ಈ ನಟಿಯನ್ನು ಸೆಳೆದಿದೆ ಚಂದನ್ ಶೆಟ್ಟಿ ಹೇರ್ ಸ್ಟೈಲ್

ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ‘ಬಿಗ್ ಬಾಸ್’ನಿಂದ ಬಂದ ಬಳಿಕ ಬಿಡುವಿಲ್ಲದಂತಾಗಿದ್ದಾರೆ. ಸಿನಿಮಾ, ಕಿರುತೆರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಮಾಸ್ಟರ್ ಡ್ಯಾನ್ಸರ್’ ಶೋಗೆ ಚಂದನ್ ಶೆಟ್ಟಿ ತೀರ್ಪುಗಾರರಾಗಿದ್ದಾರೆ. ಈ ಶೋನಲ್ಲಿ ನಟಿ ಶ್ರುತಿ ಹರಿಹರನ್, ಮಯೂರಿ ಅವರೂ ತೀರ್ಪುಗಾರರಾಗಿದ್ದಾರೆ. ಈ ಶೋಗೆ ಚಂದನ್ ಶೆಟ್ಟಿ ವಿಶೇಷ ಹೇರ್ ಸ್ಟೈಲ್ ನಲ್ಲಿ ಆಗಮಿಸಿದ್ದು, ಅವರ ಹೇರ್ ಸ್ಟೈಲ್ ಕುರಿತಾಗಿ ಭಾರೀ ಚರ್ಚೆಯೇ ನಡೆದಿದೆ. ನಿರೂಪಕ ಅಕುಲ್ ಬಾಲಾಜಿ, ಶ್ರುತಿ ಹರಿಹರನ್, ಮಯೂರಿ ಅವರು ಚಂದನ್ ಶೆಟ್ಟಿ … Read more

ತೂಗುಕತ್ತಿಯಿಂದ ಪಾರಾದ ಜೆ.ಡಿ.ಎಸ್. ಬಂಡಾಯ ಶಾಸಕರು..?

ಜೆ.ಡಿ.ಎಸ್. ಪಕ್ಷದ ಬಂಡಾಯ ಶಾಸಕರ ಅನರ್ಹತೆ ಕುರಿತಾಗಿ ಸ್ಪೀಕರ್ ಇನ್ನೂ ಕ್ರಮ ಕೈಗೊಳ್ಳದ ಕಾರಣ, ಅವರು ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡಬಹುದಾಗಿದೆ. ಸ್ಪೀಕರ್ ಆದೇಶ ನೀಡುವವರೆಗೆ ಶಾಸಕರೆಂದೇ ಅವರನ್ನು ಪರಿಗಣಿಸಲಾಗುತ್ತದೆ. ಸ್ಪೀಕರ್ ಗೆ ಮತದಾನಕ್ಕೆ ಅವಕಾಶ ನೀಡಬೇಡಿ ಎಂದು ಆದೇಶ ನೀಡಲು ಸಾಧ್ಯವಿಲ್ಲ. ಆದರೆ, ಶಾಸಕರ ಅನರ್ಹತೆ ಕುರಿತಾಗಿ ಬೇಗನೆ ತೀರ್ಪು ಪ್ರಕಟಿಸಿ ಎಂದು ಹೇಳಬಹುದಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. ಮಾರ್ಚ್ 23 ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಜೆ.ಡಿ.ಎಸ್.ನ 7 ಮಂದಿ ಬಂಡಾಯ ಶಾಸಕರ … Read more

ಲೈಂಗಿಕ ಕಿರುಕುಳದಿಂದ ಬೇಸತ್ತ ಬಾಲಕಿ ಆತ್ಮಹತ್ಯೆ ಯತ್ನ…?

ಯಾದಗಿರಿ: ಯುವಕರಿಬ್ಬರು ಲೈಂಗಿಕ ಕಿರುಕುಳ ನೀಡಿದ್ದರಿಂದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ ಆರೋಪ ಕೇಳಿ ಬಂದಿದೆ. ಯಾದಗಿರಿ ಜಿಲ್ಲೆ ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 19 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಗೆ ಯುವಕರಿಬ್ಬರು ಕಿರುಕುಳ ನೀಡುತ್ತಿದ್ದರೆನ್ನಲಾಗಿದ್ದು, ಮಾರ್ಚ್ 19 ರಂದು ಬಟ್ಟೆ ತೊಳೆಯಲು ಹೋಗಿದ್ದ ಬಾಲಕಿಯನ್ನು ಬೆನ್ನಟ್ಟಿ ಬಂದಿದ್ದಾರೆ. ಇದರಿಂದ ಭಯಗೊಂಡ ಬಾಲಕಿ ಮನೆಗೆ ವಾಪಸ್ ಆಗಿ, ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಮುಂದಿನ ಕ್ರಮ … Read more