ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 06-04-2018

ಮೇಷ ರಾಶಿ :- ಮಧ್ಯಾಹ್ನದ ನಂತರ ಕುಟುಂಬ ಸದಸ್ಯರು ಮತ್ತು ಒಡಹುಟ್ಟಿದವರೊಂದಿಗೆ ಆನಂದದಾಯಕವಾಗಿ ಸಮಯ ಕಳೆಯುತ್ತೀರಿ. ಪ್ರತಿಸ್ಪರ್ಧಿಯನ್ನು ಸೋಲಿಸುತ್ತೀರಿ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಪ್ರವಾಸ ಯೋಗವಿದೆ. ವೃಷಭ ರಾಶಿ :- ಇವತ್ತು ನಿಮಗೆ ಶುಭದಿನ. ಕಾರ್ಯಸಿದ್ಧಿಯಾಗಲಿದೆ, ಲಕ್ಷ್ಮಿ ಕಟಾಕ್ಷ ನಿಮ್ಮ ಮೇಲಿದೆ. ಶಾರೀರಿಕ ಮತ್ತು ಮಾನಸಿಕ ಸ್ಥಿತಿ ಉತ್ಸಾಹಮಯ ಮತ್ತು ಪ್ರಫುಲ್ಲತೆಯಿಂದ ಕೂಡಿರಲಿದೆ. ಹಾಗಾಗಿ ಪ್ರತಿ ಕಾರ್ಯವನ್ನೂ ಉತ್ಸಾಹದಿಂದ್ಲೇ ಮಾಡುತ್ತೀರಾ. ಮಿಥುನ ರಾಶಿ :- ಮನಸ್ಸು ವ್ಯಗ್ರವಾಗಿರಲಿದೆ. ಹಾಗಾಗಿ ಆಧ್ಯಾತ್ಮದ ಕಡೆಗೆ ಮನಸ್ಸು ಹರಿಸಿ, … Read more

ಇಲ್ಲಿದೆ ನೀತಾ ಅಂಬಾನಿ ಗ್ಲಾಮರ್ ಗುಟ್ಟು – ಜೀವನಶೈಲಿ

ಉದ್ಯಮಿ ಮುಖೇಶ್ ಅಂಬಾನಿ ಮಗ ಆಕಾಶ್ ಅಂಬಾನಿ ಮದುವೆ ತಯಾರಿಯಲ್ಲಿದ್ದಾರೆ. ಮುಖೇಶ್ ಅಂಬಾನಿ ಸೊಸೆ, ಮಗನ ಜೊತೆ ಪತ್ನಿ ನೀತಾ ಅಂಬಾನಿ ಬಗ್ಗೆ ಜನರಿಗೆ ಕುತೂಹಲ ಇದ್ದೇ ಇದೆ. ಉದ್ಯಮಿ ನೀತಾ ಅಂಬಾನಿ ಅನೇಕರ ರೋಲ್ ಮಾಡೆಲ್. 54ನೇ ವರ್ಷದಲ್ಲೂ ನೀತಾ ಅಂಬಾನಿ ಇಷ್ಟು ಫಿಟ್ ಆಗಿರಲು ಏನು ಕಾರಣ ಎಂಬುದು ಅನೇಕರ ಪ್ರಶ್ನೆ. ನೀತಾ ಅಂಬಾನಿ ತೂಕ ಇಳಿಸಿಕೊಳ್ಳುವ ಜೊತೆಗೆ ಮೊದಲಿಗಿಂತ ಸುಂದರವಾಗಿ ಕಾಣ್ತಿದ್ದಾರೆ. ಹೆಂಗಳೆಯರು ಒಮ್ಮೆ ನೀತಾ ನೋಡಿ ಹೊಟ್ಟೆ ಉರಿದುಕೊಳ್ಳುವುದಂತೂ ಸುಳ್ಳಲ್ಲ. ಆರೋಗ್ಯ … Read more

