ಮೇಷ ರಾಶಿ : ಮಾತು ಮತ್ತು ವ್ಯವಹಾರದಲ್ಲಿ ಸಂಯಮ ಇಟ್ಟುಕೊಳ್ಳುವುದು ಅತ್ಯಂತ ಅವಶ್ಯಕ. ಸಮಯ ನೋಡಿ, ಮಧ್ಯಾಹ್ನದ ನಂತರ ಹೊಸ ಕೆಲಸ ಪ್ರಾರಂಭ ಮಾಡುವುದು. ಉದ್ಯಮ ಕ್ಷೇತ್ರದಲ್ಲಿ ಜಾಗರೂಕರಾಗಿ ವ್ಯವಹರಿಸಿ. ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.
ವೃಷಭ ರಾಶಿ : ನಿಮ್ಮ ಬದುಕಿನಲ್ಲಿ ಬೇರೊಬ್ಬ ವ್ಯಕ್ತಿಯ ಪ್ರವೇಶವಾಗಲಿದೆ. ನೀವು ಬಳಸುವ ಭಾಷೆಯ ಬಗ್ಗೆ ಗಮನವಿರಲಿ, ಇಲ್ಲದೇ ಹೋದಲ್ಲಿ ವಿವಾದಕ್ಕೆ ಕಾರಣವಾಗಬಹುದು. ಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಗಮನವಿರಲಿ.
ಮಿಥುನ ರಾಶಿ : ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಉತ್ತಮವಾಗಿರಲಿದೆ. ಕಚೇರಿ, ಹೊರಗೆ ಸಹಯೋಗಪೂರ್ಣ ವಾತಾವರಣವಿರುತ್ತದೆ. ಸ್ನೇಹಿತರ ಜೊತೆಗೆ ಸುಂದರ ಸ್ಥಳಕ್ಕೆ ಪ್ರವಾಸ ತೆರಳುವ ಸಾಧ್ಯತೆ ಇದೆ.
ಕರ್ಕ ರಾಶಿ : ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಆರೋಗ್ಯ ಸುಧಾರಿಸಲಿದೆ. ಮಾನಸಿಕವಾಗಿಯೂ ಆರೋಗ್ಯವಾಗಿರುತ್ತೀರಿ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಅಪೂರ್ಣ ಕೆಲಸ ಪೂರ್ಣವಾಗಲಿದೆ. ಪ್ರತಿಸ್ಪರ್ಧಿಗಳ ವಿರುದ್ಧ ಗೆಲುವು ನಿಮ್ಮದೇ.
ಸಿಂಹ ರಾಶಿ : ಶಾರೀರಿಕವಾಗಿ ಅಸ್ವಸ್ಥತೆಯ ಅನುಭವವಾಗಲಿದೆ. ಕುಟುಂಬದವರ ಜೊತೆ ಜಗಳವಾಗುವ ಸಾಧ್ಯತೆ ಇದೆ. ಬೌದ್ಧಿಕ ಚರ್ಚೆಗಳಿಂದ ದೂರವಿರಿ. ಹಣಕಾಸು ಸಂಬಂಧಿ ಯೋಜನೆಗಳಿಗೆ ಸಮಯ ಅನುಕೂಲಕರವಾಗಿದೆ.
ಕನ್ಯಾ ರಾಶಿ : ಬಂಧುಗಳು ಮತ್ತು ಸ್ನೇಹಿತರಿಂದ ಲಾಭವಿದೆ. ಸಂಬಂಧದಲ್ಲಿ ಪ್ರೀತಿ ಮತ್ತು ಗೌರವವೇ ಪ್ರಧಾನವಾಗಲಿದೆ. ಹತ್ತಿರದ ಸಂಬಂಧಿಗಳೊಂದಿಗೆ ವಿವಾದ ಉಂಟಾಗಬಹುದು. ತಾಯಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಜಲಾಶಯದಿಂದ ದೂರವಿರಿ.
