ಬೆಳಗಿನ ಉಪಾಹಾರಕ್ಕೆ ಯಾವುದು ಆರೋಗ್ಯಕರ ಉಪಾಹಾರ? ಮೊಟ್ಟೆ ಬೆಳಗ್ಗೆ ತಿನ್ನುವುದು ಅತ್ಯುತ್ತಮ ಎನ್ನಲಾಗುತ್ತದೆ. ಅದಕ್ಕೆ ಕಾರಣ ಏನು ಗೊತ್ತಾ?
ಇದರಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ದೀರ್ಘಕಾಲ ಚೈತನ್ಯ ನೀಡುತ್ತದೆ. ಹೀಗಾಗಿ ತುಂಬಾ ಸಮಯದವರೆಗೆ ನೀವು ಉಲ್ಲಾಸದಿಂದ ಇರಲು ಸಾಧ್ಯ. ಅಷ್ಟೇ ಅಲ್ಲ, ದೇಹ ತೂಕ ಕಳೆದುಕೊಳ್ಳಲು ಬಯಸುವವರೂ ಮೊಟ್ಟೆ ಸೇವಿಸುವುದು ಒಳ್ಳೆಯದು. ಮೊಟ್ಟೆಯಲ್ಲಿ ಕೊಬ್ಬಿನಂಶ ಹೆಚ್ಚಿಲ್ಲ. ನಮ್ಮ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳೂ ಇದರಲ್ಲಿವೆ. ಮೆದುಳು, ಸ್ಮರಣ ಶಕ್ತಿ ಹೆಚ್ಚಿಸಲು, ಕಣ್ಣಿನ ಆರೋಗ್ಯಕ್ಕೆ ಹೀಗೇ ಪ್ರತಿಯೊಂದಕ್ಕೂ ಮೊಟ್ಟೆ ಬೆಳಗ್ಗಿನ ಆಹಾರವಾಗಿ ಸೇವಿಸುವುದು ಒಳಿತು ಮಾಡುತ್ತದೆ.