ಸೌದಿ ಅರೇಬಿಯಾ ಬದಲಾಗ್ತಿದೆ. 2030 ರೊಳಗೆ ದೇಶವನ್ನು ಬದಲಿಸಲು ಪಣ ತೊಟ್ಟಿರುವ ಸರ್ಕಾರ ಮಹತ್ವದ ಹೆಜ್ಜೆಗಳನ್ನಿಡ್ತಿದೆ. ಇದೇ ನಿಟ್ಟಿನಲ್ಲಿ ಈಗ ಇನ್ನೊಂದು ಕಾನೂನು ಜಾರಿಗೆ ತಂದಿದೆ. ಪತಿ ಅಥವಾ ಪತ್ನಿ ಸಂಗಾತಿ ಫೋನಿನ ಮಾಹಿತಿಯನ್ನು ಕೆದಕಿದ್ರೆ ಕಠಿಣ ಶಿಕ್ಷೆ ಎದುರಾಗಲಿದೆ.
ಪತಿ ಅಥವಾ ಪತ್ನಿ ಸಂಗಾತಿ ಫೋನಿನ ಬೇಹುಗಾರಿಕೆ ಮಾಡಿದ್ರೆ ಅಥವಾ ಮಾಡಿಸಿದ್ರೆ ಭಾರಿ ದಂಡದ ಜೊತೆ ಜೈಲು ಸೇರಬೇಕಾಗುತ್ತದೆ. ಹೊಸ ಸೈಬರ್ ಅಪರಾಧ ಕಾಯ್ದೆ ಅಡಿ ಇಂಥ ಯಾವುದೇ ಚಟುವಟಿಕೆ ಅಪರಾಧವಾಗಲಿದೆ. ಈ ಕಾನೂನು ಮುರಿದ ವ್ಯಕ್ತಿಗೆ 1.33 ಲಕ್ಷ ಡಾಲರ್ (ಸುಮಾರು 87 ಲಕ್ಷ) ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು.
ವ್ಯಕ್ತಿಯ ಗೌಪ್ಯತೆ ರಕ್ಷಿಸುವ ಜೊತೆಗೆ ಅಂತರ್ಜಾಲ ಬಳಕೆದಾರರ ಹಕ್ಕನ್ನು ಇದು ರಕ್ಷಿಸುತ್ತದೆ ಎಂದು ಸರ್ಕಾರ ಹೇಳಿದೆ. ಕಳೆದೆರಡು ವರ್ಷಗಳಿಂದ ಸೌದಿಯಲ್ಲಿ ಸಾಕಷ್ಟು ಬದಲಾವಣೆಯಾಗ್ತಿದೆ. ಸಿನಿಮಾ ಮೇಲಿದ್ದ ಸುಮಾರು 10 ದಶಕಗಳ ನಿಷೇಧವನ್ನು ಸರ್ಕಾರ ತೆಗೆದುಹಾಕಿದೆ. ಮಹಿಳೆ-ಪುರುಷರನ್ನು ಸಮಾನವಾಗಿ ನೋಡಲು ಮುಂದಾಗಿರುವ ಸರ್ಕಾರ, ಮಹಿಳೆಯರಿಗೆ ಅನೇಕ ಹಕ್ಕುಗಳನ್ನು ನೀಡ್ತಿದೆ.