BPL APL AAY : ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳನ್ನ ಪಡೆಯಲು ಇದೀಗ ಎಲ್ಲಾ ಬಿಪಿಎಲ್, ಎಪಿಎಲ್ ಹಾಗು ಅಂತ್ಯೋದಯ ರೇಷನ್ ಕಾರ್ಡ್ ದಾರರು ಹರಸಾಹಸ ಪಡುತ್ತಿದ್ದಾರೆ. ಇನ್ನು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಕೂಡ ಹಲವರು ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸುತ್ತಿದ್ದಾರೆ. ಆದರೆ ಇದೀಗ ಅಧೀಕೃತವಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಲಾಭಗಳನ್ನ ಪಡೆಯಲು ರೇಷನ್ ಕಾರ್ಡ್ ದಾರರು ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು.
ಇದನ್ನೂ ಕೂಡ ಓದಿ : Shakti Smart Card : ಮಹಿಳೆಯರ ಉಚಿತ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ / ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯ
ಬಿಪಿಎಲ್, ಅಂತ್ಯೋದಯ ಅಥವಾ ಎಪಿಎಲ್ ರೇಷನ್ ಕಾರ್ಡ್ ಹೊಂದಿದ್ದು, ಈ ಕೆಲಸವನ್ನ ಮಾಡದಿದ್ದರೆ, ಕಾಂಗ್ರೆಸ್ ಘೋಷಿಸಿರುವ ಐದು ಗ್ಯಾರಂಟಿಗಳಲ್ಲಿ ಯಾವುದೇ ಗ್ಯಾರಂಟಿ ನಿಮಗೆ ಸಿಗುವುದಿಲ್ಲ. ಇದು ಅಧೀಕೃತವಾಗಿ ರಾಜ್ಯ ಸರ್ಕಾರ ಮಾಹಿತಿ ಬಿಡುಗಡೆ ಮಾಡಿದೆ. ಏನಿದು ಮಾಹಿತಿ.? ರೇಷನ್ ಕಾರ್ಡ್ ದಾರರು ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳನ್ನ ಪಡೆಯಲು ಏನು ಮಾಡಬೇಕು.? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.
ಹೌದು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನ ಪಡೆದುಕೊಳ್ಳಲು ಇದೀಗ ಹಲವು ಮಾರ್ಗಸೂಚಿಗಳು, ಹಲವು ನಿಯಮಗಳು, ಶರತ್ತುಗಳನ್ನ ಸರ್ಕಾರವು ಜನಸಾಮಾನ್ಯರ ಮುಂದೆ ಇಟ್ಟಿದೆ. ಇದರಲ್ಲಿ ಐದು ಗ್ಯಾರಂಟಿಗಳನ್ನ ಪಡೆದುಕೊಳ್ಳಲು ಹಲವರು ನಕಲಿ ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ಗಳನ್ನ ಪಡೆದುಕೊಂಡಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳಿಗೆ ಲಂಚ ನೀಡಿ, ಇನ್ನು ಸರ್ಕಾರಿ ನೌಕರಿಯಲ್ಲಿ ಕೆಲಸ ಮಾಡುತ್ತಿರುವವರು, ಆರ್ಥಿಕವಾಗಿ ಸಧೃಡ ಹೊಂದಿದವರು ಸೇರಿದಂತೆ ಬಹುಪ್ರಮಾಣದ ಎಕರೆಗಟ್ಟಲೇ ಜಾಮೀನು ಹೊಂದಿರುವವರು ಕೂಡ ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳನ್ನ ಪಡೆದುಕೊಂಡಿದ್ದು, ಇದೀಗ ರಾಜ್ಯ ಆಹಾರ ಇಲಾಖೆಯ ಗಮನಕ್ಕೆ ಬಂದಿದೆ. ಅಂತಹವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನ ಪಡೆಯಲು ಸಾಧ್ಯವಿಲ್ಲ.
ಇದನ್ನೂ ಕೂಡ ಓದಿ : Shakti Smart Card : ಮಹಿಳೆಯರ ಉಚಿತ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ / ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯ
ಹೀಗಾಗಿ ನೀವು ಈ ಕೂಡಲೇ ನಿಮ್ಮ ವಲಯದ ರೇಷನ್ ವಿತರಿಸುವ ಅಂಗಡಿಗೆ ಹೋಗಿ, ಕುಟುಂಬ ಸಮೇತ ಪ್ರತಿಯೊಬ್ಬರ ರೇಷನ್ ಕಾರ್ಡ್ ತೆಗೆದುಕೊಂಡು ಹೋಗಿ, ಇಂದೇ ಈ ಕೆವೈಸಿಯನ್ನ ಧೃಡೀಕರಿಸಿಕೊಳ್ಳಿ. ಈ ಕೆವೈಸಿಯನ್ನ ಧೃಡೀಕರಿಸಿಕೊಳ್ಳುವ ಮೂಲಕ, ಕೇಂದ್ರ ಹಾಗು ರಾಜ್ಯ ಸರ್ಕಾರದಿಂದ ಸಿಗುವ ಎಲ್ಲಾ ಸೇವೆ ಸೌಲಭ್ಯಗಳನ್ನ ಮನೆಯಲ್ಲಿಯೇ ಕುಳಿತು ಪಡೆದುಕೊಳ್ಳಿ. ಹಾಗಾಗಿ ಆದಷ್ಟು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ.