5 Guarantee of Congress Govt : ನಮಸ್ಕಾರ ಸ್ನೇಹಿತರೇ, 2023ರ ಜಿದ್ದಾಜಿದ್ದಿನ ಕಣವಾಗಿದ್ದ ಕರ್ನಾಟಕ ವಿಧಾನಸಭಾ ಎಲೆಕ್ಷನ್ ನಲ್ಲಿ ಅಂತಿಮವಾಗಿ ಕಾಂಗ್ರೆಸ್ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ತೆರೆ ಎಳೆದಿದೆ. ಹೌದು, ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳು ಕೂಡ ಪ್ರಣಾಳಿಕೆಯಲ್ಲಿ ಜಾರಿಗೆ ತರುವ ಯೋಜನೆಗಳ ಅಸ್ತ್ರವನ್ನಿಟ್ಟುಕೊಂಡು ಭರ್ಜರಿ ಪ್ರಚಾರವನ್ನ ಈ ಹಿಂದೆ ಮಾಡಿದ್ದವು.ಅಂತಿಮವಾಗಿ ಕಾಂಗ್ರೆಸ್ ಪಕ್ಷವು ಇದೀಗ ಬಹುಮತದೊಂದಿಗೆ ಜನಸಾಮಾನ್ಯರ ಬೆಂಬಲ ಪಡೆದು ಸರಕಾರವನ್ನ ರಚನೆ ಮಾಡಿದೆ.
ಇದನ್ನೂ ಕೂಡ ಓದಿ : ಎಲ್ಲಾ ಬಿಪಿಎಲ್, ಎಪಿಎಲ್ ಹಾಗು ಅಂತ್ಯೋದಯ ರೇಷನ್ ಕಾರ್ಡ್ ದಾರರಿಗೆ 10 ಕೆಜಿ ಅಕ್ಕಿ, ಜೋಳ, ರಾಗಿ ಉಚಿತ
ಇದರ ಬೆನ್ನಲ್ಲೇ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಘೋಷಣೆ ಮಾಡಿದ್ದ ಪ್ರಣಾಳಿಕೆಯಲ್ಲಿ ಐದು ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನ ಜಾರಿಗೆ ತರುವುದರ ಬಗ್ಗೆ ಇದೀಗ ಮಾಧ್ಯಮದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ಹೌದು, ಈಗಾಗಲೇ ಹಲವು ಜನಸಾಮಾನ್ಯರು ಹಾಗು ಮಾಧ್ಯಮದವರು ಐದು ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಚರ್ಚೆ ಜೋರಾಗಿ ನಡೆಸಿದ್ದು, ಇದೀಗ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗು ಏಕೈಕ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಈ ಐದು ಯೋಜನೆಗಳನ್ನ ಜಾರಿಗೆ ತರುವುದರ ಕುರಿತು ಇಂದು ಅಧೀಕೃತವಾಗಿ ಮಾಹಿತಿ ಕೊಟ್ಟಿದ್ದಾರೆ.
ಇದನ್ನೂ ಕೂಡ ಓದಿ : LPG Gas Cylinder ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ 4 ಭರ್ಜರಿ ಸುದ್ಧಿ
ಖಾಸಗಿ ಸುದ್ಧಿ ಮಾಧ್ಯಮಗಳ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಿದ್ಧರಾಮಯ್ಯ ಹಾಗು ಡಿಕೆ ಶಿವಕುಮಾರ್ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ನಮಗೆ ಐದು ವರ್ಷಗಳ ಕಾಲಾವಕಾಶವನ್ನ ಇದೀಗ ಪಕ್ಷಾತೀತವಾಗಿ ರಾಜ್ಯದ ಜನತೆ ಕೊಟ್ಟಿದ್ದಾರೆ. ಅದನ್ನು ನಾವು ಜನಸೇವೆಗಾಗಿ ಸರಿಯಾಗಿ ಬಳಸಿಕೊಳ್ಳುತ್ತೇವೆ. ಅದಕ್ಕಾಗಿ ಶೀಘ್ರವೇ ಇದೀಗ ಮೊದಲ ಕ್ಯಾಬಿನೆಟ್ ನಲ್ಲಿಯೇ ಈ ಐದು ಯೋಜನೆಗಳು, ಅಂದ್ರೆ ಮೊದಲನೆಯ ಗ್ಯಾರಂಟಿ ಏನಂದ್ರೆ, ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಪ್ರತಿ ಮನೆಗೂ ಕೂಡ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ. ಎರಡನೇಯ ಗ್ಯಾರಂಟಿ ಏನಂದ್ರೆ, ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬದ ಯಜಮಾನಿಗೆ 3 ತಿಂಗಳಿಗೆ ₹2,000/- ಸಹಾಯಧನ. ಮೂರನೇಯ ಗ್ಯಾರಂಟಿ ಏನಂದ್ರೆ, ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 10 ಕೆಜಿ ಪ್ರತಿ ಸದಸ್ಯನಿಗೆ ಆಹಾರಧಾನ್ಯ. ನಾಲ್ಕನೇಯ ಗ್ಯಾರಂಟಿ ಏನಂದ್ರೆ, ರಾಜ್ಯದಾದ್ಯಂತ ಎಲ್ಲ ಮಹಿಳೆಯರಿಗೂ ಕೂಡ ಸರಕಾರೀ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುವುದಕ್ಕೆ ಅವಕಾಶ.
ಇದನ್ನೂ ಕೂಡ ಓದಿ : PM Kisan 14th Installment : ಮೇ 30 ರೊಳಗೆ ನೀವು ಈ ಕೆಲಸ ಮಾಡಿಲ್ಲಾಂದ್ರೆ 6,000/- ಸಿಗಲ್ವಾ.!
ಇನ್ನು ಐದನೇಯ ಗ್ಯಾರಂಟಿ ಏನಂದ್ರೆ, ರಾಜ್ಯದಲ್ಲಿರುವ ಎಲ್ಲಾ ನಿರುದ್ಯೋಗಿ ಯುವಕ-ಯುವತಿಯರಿಗೆ ಅಂದ್ರೆ ಪದವೀಧರರಿಗೆ ₹3,000/- ಹಾಗು ಡಿಪ್ಲೋಮ ಪದವೀಧರರಿಗೆ ₹1,500/- ರೂಪಾಯಿ ಇದೀಗ ಅನುಕೂಲತೆ ಮಾಡಿಕೊಡುವ ಸಲುವಾಗಿ ನಿರುದ್ಯೋಗಿ ಭತ್ಯೆಯನ್ನ ಈ ಹಿಂದೆ ಗ್ಯಾರಂಟಿಗಳನ್ನ ಘೋಷಣೆ ಮಾಡಿತ್ತು. ಈ ಎಲ್ಲಾ ಗ್ಯಾರಂಟಿಗಳನ್ನ ಇದೀಗ ಮೊದಲನೇಯ ಕ್ಯಾಬಿನೆಟ್ ನಲ್ಲಿಯೇ ಘೋಷಣೆ ಮಾಡಲಾಗುತ್ತಿದೆ. ಈ ಎಲ್ಲಾ ಯೋಜನೆಗಳಿಗೆ ಏನೆಲ್ಲಾ ಅರ್ಹತೆ ಹೊಂದಿರಬೇಕು? ಏನೆಲ್ಲಾ ಕಂಡೀಷನ್ ಗಳಿವೆ.? ಹಾಗು ಈ ಎಲ್ಲಾ ಯೋಜನೆಗಳ ಲಾಭವನ್ನ ಹೇಗೆ ಪಡೆದುಕೊಳ್ಳುವುದು ಎನ್ನುವುದರ ಕುರಿತು ಮೊದಲ ಕ್ಯಾಬಿನೆಟ್ ನಲ್ಲಿಯೇ ಸಂಪೂರ್ಣ ಮಾಹಿತಿ ನೀಡುತ್ತಾರೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..