ಮತ್ತೆ ವೈರಲ್ ಆಗಿದೆ ಅಪಾಯಕಾರಿ ಕಾಂಡೋಮ್ ಚಾಲೆಂಜ್ – ಕನ್ನಡ ನ್ಯೂಸ್

ಎಪ್ರಿಲ್ ಫೂಲ್ ಹೆಸರಲ್ಲಿ ಶುರುವಾದ ಹೊಸ ಟ್ರೆಂಡ್ ಇದು. ‘ಕಾಂಡೋಮ್ ಸ್ನೊರ್ಟಿಂಗ್ ಚಾಲೆಂಜ್’. 2013ರಲ್ಲಿ ಮೊದಲ ಬಾರಿಗೆ ಇದು ಪ್ರಚಲಿತಕ್ಕೆ ಬಂದಿತ್ತು. ಈಗ ಮತ್ತೆ ವೈರಲ್ ಆಗಿದೆ. ತುಂಬಾನೇ ಅಪಾಯಕಾರಿಯಾದ, ವಿಚಿತ್ರ ಸವಾಲು ಇದು ಅನ್ನೋದರಲ್ಲಿ ಅನುಮಾನವೇ ಇಲ್ಲ. ಕಾಂಡೋಮ್ ಒಂದನ್ನು ಮೂಗಿನ ಹೊಳ್ಳೆಯ ಮೂಲಕ ಒಳಕ್ಕೆ ಎಳೆದುಕೊಂಡು ಬಾಯಿಯಿಂದ ಹೊರತೆಗೆಯುವ ಚಾಲೆಂಜ್ ಇದು. ಈ ಸವಾಲನ್ನು ಪೂರೈಸಿದವರೆಲ್ಲ ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು, ಜಾಲತಾಣಗಳಲ್ಲಿ ಅಪ್ಲೋಡ್ ಮಾಡ್ತಾರೆ. ಹೆಚ್ಹೆಚ್ಚು ಲೈಕ್ಸ್, ಸಬ್ ಸ್ಕ್ರೈಬ್ಸ್ ಹಾಗೂ ವ್ಯೂಸ್ … Read more

ಸಲ್ಮಾನ್ ದೋಷಿ: ತಲೆ ಮೇಲೆ ಕೈಹೊತ್ತು ಕುಳಿತ ನಿರ್ಮಾಪಕರು – ಬಾಲಿವುಡ್ ನ್ಯೂಸ್

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂದಿಸಿದಂತೆ ಸಲ್ಮಾನ್ ಖಾನ್ ದೋಷಿ ಎಂದು ಜೋದ್ಪುರ ಸಿಜೆಎಂ ಕೋರ್ಟ್ ಮಹತ್ವದ ತೀರ್ಪಿತ್ತಿದೆ. ವನ್ಯಜೀವಿ ಕಾಯ್ದೆ 51ರಡಿ ನ್ಯಾಯಮೂರ್ತಿ ದೇವಕುಮಾರ್ ಈ ತೀರ್ಪು ನೀಡಿದ್ದಾರೆ. ಸಲ್ಮಾನ್ ಖಾನ್ ಗೆ ಜೈಲು ಶಿಕ್ಷೆ ಪ್ರಮಾಣ ಪ್ರಕಟವಾಗಿಲ್ಲ. ಸದ್ಯ ಸಲ್ಮಾನ್ ಖಾನ್ ಗೆ ಜಾಮೀನು ಸಿಗುವ ಸಾಧ್ಯತೆ ಕಡಿಮೆಯಿದೆ. ಇಂದು ಸಲ್ಮಾನ್ ಜೈಲಿನಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ನಂತ್ರ ಸಲ್ಮಾನ್ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಸಲ್ಮಾನ್ ದೋಷಿ ಎಂಬ ತೀರ್ಪು ಸಲ್ಮಾನ್ ಖಾನ್ ವೈಯಕ್ತಿಕ ಜೀವನದ … Read more

ಐಪಿಎಲ್ ಗೂ ಮುನ್ನ ಆಪ್ತರನ್ನು ಕಳೆದುಕೊಂಡ ಶಿಖರ್ ಧವನ್ – ಕ್ರಿಕೆಟ್ ನ್ಯೂಸ್

ಐಪಿಎಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಗಬ್ಬರ್, ಶಿಖರ್ ಧವನ್ ಗೆ ಭಾರೀ ಹಿನ್ನೆಡೆಯಾಗಿದೆ. ಧವನ್ ಆಪ್ತರೊಬ್ಬರು ಧವನ್ ಬಿಟ್ಟು ದೂರ ಹೋಗಿದ್ದಾರೆ. ಧವನ್ ಸಾಕು ನಾಯಿ ಟೆರ್ರಿ ಈ ಜಗತ್ತು ಬಿಟ್ಟು ಹೋಗಿದ್ದಾಳೆ. ಈ ದುಃಖವನ್ನು ಗಬ್ಬರ್ ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ. ನನಗೆ ನನ್ನ ಟೆರ್ರಿ ನೆನಪಾಗ್ತಿದೆ. ಅದು ನನ್ನನ್ನು ಬಿಟ್ಟು ಹೋಗಿದೆ. ಅದ್ರ ನೆನಪಿನಲ್ಲಿಯೇ ನಾನು ನನ್ನ ಮುಂದಿನ ಜೀವನ ಕಳೆಯುತ್ತೇನೆ. ಅದು ಹೋದಲ್ಲೆಲ್ಲ ಖುಷಿ ಹಂಚಿತ್ತು. ಅದ್ರ ಜಾಗವನ್ನು ಮತ್ತ್ಯಾರು ತುಂಬಲೂ ಸಾಧ್ಯವಿಲ್ಲ. … Read more

ಸಂಗಾತಿ ಮೊಬೈಲ್ ಇಣುಕಿ ನೋಡಿದ್ರೆ ಜೈಲೂಟ ಗ್ಯಾರಂಟಿ – ಕನ್ನಡ ನ್ಯೂಸ್

ಸೌದಿ ಅರೇಬಿಯಾ ಬದಲಾಗ್ತಿದೆ. 2030 ರೊಳಗೆ ದೇಶವನ್ನು ಬದಲಿಸಲು ಪಣ ತೊಟ್ಟಿರುವ ಸರ್ಕಾರ ಮಹತ್ವದ ಹೆಜ್ಜೆಗಳನ್ನಿಡ್ತಿದೆ. ಇದೇ ನಿಟ್ಟಿನಲ್ಲಿ ಈಗ ಇನ್ನೊಂದು ಕಾನೂನು ಜಾರಿಗೆ ತಂದಿದೆ. ಪತಿ ಅಥವಾ ಪತ್ನಿ ಸಂಗಾತಿ ಫೋನಿನ ಮಾಹಿತಿಯನ್ನು ಕೆದಕಿದ್ರೆ ಕಠಿಣ ಶಿಕ್ಷೆ ಎದುರಾಗಲಿದೆ. ಪತಿ ಅಥವಾ ಪತ್ನಿ ಸಂಗಾತಿ ಫೋನಿನ ಬೇಹುಗಾರಿಕೆ ಮಾಡಿದ್ರೆ ಅಥವಾ ಮಾಡಿಸಿದ್ರೆ ಭಾರಿ ದಂಡದ ಜೊತೆ ಜೈಲು ಸೇರಬೇಕಾಗುತ್ತದೆ. ಹೊಸ ಸೈಬರ್ ಅಪರಾಧ ಕಾಯ್ದೆ ಅಡಿ ಇಂಥ ಯಾವುದೇ ಚಟುವಟಿಕೆ ಅಪರಾಧವಾಗಲಿದೆ. ಈ ಕಾನೂನು ಮುರಿದ … Read more

ನಿಮ್ಮ ರಾಶಿಗಳಿಗನುಗುಣವಾಗಿ ನಿತ್ಯ ಭವಿಷ್ಯ | 01-04-2018

ಮೇಷ ರಾಶಿ : ಮಾತು ಮತ್ತು ವ್ಯವಹಾರದಲ್ಲಿ ಸಂಯಮ ಇಟ್ಟುಕೊಳ್ಳುವುದು ಅತ್ಯಂತ ಅವಶ್ಯಕ. ಸಮಯ ನೋಡಿ, ಮಧ್ಯಾಹ್ನದ ನಂತರ ಹೊಸ ಕೆಲಸ ಪ್ರಾರಂಭ ಮಾಡುವುದು. ಉದ್ಯಮ ಕ್ಷೇತ್ರದಲ್ಲಿ ಜಾಗರೂಕರಾಗಿ ವ್ಯವಹರಿಸಿ. ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ವೃಷಭ ರಾಶಿ : ನಿಮ್ಮ ಬದುಕಿನಲ್ಲಿ ಬೇರೊಬ್ಬ ವ್ಯಕ್ತಿಯ ಪ್ರವೇಶವಾಗಲಿದೆ. ನೀವು ಬಳಸುವ ಭಾಷೆಯ ಬಗ್ಗೆ ಗಮನವಿರಲಿ, ಇಲ್ಲದೇ ಹೋದಲ್ಲಿ ವಿವಾದಕ್ಕೆ ಕಾರಣವಾಗಬಹುದು. ಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಗಮನವಿರಲಿ. ಮಿಥುನ ರಾಶಿ : ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ … Read more