Varthur Santhosh : ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಳಿಕ ಅರೆಸ್ಟ್ ಆಗ್ತಾರಾ ನಟ ದರ್ಶನ್.! ದರ್ಶನ್ ಕೊರಳಲ್ಲಿರುವುದು ಹುಲಿ ಉಗುರಾ.?

Varthur Santhosh : ಬಿಗ್ ಬಾಸ್ ಕನ್ನಡ ಸೀಸನ್ ೧೦ ರ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರನ್ನು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪದಡಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಮಾಡಿದ್ದರು. ವರ್ತೂರು ಸಂತೋಷ್ ಅವರು ಅರೆಸ್ಟ್ ಆದ ಬೆನ್ನಲ್ಲೇ ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರಿಗೂ ಇದೀಗ ಸಂಕಷ್ಟ ಎದುರಾಗಿದೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : RBI New Updates : ಬ್ಯಾಂಕ್ ನಲ್ಲಿ ಸಾಲ ಮಾಡಿರುವವರಿಗೆ ಸಿಹಿಸುದ್ಧಿ.! ಆರ್ ಬಿಐನಿಂದ ಹೊಸ ನಿಯಮ ಜಾರಿಗೆ

ಹೌದು, ನಟ ಡಿಬಾಸ್ ದರ್ಶನ್ ಅವರು ಕೂಡ ಕೆಲ ಫೋಟೋಗಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಹಾಗು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಖಾಸಗಿ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದ್ದು, ನಟ ದರ್ಶನ್ ಅವರು ಕೂಡ ಅರೆಸ್ಟ್ ಆಗುತ್ತಾರೆ. ದರ್ಶನ್ ಅವರ ಬಳಿ ಕೂಡ ಹುಲಿ ಉಗುರಿನ ಪೆಂಡೆಂಟ್ ಇದೆ ಎಂದು ಅದರ ಫೋಟೋ, ವಿಡಿಯೋಗಳನ್ನ ಬಿತ್ತರಿಸಿದ್ದು, ದರ್ಶನ್ ಅವರ ಬಗ್ಗೆ ಪರ-ವಿರೋಧ ಚರ್ಚೆ ಆರಂಭವಾಗಿದೆ.

Whatsapp Group Join
Telegram channel Join

ಕಾನೂನು ಎಲ್ಲರಿಗೂ ಒಂದೇ ಅಲ್ವವೂ.? ನಟ ದರ್ಶನ್ ಅವರನ್ನು ಕೂಡ ಅರೆಸ್ಟ್ ಮಾಡಬೇಕೆನ್ನುವುದು ಕೆಲವರು ವಾದಿಸುತ್ತಿದ್ದಾರೆ. ಅರಣ್ಯ ಇಲಾಖೆ ರಾಯಭಾರಿಯಾಗಿದ್ದ ದರ್ಶನ್ ಅವರಿಗೆ ಇದೆಲ್ಲಾ ಅರಿವಿಲ್ಲವಾ.? ಪ್ರಾಣಿಗಳ ಬಗ್ಗೆ ಕಾಳಜಿ ಹೊಂದಿರುವ ಡಿಬಾಸ್ ಕಾನೂನು ವಿರುದ್ಧವಾಗಿ ನಡೆದುಕೊಂಡರಾ.? ಎನ್ನುವ ಸುದ್ಧಿಯನ್ನ ಪ್ರಸಾರ ಮಾಡುತ್ತಿದ್ದಾರೆ. ಆದರೆ ದರ್ಶನ್ ಅವರು ಧರಿಸಿರುವುದು ಹುಲಿ ಉಗುರು ಇರುವ ಲಾಕೆಟಾ.? ಅಥವಾ ಬಂಗಾರದ ಲಾಕೆಟಾ.? ಎನ್ನುವದು ಇನ್ನಷ್ಟೇ ತಿಳಿಯಬೇಕಿದೆ.

ಇದನ್ನೂ ಕೂಡ ಓದಿ : Loan waiver : ಬೆಳೆ ಸಾಲ ಪಡೆದಿರುವ ರೈತರಿಗೆ ಸಿಹಿಸುದ್ಧಿ.! ಬೆಳೆ ಪರಿಹಾರ ಹಣ ರೈತರ ಖಾತೆಗೆ ನೇರ ಜಮಾ.!

ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಿಂದಲೇ ಸ್ಪರ್ಧಿಯೊಬ್ಬರನ್ನ ಅರೆಸ್ಟ್ ಮಾಡಲಾಗಿದೆ. ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿದ್ದರು ಎನ್ನುವ ಆರೋಪದ ಮೇಲೆ ಬಂಧನವಾಗಿದೆ. ಸದ್ಯ ಬಿಗ್ ಬಾಸ್ ಮನೆಯಿಂದ ಹೊರ ಕರೆತಂದು ಅರೆಸ್ಟ್ ಮಾಡಲಾಗಿದೆ. ರಾಮೋಹಳ್ಳಿ ಅರಣ್ಯ ಅಧಿಕಾರಿಗಳಿಂದ ವರ್ತೂರು ಸಂತೋಷ್ ಬಂಧನವಾಗಿದ್ದು, ಸದ್ಯ ರಾಮೋಹಳ್ಳಿ ಅರಣ್ಯ ಅಧಿಕಾರಿಗಳ ಕಸ್ಟಡಿಯಲ್ಲಿದ್ದಾರೆ. ಇದೀಗ ದರ್ಶನ್ ಅವರ ಹೆಸಾರು ಕೂಡ ಕೇಳಿ ಬಂದಿದ್ದು, ಈ ಪ್ರಕರಣ ಎಲ್ಲಿಗೆ ಹೋಗಿ ಮುಟ್ಟುತ್ತೋ.? ಕಾದು ನೋಡಬೇಕಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply