ಮನುಷ್ಯ ಪ್ರತಿ ಕ್ಷಣ ಪ್ರಾಣದ ಜೊತೆ ಹೋರಾಡಬೇಕು, ಯಾವ ಕ್ಷಣ ಏನಾದರು ಆಗಬಹುದು, ಅದು ಬಡವ ಇರಲಿ ಶ್ರೀಮಂತ ಇರಲಿ, ಆದ್ರೆ ಈ ನಟಿ ಮಾತ್ರ ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ಉಳಿವಿಗಾಗಿ ಹೋರಾಡುತ್ತಿದ್ದಾರೆ. ಅವರು ಯಾರು ಗೊತ್ತಾ.?
ನಟಿ ಶೀಲಾ ಕೌರ್, ಅಜಯ್ ರಾವ್ ಜೊತೆ ಪ್ರೇಮ್ ಕಹಾನಿ ಚಿತ್ರದಲ್ಲಿ ನಟಿಸಿದ್ದ ಈ ನಟಿ, ಸುಮಾರು 2-3 ವರ್ಷ ದಕ್ಷಿಣ ಭಾರತದ ಟಾಪ್ ನಟಿಯಾಗಿ ಮಿಂಚಿದಳು. ಆದ್ರೆ, ಈಕೆಯ ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಅಂತೀರ..
ತೀವ್ರ ಅನಾರೋಗ್ಯಕ್ಕೆ ತುತ್ತಾದ ಶೀಲಾರನ್ನು ಪರೀಕ್ಷಿಸಿದ ಡಾಕ್ಟರ್, ಈ ನಟಿ ಲಂಗ್ ಕ್ಯಾನ್ಸರ್ ಗೆ ತುತ್ತಾಗಿದ್ದಾಳೆ ಎಂದು ಹೇಳಿದರು. ಇದನ್ನು ಕೇಳಿದ ಶೀಲಾ ಅಲ್ಲೇ ಕುಸಿದು ಬಿದ್ದರು, ಈಕೆಗಿನ್ನು ಕೇವಲ 25 ವರ್ಷ ಅಷ್ಟೇ, ಇಷ್ಟು ಚಿಕ್ಕ ವಯಸ್ಸಿಗೇ ಅಷ್ಟು ದೊಡ್ಡ ಆಘಾತ.
ತಕ್ಷಣ ಚಿತ್ರರಂಗದಿಂದ ದೂರ ಆದರು ಈ ನಟಿ, ತಾನು ಸಂಪಾದಿಸಿದ ಎಲ್ಲಾ ಹಣವನ್ನು ಟ್ರೀಟ್ ಮೆಂಟ್ ಗೆ ವ್ಯಯಿಸಿದರು, ಇದರಿಂದ ತೀವ್ರ ಆರ್ಥಿಕ ಸಮಸ್ಯೆಗೆ ಒಳಗಾಗಿರುವ ಶೀಲಾ ಕುಟುಂಬ, ಚಿಕ್ಕ ಸೂಪರ್ ಮಾರ್ಕೆಟ್ ಓಪನ್ ಮಾಡಿ ಅದರಲ್ಲಿ ಬರುವ ಹಣದಿಂದ ಕುಟುಂಬ ನಡೆಸುತ್ತಿದ್ದಾರೆ.
ನನಗೆ ದಕ್ಷಿಣ ಭಾರತದಲ್ಲಿ ದೊಡ್ಡ ಸ್ಟಾರ್ಸ್ ಪರಿಚಯ ಇದ್ದಾರೆ, ಆದ್ರೆ ಅವರ ಬಳಿ ಸಹಾಯ ಕೇಳುವ ಮನಸ್ಸು ನನಗಿಲ್ಲ. ಇದು ನನ್ನ ಸಮಸ್ಯೆ, ಈ ಸಮಸ್ಯೆಯಿಂದ ನಾನೇ ಹೊರಬರಬೇಕು ಎಂದು ಹೇಳುತ್ತಾರೆ ಶೀಲಾ. ದೇವರು ಈ ನಟಿಗೆ ಆಯಸ್ಸು ಕೊಡಲಿ ಎಂದು ಆಶಿಸೋಣ.