ಗುಜರಾತ್ ಗೆ ಸೇರಿದ ಅರುಣ್ ಮತ್ತು ಶರ್ಮಿಳಾ ವಿವಾಹ 5 ವರ್ಷಗಳ ಹಿಂದೆ ನಡೆಯಿತು, ಇಬ್ಬರು ಸಂತೋಷದಿಂದ ಜೀವನ ನಡೆಸುತ್ತಿದ್ದು ಒಂದು ಮಗು ಕೂಡ ಜನಿಸಿತು. 6 ತಿಂಗಳ ಹಿಂದೆ ಅರುಣ್ ಗೆ ದುಬೈ ನಲ್ಲಿ ಕೆಲಸ ಸಿಕ್ಕಿತು.
ದುಬೈ ನಲ್ಲಿ ಕೆಲಸಕ್ಕೆ ಸೇರಿದ ಅರುಣ್, ಮಗು ಚಿಕ್ಕವನಾದ್ದರಿಂದ 1-2 ವರ್ಷ ಬಿಟ್ಟು ಹೆಂಡತಿಯನ್ನು ಕೂಡ ದುಬೈ ಗೆ ಕರೆಸಿಕೊಳ್ಳಲು ಆಲೋಚನೆ ಮಾಡಿದ್ದ. ಹೆಂಡ್ತಿ ಜೊತೆ ಪ್ರತಿದಿನ ವೀಡಿಯೋ ಕಾಲ್ ಮೂಲಕ ಮಾತಾಡುವ ಸಲುವಾಗಿ ತನ್ನಲ್ಲಿದ್ದ ಸ್ಮಾರ್ಟ್ ಫೋನ್ ನ್ನು ಹೆಂಡತಿಗೆ ಕೊಟ್ಟು ಹೋದನು ಅರುಣ್.
ಹೆಂಡತಿಗೆ ಕೊಟ್ಟ ತನ್ನ ಫೋನ್ ನಲ್ಲಿ ಗೂಗಲ್ ಡ್ರೈವ್ ಬಳಸುತ್ತಿದ್ದ ಅರುಣ್, ಹೊಸದಾಗಿ ತೆಗೆದ ಫೋಟೋಗಳು ಗೂಗಲ್ ಡ್ರೈವ್ ನಲ್ಲಿ ಪ್ಯಾಕ್ ಅಪ್ ಆಗುವ ಆಪ್ಷನ್ ಆಯ್ಕೆ ಮಾಡಿದ್ದನು, ಹಾಗಾಗಿ ಹೆಂಡ್ತಿ ಯಾವುದೇ ಫೋಟೋ ತೆಗೆದರು ಅದನ್ನು ಅರುಣ್ ತನ್ನ ಮೊಬೈಲ್ / ಲ್ಯಾಪ್ ಟಾಪ್ ನಲ್ಲಿ ನೋಡಬಹುದಿತ್ತು.
ಈ ಗೂಗಲ್ ಡ್ರೈವ್ ವಿಷಯ ಹೆಂಡತಿಗೆ ಹೇಳಿರಲಿಲ್ಲ ಅರುಣ್, ಅಂತಹ ಸಂದರ್ಭ ಕೂಡ ಬರಲಿಲ್ಲ. ಒಂದು ದಿನ ಹಾಗೆ ಸುಮ್ಮನೆ ತನ್ನ ಗೂಗಲ್ ಡ್ರೈವ್ ನ್ನು ಓಪನ್ ಮಾಡಿ ನೋಡಿದ ಅರುಣ್ ಗೆ ಸಹಿಸಲಾಗದ ಶಾಕ್.
ಕೆಲವು ಫೋಟೋಗಳಲ್ಲಿ ತನ್ನ ಹೆಂಡ್ತಿ ಒಬ್ಬ ಗಂಡಸಿನ ಜೊತೆ ತುಂಬಾ ಕ್ಲೋಸ್ ಆಗಿ ಇದ್ದಳು, ಆ ಗಂಡಸು ತನ್ನ ಹೆಂಡತಿಯನ್ನು ಅಪ್ಪಿಕೊಂಡು ಇದ್ದ ಫೋಟೋಗಳು ಇದ್ದವು. ತಕ್ಷಣ ದುಬೈನಿಂದ ಬಂಡ ಅರುಣ್, ಫೋಟೋಗಳ ಸಮೇತ ಹೆಂಡತಿಯನ್ನು ಹಿರಿಯರ ಮುಂದೆ ನಿಲ್ಲಿಸಿದನು.
ಹೆಂಡ್ತಿ ತನ್ನ ತಪ್ಪನ್ನು ಒಪ್ಪಿಕೊಂಡಳು, ಒಂಟಿಯಾಗಿದ್ದ ನನಗೆ ಆಸೆಗಳನ್ನು ತೀರಿಸಿಕೊಳ್ಳಲು ಗಂಡಸಿನ ಆಸರೆ ಬೇಕೆನಿಸಿತು, ತನ್ನ ಬಲಹೀನತೆಯನ್ನು ಆ ಹುಡುಗ ಕ್ಯಾಶ್ ಮಾಡಿಕೊಂಡ, ಆಗ ಆತನ ಬಲೆಗೆ ಬಿದ್ದೆ ಎಂದು ಹೆಂಡ್ತಿ ಹೇಳಿದಳು. ಈಗ ಅರುಣ್ ವಿಚ್ಛೇದನಕ್ಕೆ ಅಪ್ಲೈ ಮಾಡಿದ್ದಾನೆ.