ದರ್ಶನ್ ಥರಾ ನನಗೂ ಬೇಲ್ ಕೊಡಿ – ನೇಹಾ ಕೊಲೆ ಆರೋಪಿ ಫಯಾಜ್‍ ಮೊರೆ!

ನಟ ದರ್ಶನ್ ಒಳ್ಳೇದಕ್ಕೆ ಉದಾಹರಣೆ ಆಗಿದ್ದಾರೋ ಇಲ್ವೋ ಗೊತ್ತಿಲ್ಲ.. ಅನೇಕ ಅಪರಾಧಿಗಳಿಗೆಗೆ ಬೆಸ್ಟ್ ಉದಾಹರಣೆ ಆಗಿದ್ದಾರೆ. ಇಲ್ಲೊಬ್ಬ ಕೊಲೆ ಆರೋಪಿ ದರ್ಶನ್ ಗೆ ಕೊಟ್ಟ ರೀತಿಯಲ್ಲಿ ನನಗೂ ಬೇಲ್ ಕೊಡಿ ಎಂದಿದ್ದಾನೆ.

ಇಡೀ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹುಬ್ಬಳ್ಳಿಯ (hubballi )ನೇಹಾ ಹತ್ಯೆ ಕೇಸ್ ನ ಆರೋಪಿ ಫಯಾಜ್‍, ಜಾಮೀನಿಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಅರ್ಜಿಯಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಹೇಗೆ ಜಾಮೀನು ನೀಡಲಾಗಿದೆಯೋ ಹಾಗೇ ನನಗೂ ನೀಡಿ ಎಂದು ಬೇಡಿಕೆ ಇಟ್ಟಿದ್ದಾನೆ.

ಕೇಸ್ ನ ವಿಚಾರಣೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆಗಸ್ಟ್ 4ರಂದು ಜಾಮೀನು ಅರ್ಜಿ ಅಂತಿಮ ಆದೇಶವನ್ನು ನ್ಯಾಯಾಲಯ ನೀಡಲಿದೆ.

ಇನ್ನು ಫಯಾಜ್ ಮನವಿ ಬಗ್ಗೆ ಕೊಲೆಯಾದ ನೇಹಾ ತಂದೆ ನಿರಂಜನ್ ಅಸಮಾಧಾನ ಹೊರಹಾಕಿದ್ದಾರೆ. ದರ್ಶನ್ ತಮ್ಮ ನಟನೆ ಮತ್ತು ಒಳ್ಳೆಯ ಕಾರ್ಯದಿಂದ ಜನರಿಗೆ ಮಾದರಿ ಆಗಬೇಕಿತ್ತು. ಆದರೆ ಹತ್ಯೆ ಪ್ರಕರಣದಲ್ಲಿ ಇತರೇ ಆರೋಪಿಗಳಿಗೆ ಮಾದರಿಯಾಗಿದ್ದು ನಿಜಕ್ಕೂ ನೋವು ತಂದಿದೆ. ನನ್ನ ಮಗಳಿಗೆ ಆದ ಅನ್ಯಾಯ ಯಾರಿಗೂ ಆಗಬಾರದು. ನನ್ನ ಮಗಳಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ.

ಕಳೆದ ವರ್ಷ ಏಪ್ರಿಲ್.18ರ ಸಂಜೆ 4:45ರ ಸುಮಾರಿಗೆ ಫಯಾಜ್ ಎಂಬಾತ, ವಿದ್ಯಾರ್ಥಿನಿ ನೇಹಾ ಹಿರೇಮಠ ಕಾಲೇಜಿನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆಕೆಯ ಕುತ್ತಿಗೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದ. ಬಳಿಕ ಆರೋಪಿ ಕಿಮ್ಸ್ ಆಸ್ಪತ್ರೆಯ ಹಿಂಬದಿ ಅವಿತು ಕುಳಿತಿದ್ದ, ಆತನನ್ನು ಕೂಡಲೇ ಬಂಧಿಸಲಾಗಿತ್ತು.

