ಜಾರಿಯಿಂದ ಸರ್ಕಾರದ ಮೇಲಾಗುವ ಹೊರೆಯೆಷ್ಟು ಎನ್ನುವ ಬಗ್ಗೆ ಇಲಾಖಾವಾರು ವರದಿ ಕೇಳಿದ್ದು, ಮೊದಲಿಗೆ ಇಂಧನ ಇಲಾಖೆಯು ವಿವರವಾದ ವರದಿಯನ್ನ ಸಲ್ಲಿಸಿದೆ.

Whatsapp Group Join
Telegram channel Join

ಐದು ಗ್ಯಾರಂಟಿಗಳಲ್ಲಿ ಒಂದಾದ ಪ್ರತೀ ಮನೆಗೆ 200ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ಮಾಸಿಕ 1950/- ಕೋಟಿ ರೂಪಾಯಿಯಂತೆ ವಾರ್ಷಿಕ ಅಂದಾಜು 23,400/- ಕೋಟಿ ರೂಪಾಯಿ ಅನುದಾನ ಅಗತ್ಯವಿದೇ ಎನ್ನುವ ಮಾಹಿತಿಯನ್ನ ವರದಿಯಲ್ಲಿ ತಿಳಿಸಿದೆ. ಇದರೊಂದಿಗೆ ಕಾಂಗ್ರೆಸ್ ನ ಐದು ಗ್ಯಾರಂಟಿ ಗಳ ಪೈಕಿ ಗೃಹಜ್ಯೋತಿ ಯೋಜನೆಯಿಂದ ಸರಕಾರದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಲಿದೆ. ಐದು ಗ್ಯಾರಂಟಿ ಗಳ ಜಾರಿಗೆ 50,000/-ಕೋಟಿ ರೂಪಾಯಿಯೆಂದು ಅಂದಾಜಿಸಿರುವ ಸರಕಾರಕ್ಕೆ ಇದರ ಅರ್ಧದಷ್ಟು ಅನುದಾನ ಗೃಹ ಜ್ಯೋತಿ ಒಂದೇ ಯೋಜನೆಗೆ ಬೇಕಾಗುತ್ತದೆ.

ಮುಖ್ಯಮಂತ್ರಿಗಳ ಸೂಚನೆಯಂತೆ ಇಂಧನ ಇಲಾಖೆಯು, ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ ಸೇರಿದಂತೆ ತನ್ನೆಲ್ಲಾ ವಿದ್ಯುತ್ ಸರಬರಾಜು ನಿಗಮಗಳಿಂದ ಮಾಸಿಕ 200 ಯೂನಿಟ್ ನೊಳಗೆ ವಿದ್ಯುತ್ ಬಳಕೆದಾರರ ಮಾಹಿತಿ ಸಂಗ್ರಹಿಸಿದೆ. ಆ ಪ್ರಕಾರ ರಾಜ್ಯದಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ, 86 ಲಕ್ಷ, ಚೆಸ್ಕಾಂ ಅಡಿಯಲ್ಲಿ 20 ಲಕ್ಷ, ಮೆಸ್ಕಾಂ ವ್ಯಾಪ್ತಿಯಲ್ಲಿ 15 ಲಕ್ಷ, ಹೆಸ್ಕಾಂ ವ್ಯಪ್ತಿಯಲ್ಲಿ 28 ಲಕ್ಷ ಸೇರಿದಂತೆ ಒಟ್ಟಾರೆ ಎಲ್ಲಾ ನಿಗಮಗಳ ಅಡಿಯಲ್ಲಿ 1.70 ಕೋಟಿ ವಿದ್ಯುತ್ ಸಂಪರ್ಕಗಳಿದ್ದು, ಈ ಪೈಕಿ 1.20 ಕೋಟಿಯಷ್ಟು ಬಳಕೆದಾರರು 200ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆದಾರರಾಗಿದ್ದಾರೆ. ಇವರೆಲ್ಲರಿಗೂ ಗೃಹಜ್ಯೋತಿ ಯೋಜನೆ ಜಾರಿಗೆ ಮಾಸಿಕ 1955/- ಕೋಟಿಯಂತೆ 23,400ಕೋಟಿ ರೂಪಾಯಿಷ್ಟು ಅನುದಾನ ಬೇಕಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Whatsapp Group Join
Telegram channel Join

ರಾಜ್ಯದಲ್ಲಿ ಗೃಹ ಬಳಕೆ ವಿದ್ಯುತ್ ಗೆ ನಗರ ಹಾಗು ಗ್ರಾಮೀಣ ಭಾಗದಲ್ಲಿ, ಬೇರೆ ಬೇರೆ ರೀತಿಯಾದ ದರವನ್ನ ನಿಗದಿಪಡಿಸಲಾಗಿದೆ. ಆ ಪ್ರಕಾರ ಗೃಹಜ್ಯೋತಿ ಯೋಜನೆ ಜಾರಿಗೆಯಿಂದ ಮಾಸಿಕ ಗರಿಷ್ಟ 200ಯೂನಿಟ್ ವರೆಗೆ ವಿದ್ಯುತ್ ನ ಬಳಸುವ ಫಲಾನುಭವಿಗಳಿಗೆ ಗ್ರಾಮೀಣ ಭಾಗದಲ್ಲಿ 1000/- ರೂಪಾಯಿ, ನಗರ ಪ್ರದೇಶಗಳಲ್ಲಿ 1200/- ರೂಪಾಯಿ ಉಳಿತಾಯವಾಗಲಿದೆ ಎಂದು ತಿಳಿದು ಬಂದಿದೆ.

ಬಿಪಿಎಲ್ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಲು ಜೂನ್ 1 ರಿಂದ ಅವಕಾಶ ಕಲ್ಪಿಸಲು ಆಹಾರ ಇಲಾಖೆ ತೀರ್ಮಾನಿಸಿದೆ. ರಾಜ್ಯದಲ್ಲಿ ವಿಧಾನ ಸಭೆ ಚುನಾವಣಾ ನೀತಿ ಸಂಹಿತೆ ಕಾರಣದಿಂದ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆ ಮತ್ತು ಪಡಿತರ ಚೀಟಿ ವಿತರಣೆ ಕಾರ್ಯ ಸ್ಥಗಿತಗೊಂಡಿತ್ತು. ವೆಬ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಕೆ ವಿಭಾಗ ಲಾಕ್ ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಫಲಾನುಭವಿಗಳನ್ನ ಗುರುತಿಸಲು ಬಿಪಿಎಲ್ ಪಡಿತರ ಚೀಟಿ ಮಾನದಂಡವಾಗಿ ನಿಗದಿಪಡಿಸುವ ಸಾಧ್ಯತೆಯಿದ್ದು, ಜನ ಬಿಪಿಎಲ್ ಕಾರ್ಡ ಗಳಿಗೆ ಮುಗಿಬಿದ್ದಿದ್ದಾರೆ. ಜೂನ್ 1 ರಿಂದ ಆದ್ಯತಾ ಕುಟುಂಬಗಳ ಬಡತನ ರೇಖೆಗಿಂತ ಕೆಳಗಿರುವವರು, ಬಿಪಿಎಲ್ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗುವುದು. ಈ ಹಿಂದೆ ಅರ್ಜಿ ಸಲ್ಲಿಸಿದ ಹಾಗು ಮಂಜೂರಾದ ಪಡಿತರ ಚೀಟಿಗಳ ವಿತರಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಲಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply