ಅಖಾಡಕ್ಕಿಳಿದ ಬಿ.ಜೆ.ಪಿ. ಮಾಸ್ಟರ್ ಮೈಂಡ್, ಗೌಪ್ಯ ಸಭೆಯಲ್ಲಿ ರಣತಂತ್ರ – ಕರ್ನಾಟಕ ನ್ಯೂಸ್
ವಿಧಾನಸಭೆ ಚುನಾವಣೆ ಗೆಲುವಿಗೆ ಕಾರ್ಯತಂತ್ರ ರೂಪಿಸಲು ಬಿ.ಜೆ.ಪಿ. ಮಾಸ್ಟರ್ ಮೈಂಡ್ ರಾಜ್ಯಕ್ಕೆ ಆಗಮಿಸಿದ್ದಾರೆ. ತ್ರಿಪುರಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿ.ಜೆ.ಪಿ. ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ರಾಜ್ಯಕ್ಕೆ ಆಗಮಿಸಿ ರಣತಂತ್ರ ಹೆಣೆಯುತ್ತಿದ್ದಾರೆ. ರಾಜ್ಯ ಬಿ.ಜೆ.ಪಿ. ನಾಯಕರಿಗೇ ಗೊತ್ತಿಲ್ಲದಂತೆ ಆಯ್ದ ಪಕ್ಷದ ನಾಯಕರು ಮತ್ತು ಆರ್.ಎಸ್.ಎಸ್. ನಾಯಕರೊಂದಿಗೆ ಗೌಪ್ಯ ಸಭೆ ನಡೆಸಿರುವ ರಾಮ್ ಮಾಧವ್, ಪಕ್ಷದ ಪ್ರಚಾರ, ಚುನಾವಣಾ ತಂತ್ರಗಾರಿಕೆ, ವಿಪಕ್ಷಗಳ ಪ್ರಚಾರ, ಕಾರ್ಯಶೈಲಿ ಮೊದಲಾದವುಗಳ ಕುರಿತಾಗಿ ಸಮಾಲೋಚನೆ ನಡೆಸಿದ್ದಾರೆ. … Read more