ಇನ್ನು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಬೇಲ್‌ ತೀರ್ಪು ಹೊರಬರುವ ಮುನ್ನ ನಟ ದರ್ಶನ್‌ ಪತ್ನಿ ವಿಜನಯಲಕ್ಷ್ಮಿ ಜೊತೆ ಶಕ್ತಿ ಪೀಠಗಳಲ್ಲಿ ಒಂದಾದ ಕಾಮಾಕ್ಯ ದೇವಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಇದೀಗ ನಟ ದರ್ಶನ್ ಬೆನ್ನಿಗೆ ನಿಂತಿರೋ ಪತ್ನಿ ವಿಜಯಲಕ್ಷ್ಮೀ ಮೋಹಕ ತಾರೆ ರಮ್ಯಾಗೆ ಟಾಂಗ್ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮಾರ್ಮಿಕವಾಗಿ ರಮ್ಯಾ ವಿರುದ್ಧ ಪೋಸ್ಟ್ ಹಾಕಿರೋ ವಿಜಯಲಕ್ಷ್ಮೀ ಕೌಂಟರ್ ನೀಡಿದ್ದಾರೆ.

ಮೊನ್ನೆಯಷ್ಟೇ ದರ್ಶನ್ ಮತ್ತು ವಿಜಯಲಕ್ಷ್ಮೀ ಶಕ್ತಿಪೀಠ ಕಾಮಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಈ ಭೇಟಿಯ ಫೋಟೋವನ್ನು ವಿಜಯಲಕ್ಷ್ಮೀ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಅವರು ಬರೆದ ಸಂದೇಶವು ಎಲ್ಲರ ಗಮನ ಸೆಳೆದಿದೆ. ‘ಹೆಚ್ಚಿನ ಜನರು ನಿಮ್ಮನ್ನು ಕೆಳಗಿಳಿಸಲು ಪ್ರಯತ್ನಿಸಿದರೆ, ದೇವರು ನಿಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಾನೆ. ದೇವರು ನಿಮ್ಮನ್ನು ಆಶೀರ್ವದಿಸಲಿ.’ ಎಂದು ಬರೆದುಕೊಂಡಿದ್ದಾರೆ.

ಡಿ ಬಾಸ್ ಅಭಿಮಾನಿಗಳು ಅವಾಚ್ಯವಾಗಿ ರಮ್ಯಾಗೆ ಕಮೆಂಟ್ಸ್ ಮಾಡಿದ್ದು, ಇದ್ರಿಂದ ರೊಚ್ಚಿಗೆದ್ದಿದ್ದ ರಮ್ಯಾ ಪೊಲೀಸ್ ಕಂಪ್ಲೇಂಟ್ ನೀಡಿದ್ದಾರೆ. ರೇಣುಕಾಸ್ವಾಮಿ ಕೇಸ್ ನಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗಬೇಕು. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದ್ದರು. ಇದಕ್ಕೆ ಡಿ ಬಾಸ್ ಸೆಲೆಬ್ರಿಟಿಗಳು ರೊಚ್ಚಿಗೆದ್ದು ಕಮೆಂಟ್ಸ್ ಮಾಡಿದ್ದರು.

ಭಾರತದ 51 ಶಕ್ತಿಪೀಠಗಳಲ್ಲಿ ಅತ್ಯಂತ ಶಕ್ತಿಶಾಲಿ ಎಂದು ನಂಬಲಾಗುವ ಕಾಮಾಕ್ಯ ದೇವಿ ದೇಗುಲಕ್ಕೆ ದರ್ಶನ್ ಜೈಲಿನಲ್ಲಿದ್ದಾಗ ಭೇಟಿ ಕೊಟ್ಟಿದ್ದರು. ಈ ವೇಳೆ ಹರಕೆ ಸಹ ಹೊತ್ತಿದ್ದರು. ಅಂದು ವಿಜಯಲಕ್ಷ್ಮೀ ಮಾಡಿದ್ದ ಪಾರ್ಥನೆ ಫಲಿಸಿದ ಪರಿಣಾಮ ದರ್ಶನ್ ಗೆ ಬೇಲ್ ಸಿಕ್ಕಿತ್ತು. ಇದೀಗ ಪತಿಯನ್ನು ಕರೆದುಕೊಂಡು ಹೋಗಿ ಕಾಮಾಕ್ಯ ದೇವಿ ದರ್ಶನ ಪಡೆದಿದ್ದಾರೆ. ಸುಪ್ರೀಂ ನಲ್ಲಿ ಬೇಲ್ ರದ್ಧತಿ ಟೆನ್ಷನ್ ಇರೋ ಕಾರಣ ಈ ಬಾರಿಯೂ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

Leave a Comment