ನಟ, ನಿರ್ದೇಶಕ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ, ಪರಭಾಷೆ ಚಿತ್ರರಂಗದಲ್ಲೂ 100 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಪರಭಾಷೆಯಲ್ಲಿ 100 ಕೋಟಿ ಕ್ಲಬ್ ಸೇರಿದ 2ನೇ ಕನ್ನಡ ಚಿತ್ರ ಇದಾಗಿದೆ. ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಮಾತ್ರವಲ್ಲದೇ ಬಾಲಿವುಡ್ ನಲ್ಲೂ ಸಹ ದಾಖಲೆ ರೀತಿಯಲ್ಲಿ ಹಣದ ಹೊಳೆ ಹರಿದು ಬರುತ್ತಿದೆ. ಹಾಗಾಗಿ ಸಹಜವಾಗಿಯೇ ಬಾಲಿವುಡ್ ಚಿತ್ರ ರಂಗವನ್ನು ನಿದ್ದೆಗೆಡಿಸಿದೆ ‘ಕಾಂತಾರ’.
ಈ ಹಿಂದೆ ಇದೇ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಕೆಜಿಎಫ್ 2 ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಧೂಳ್ ಎಬ್ಬಿಸಿತ್ತು. 500 ಕೋಟಿಗೂ ಅಧಿಕ ಹಣವನ್ನು ಕೆಜಿಎಫ್2 ಗಳಿಕೆ ಮಾಡಿತ್ತು. ಇದೀಗ ಅದೇ ಬ್ಯಾನರ್ ನಲ್ಲಿ ನಿರ್ಮಾಣವಾದ ‘ಕಾಂತಾರ’ ಸಿನಿಮಾ ಕೂಡ ಮಗದೊಂದು ದಾಖಲೆ ಬರೆಯಲು ಸಜ್ಜಾಗಿದೆ. ಬಾಲಿವುಡ್ ನಲ್ಲೂ ಚಿತ್ರ ಸಖತ್ ಆಗಿ ಪ್ರದರ್ಶನ ಕಾಣುತ್ತಿದೆ. ವೀಕೆಂಡ್ನಲ್ಲಂತೂ ಹಣದ ಹೊಳೆಯೇ ಹರಿಯುತ್ತಿದೆ.
ಒಂದು ಕಡೆ ಗಳಿಕೆಯಲ್ಲಿ ‘ಕಾಂತಾರ’ ಚಿತ್ರ ದಾಖಲೆ ಬರೆದಿದ್ರೆ, ಮತ್ತೊಂದು ಕಡೆ ನಟ ರಿಷಬ್ ಶೆಟ್ಟಿ ಯವರಿಗೆ ಅಪರೂಪದ ಗಳಿಕೆಯೊಂದು ಕೂಡಿ ಬಂದಿದೆ. ‘ಕಾಂತಾರ’ ಚಿತ್ರ ನೋಡಿ ಅಚ್ಚರಿ ಎನ್ನುವಂತೆ ರಿಷಬ್ ಶೆಟ್ಟಿ ಅವರಿಗೆ ಕರೆ ಮಾಡಿದ್ದರು ಸೂಪರ್ ಸ್ಟಾರ್ ರಜನಿಕಾಂತ್. ಅದೊಂದು ಅನಿರೀಕ್ಷಿತ ಕರೆ ಆಗಿದ್ದರಿಂದ ನಟ, ನಿರ್ದೇಶಕ ರಿಷಬ್ ಕೂಡ ಅಚ್ಚರಿ ಪಟ್ಟಿದ್ದರು. ಸೂಪರ್ ಸ್ಟಾರ್ ಒಬ್ಬರು ಚಿತ್ರ ನೋಡಿ, ಕರೆ ಮಾಡಿದ್ದರಿಂದ ಅವರಿಗೆ ಕೃತಜ್ಞತೆ ಹೇಳುವುದಕ್ಕಾಗಿ ರಿಷಬ್ ಶೆಟ್ಟಿ ಕೂಡ ರೆಡಿಯಾಗಿದ್ದರು. ಅಷ್ಟರಲ್ಲೇ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ ರಜನಿಕಾಂತ್. ಸ್ವತಃ ರಿಷಬ್ ಶೆಟ್ಟಿ ಅವರನ್ನು ತಮ್ಮ ಮನೆಗೇ ಕರೆದು ಸನ್ಮಾನ ಕೂಡ ಮಾಡಿದ್ದಾರೆ.
‘ಕಾಂತಾರ’ ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ, ಕೆಲ ಹೊತ್ತು ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ಮಾತನಾಡಿ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕೃತಜ್ಞತೆಯನ್ನೂ ಕೂಡ ಹೇಳಿದ್ದಾರೆ. ‘ಕಾಂತಾರ’ ಮೇಕಿಂಗ್, ಅದನ್ನು ಹೇಳಿದ ರೀತಿ, ತೋರಿಸಿದ ಕ್ರಮದ ಬಗ್ಗೆ ಕೂಡ ರಜನಿಕಾಂತ್ ಈ ಸಂದರ್ಭದಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ರಜನಿಕಾಂತ್ ಅವರ ಮಾತು ಕೇಳಿ ರಿಷಬ್ ಶೆಟ್ಟಿ ಕೂಡ ಫುಲ್ ಖುಷ್ ಆಗಿದ್ದಾರೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.
- Pedicure : ಮನೆಯಲ್ಲಿಯೇ ಪೆಡಿಕ್ಯೂರ್ ಮಾಡಿ, ಸುಂದರವಾದ ಪಾದ ನಿಮ್ಮದಾಗಿಸಿಕೊಳ್ಳಿ
- Donkey Milk : ಕತ್ತೆ ಹಾಲು ಒಂದು ಲೀಟರ್ಗೆ ₹5,000/-..? ಕತ್ತೆ ಹಾಲು ಏಕೆ ಇಷ್ಟೊಂದು ದುಬಾರಿ.? ಕತ್ತೆ ಹಾಲಿನ ಉಪಯೋಗವೇನು.?
- ಬ್ಯಾಂಕ್ ಖಾತೆ ಇದ್ದರೆ ಸಾಕು ನಿಮಗೆ ಸಿಗುತ್ತೆ 2 ಲಕ್ಷ.! – Suraksha Bima Yojana
- Gold Rate : ಇಂದಿನ ಗೋಲ್ಡ್ ರೇಟ್ ಇಳಿಕೆ ಕಂಡಿದೆಯಾ.? ಎಷ್ಟಾಗಿದೆ ನೋಡಿ ಇವತ್ತಿನ ಚಿನ್ನದ ಬೆಲೆ.?
- MGNREGA : ರೈತರಿಗೆ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ 2 ಲಕ್ಷ ಸಹಾಯಧನಕ್ಕಾಗಿ ಅರ್ಜಿ | ಗ್ರಾಮೀಣ ರೈತರಿಗೆ ಗುಡ್ ನ್ಯೂಸ್.!