BPL Ration Card : ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಬಿಗ್ ಶಾಕ್.! ಇನ್ನು ಮುಂದೆ ಇಂತಹ ರೇಷನ್ ಕಾರ್ಡ್ ಬಂದ್.!

BPL Ration Card : ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಬಿಪಿಎಲ್ ಕಾರ್ಡ್ ಗಳ ಸಂಖ್ಯೆ ಹಾಗು ಅನರ್ಹರು ಕೂಡ ಪಡಿತರ ಚೀಟಿಗಳನ್ನ ಹೊಂದಿದ್ದು, ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗಳನ್ನ ರದ್ದುಗೊಳಿಸಲು ಹೊಸ ತಂತ್ರ ರೂಪಿಸಲಾಗಿದೆ. ಇಂತಹ ರೇಷನ್ ಕಾರ್ಡ್ ಗಳಿಗೆ ಮುಂದಿನ ತಿಂಗಳು ಯಾವುದೇ ರೇಷನ್ ಅಕ್ಕಿ ವಿತರಣೆ ಇಲ್ಲ. ಜೊತೆಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ಸ್ಥಗಿತ.

Whatsapp Group Join
Telegram channel Join

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೊಳಿಸಿರುವ ಹೊಸ ರೂಲ್ಸ್ ಏನು.? ಯಾವ ರೇಷನ್ ಕಾರ್ಡ್ ಗಳು ಬಂದ್ ಆಗುತ್ತವೆ.? ಯಾವ ಹೊಸ ರೂಲ್ಸ್ ಜಾರಿಗೊಳಿಸಲಾಗಿದೆ. ನಮ್ಮ ರೇಷನ್ ಕಾರ್ಡ್ ಬಂದ್ ಆಗದೇ ಇರಲು ನಾವು ಏನು ಮಾಡಬೇಕು.? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : Darshan Thoogudeepa : ಹುಲಿ ಉಗುರು ಆರೋಪದಡಿ ದರ್ಶನ್ ಅವರನ್ನು ಅರೆಸ್ಟ್ ಮಾಡಬೇಕು ಎಂದವರಿಗೆ ಪತ್ನಿ ವಿಜಯಲಕ್ಷ್ಮಿ ಖಡಕ್ ಆಗಿ ಹೇಳಿದ್ದೇನು.?

Whatsapp Group Join
Telegram channel Join

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ನಗದು ನೀಡುವ ವ್ಯವಸ್ಥೆ ಜಾರಿಗೆ ಬಂದ ಬೆನ್ನಲ್ಲೇ, ರೇಷನ್ ಕಾರ್ಡ್ ದಾರರಿಗೆ ಸರ್ಕಾರ ಶಾಕ್ ಮೇಲೆ ಶಾಕ್ ಕೊಡುತ್ತಿದೆ. ಇದೀಗ ರಾಜ್ಯದಲ್ಲಿ ೩.೨೬ ಲಕ್ಷ ಪಡಿತರ ಚೀಟಿಗಳನ್ನ ರದ್ದುಪಡಿಸಿದೆ. ಇದರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕಳೆದ ಆರು ತಿಂಗಳಿನಿಂದ ಪಡಿತರ ಸಾಮಗ್ರಿಗಳನ್ನು ಪಡೆದುಕೊಳ್ಳದೇ ಇರುವ ಬಿಪಿಎಲ್ ಪಡಿತರ ಚೀಟಿಗಳನ್ನು ರಾಜ್ಯ ಸರ್ಕಾರ ಸದ್ದಿಲ್ಲದೇ ರದ್ದುಪಡಿಸಿದೆ.

ಕರ್ನಾಟಕದಲ್ಲಿ ಒಟ್ಟು 1,16,95,029 ಬಿಪಿಎಲ್ ಕಾರ್ಡ್ ದಾರರಿದ್ದಾರೆ. ಈ ಪೈಕಿ 3.26 ಲಕ್ಷ ಕಾರ್ಡ್ ದಾರರಿಗೆ 6 ತಿಂಗಳಿನಿಂದ ಪಡಿತರ ಸಾಮಗ್ರಿಗಳನ್ನ ಪಡೆದುಕೊಂಡಿಲ್ಲ. ಕಳೆದ 6 ತಿಂಗಳಿನಿಂದ ಪಡಿತರ ಸಾಮಗ್ರಿಗಳನ್ನ ಪಡೆದುಕೊಳ್ಳದೇ ಇರುವವರ ರೇಷನ್ ಕಾರ್ಡ್ ಗಳನ್ನೂ ರದ್ದುಪಡಿಸಲು ಕರ್ನಾಟಕ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಲಕ್ಷಾಂತರ ಕುಟುಂಬಗಳಿಗೆ ಪಡಿತರ ಜೊತೆಗೆ ಇತರೇ ಸೌಲಭ್ಯವು ಕಡಿತವಾಗುವ ಆತಂಕ ಎದುರಾಗಿದೆ.

ಇದನ್ನೂ ಕೂಡ ಓದಿ : Tiger Claw : ನಟ ಜಗ್ಗೇಶ್ ಮನೆಯಲ್ಲಿ ಕೊಳೆತ ಪೆಂಡೆಂಟ್ ವಶ.? ಜಗ್ಗೇಶ್ ಗೂ ಉರುಳಾಗುತ್ತಾ ಹುಲಿ ಉಗುರಿನ ಪೆಂಡೆಂಟ್.!

ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಪಡಿತರ ಸಾಮಾಗ್ರಿ ವಿತರಣೆ ಮಾಡುತ್ತಿದೆ. ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದರೂ ಕೂಡ ಕಳೆದ ಆರು ತಿಂಗಳವರೆಗೆ ಲಕ್ಷಾಂತರ ಕುಟುಂಬಗಳು ಪಡಿತರ ಸಾಮಾಗ್ರಿ ಪಡೆದುಕೊಂಡಿಲ್ಲ. ಅನ್ನಭಾಗ್ಯ ಯೋಜನೆಯಡಿ ಪಡಿತರ ಕೇಂದ್ರಗಳಿಗೆ ರೇಷನ್ ಕಾರ್ಡ್ ದಾರರು ಬಾರದ ಹಿನ್ನೆಲೆಯಲ್ಲಿ ಇಂತಹ ಕುಟುಂಬಗಳಿಗೆ ಪಡಿತರ ಸಾಮಾಗ್ರಿ ಅಗತ್ಯವಿಲ್ಲ ಅನ್ನುವುದು ಮನಗಂಡು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಈ ಕ್ರಮವನ್ನ ಕೈಗೊಂಡಿದೆ.

ಸರ್ಕಾರದ ನಿಯಮದ ಪ್ರಕಾರ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳು ಕನಿಷ್ಠ ಮೂರು ತಿಂಗಳಿಗೆ ಒಮ್ಮೆಯಾದರೂ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಸಾಮಾಗ್ರಿಗಳನ್ನ ಪಡೆಯಬೇಕು. ಒಂದೊಮ್ಮೆ ಮೂರು ತಿಂಗಳಿಗೊಮ್ಮೆ ಪಡಿತರ ಸಾಮಾಗ್ರಿ ಪಡೆಯದೇ ಇದ್ದರೆ, ಅಂತಹ ರೇಷನ್ ಕಾರ್ಡ್ ಗಳನ್ನ ರದ್ದುಪಡಿಸಲಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply