ಮೇಷ ರಾಶಿ : ಇಂದು ಆನಂದವಾಗಿ ದಿನ ಕಳೆಯಲಿದ್ದೀರಿ. ಉಗ್ರ ಮನಸ್ಥಿತಿ ಹಾಗೂ ಆಕ್ರಮಣಕಾರಿ ಮಾತುಗಾರಿಕೆ ನಿಮ್ಮಲ್ಲಿರುತ್ತದೆ. ಅದನ್ನು ನಿಯಂತ್ರಿಸಿಕೊಳ್ಳಿ. ಕಚೇರಿಯಲ್ಲಿ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳ ಸಹಕಾರ ಸಿಗಲಿದೆ.
ವೃಷಭ ರಾಶಿ : ಮನಸ್ಸಿನಲ್ಲಿ ಹತಾಶೆಯ ಭಾವನೆ ತುಂಬಿರುತ್ತದೆ, ಇದರಿಂದ ಖಿನ್ನತೆ ಆವರಿಸುತ್ತದೆ. ಕುಟುಂಬ ಸದಸ್ಯರೊಂದಿಗೆ ಕಲಹ, ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ಅಹಂನಿಂದ ಇತರರ ಮನಸ್ಸಿಗೆ ನೋವಾಗದಂತೆ ಎಚ್ಚರ ವಹಿಸಿ.
ಮಿಥುನ ರಾಶಿ : ಇಂದು ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಪ್ರತಿ ಕಾರ್ಯವನ್ನೂ ದೃಢ ನಿಶ್ಚಯದಿಂದ ಮಾಡಲಿದ್ದೀರಿ. ಆದ್ರೆ ಕೋಪ ಹೆಚ್ಚಾಗಿರುತ್ತದೆ. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಪ್ರಯತ್ನಿಸಿ.
ಕರ್ಕ ರಾಶಿ : ಇಂದು ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುತ್ತವೆ. ಗೃಹಸ್ಥ ಜೀವನ ಆನಂದಮಯವಾಗಿರುತ್ತದೆ. ನೌಕರಿ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣಲಿದ್ದೀರಿ. ಹಿರಿಯ ಅಧಿಕಾರಿಗಳಿಂದ ಲಾಭವಿದೆ.
ಸಿಂಹ ರಾಶಿ : ನಿಗದಿತ ಕೆಲಸಗಳು ಕೊಂಚ ವಿಳಂಬವಾಗಿ ಪೂರ್ಣಗೊಳ್ಳುತ್ತವೆ. ಆರ್ಥಿಕ ಆಯೋಜನೆ ಯಶಸ್ವಿಯಾಗಲಿದೆ. ವಿದ್ಯಾರ್ಥಿಗಳಿಗೆ ಓದಿನ ವಿಷಯದಲ್ಲಿ ಮಿಶ್ರ ಫಲವಿದೆ.
ಕನ್ಯಾ ರಾಶಿ : ಇಂದು ನಿಮಗೆ ಶುಭ ದಿನ. ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯ ಉತ್ತಮವಾಗಿರುತ್ತದೆ, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ.
ತುಲಾ ರಾಶಿ : ಇದು ಅಧಿಕ ಚಿಂತೆ ಮತ್ತು ಭಾವುಕತೆಯಿಂದಾಗಿ ಮನಸ್ಸು ವ್ಯಗ್ರವಾಗಿರುತ್ತದೆ. ಅಸ್ವಸ್ಥತೆಯ ಅನುಭವವಾಗಲಿದೆ. ವಾದ-ವಿವಾದಗಳಿಂದ ದೂರವಿರಿ. ಕೋರ್ಟು, ಕಚೇರಿ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ.
ವೃಶ್ಚಿಕ ರಾಶಿ : ಇಂದು ನಕಾರಾತ್ಮಕತೆ ಹೆಚ್ಚಾಗಿರುತ್ತದೆ. ಆಯಾಸ ಮತ್ತು ಆಲಸ್ಯದಿಂದ ಸ್ಪೂರ್ತಿಯ ಅಭಾವವಿರುತ್ತದೆ. ದಿನದ ಆರಂಭ ಉತ್ತಮವಾಗಿರುವುದಿಲ್ಲ. ಉದ್ಯೋಗದಲ್ಲಿ ಅಡ್ಡಿ ಆತಂಕಗಳು ಎದುರಾಗಬಹುದು.
ಧನು ರಾಶಿ : ಮನೆಯಲ್ಲಿ ಆನಂದ ಮತ್ತು ಉತ್ಸಾಹದ ವಾತಾವರಣವಿರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಆದಾಯ ವೃದ್ಧಿಸಲಿದೆ. ಪದೋನ್ನತಿ ಅವಕಾಶ ಸಿಗಬಹುದು. ತಾಯಿಯಿಂದ ಲಾಭವಾಗಲಿದೆ.
ಮಕರ ರಾಶಿ : ಆವೇಶ ಮತ್ತು ಉಗ್ರತೆಯಿಂದ ಯಾರೊಂದಿಗೂ ಜಗಳವಾಗದಂತೆ ಎಚ್ಚರ ವಹಿಸಿ. ಆರೋಗ್ಯ ಸ್ವಲ್ಪ ಏರುಪೇರಾಗಬಹುದು. ಕುಟುಂಬದಲ್ಲಿ ಜಗಳವಾಗುವ ಸಾಧ್ಯತೆ ಇದೆ. ಆದಾಯ ಕಡಿಮೆ ಮತ್ತು ಖರ್ಚು ಹೆಚ್ಚಾಗಲಿದೆ.
ಕುಂಭ ರಾಶಿ : ಸಾಮಾಜಿಕವಾಗಿ ಗೌರವಕ್ಕೆ ಧಕ್ಕೆ ಬರಬಹುದು. ಮನೆಯಲ್ಲಿ ಆಸ್ತಿಗೆ ಸಂಬಂಧಪಟ್ಟ ವಿಷಯದಲ್ಲಿ ಎಚ್ಚರ ವಹಿಸಿ. ವಿದ್ಯೆ ಪ್ರಾಪ್ತಿಗೆ ಅನುಕೂಲಕರ ದಿನ. ಆರ್ಥಿಕ ಯೋಜನೆ ಕೈಗೂಡಲಿದೆ.
ಮೀನ ರಾಶಿ : ವಿಚಾರ ಮತ್ತು ವ್ಯವಹಾರದಲ್ಲಿ ಭಾವುಕತೆ ಹೆಚ್ಚಾಗಿರುತ್ತದೆ. ಕುಟುಂಬದವರು ಮತ್ತು ಮಿತ್ರರೊಂದಿಗೆ ಆನಂದವಾಗಿ ಕಾಲ ಕಳೆಯಲಿದ್ದೀರಿ. ತನು-ಮನದಲ್ಲಿ ಉತ್ಸಾಹ ತುಂಬಿರುತ್ತದೆ.