ತುಲಾ ರಾಶಿ : ನಕಾರಾತ್ಮಕತೆಯನ್ನು ಅಳವಡಿಸಿಕೊಳ್ಳಬೇಡಿ. ಕುಟುಂಬ ಸದಸ್ಯರೊಂದಿಗೆ ತಪ್ಪು ಗ್ರಹಿಕೆ ಮೂಡದಂತೆ ಎಚ್ಚರ ವಹಿಸಿ. ಹೊಸ ಕಾರ್ಯವನ್ನು ಆರಂಭಿಸಲು ಉತ್ಸುಕರಾಗಿರುತ್ತೀರಿ. ಪ್ರತಿಸ್ಪರ್ಧಿಗಳ ವಿರುದ್ಧ ಜಯ ಸಿಗಲಿದೆ.
ವೃಶ್ಚಿಕ ರಾಶಿ : ಇಂದು ಶುಭ ಸಮಾಚಾರ ದೊರೆಯುತ್ತದೆ. ಮಧ್ಯಾಹ್ನದ ನಂತರ ಕುಟುಂಬದಲ್ಲಿ ಜಗಳದ ವಾತಾವರಣ ಸೃಷ್ಟಿಯಾಗುತ್ತದೆ. ಅನಾವಶ್ಯಕ ಖರ್ಚಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ಆರೋಗ್ಯ ಹದಗೆಡಬಹುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಅಡಚಣೆಯಾಗಲಿದೆ.
ಧನು ರಾಶಿ : ಮೋಜು ಮಸ್ತಿಗಾಗಿ ಹಣ ಖರ್ಚು ಮಾಡುತ್ತೀರಿ. ಸ್ವಭಾವದಲ್ಲಿ ವ್ಯಗ್ರತೆ ಕಾಣಿಸಿಕೊಳ್ಳಬಹುದು. ಸಂಬಂಧಿಗಳೊಂದಿಗೆ ವಿವಾದ ಏರ್ಪಡುವ ಸಾಧ್ಯತೆ ಇದೆ. ಮಧ್ಯಾಹ್ನದ ನಂತರ ಶಾರೀರಿಕ ಮತ್ತು ಮಾನಸಿಕ ಪ್ರಸನ್ನತೆಯಿಂದ ಹಿತಾನುಭವ ಉಂಟಾಗಲಿದೆ.
ಮಕರ ರಾಶಿ : ಸಾಂಸಾರಿಕ ಜೀವನದಲ್ಲಿನ ಸುಖದಿಂದಾಗಿ ಮನಸ್ಸು ಪ್ರಸನ್ನವಾಗಿರುತ್ತದೆ. ಮಾತುಕತೆ ವೇಳೆ ಗೊಂದಲ ಮೂಡದಂತೆ ಎಚ್ಚರ ವಹಿಸಿ. ಮನರಂಜನೆಗಾಗಿ ಹೆಚ್ಚು ಹಣ ಖರ್ಚಾಗಲಿದೆ. ಮಾನ ಹಾನಿಯಾಗುವ ಸಾಧ್ಯತೆ ಇದೆ.
ಕುಂಭ ರಾಶಿ : ಉದ್ಯಮ ಕ್ಷೇತ್ರದಲ್ಲಿ ಲಾಭ ದೊರೆಯಲಿದೆ. ಉದ್ಯಮ ಅಥವಾ ವ್ಯಾಪಾರದಲ್ಲಿ ಪದೋನ್ನತಿಯ ಯೋಗವಿದೆ. ಹಿರಿಯರು, ಅಧಿಕಾರಿಗಳಿಂದ ಮೆಚ್ಚುಗೆ ದೊರೆಯಲಿದೆ. ಆರೋಗ್ಯವೂ ಉತ್ತಮವಾಗಿರಲಿದೆ.
ಮೀನ ರಾಶಿ : ಹೊಸ ಕಾರ್ಯ ಆರಂಭಿಸುವಲ್ಲಿ ಯಶಸ್ವಿಯಾಗಲಿದ್ದೀರಿ. ದೂರ ಪ್ರಯಾಣ ಅಥವಾ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಶರೀರದಲ್ಲಿ ಉಲ್ಲಾಸ ಮತ್ತು ಆಯಾಸ ಎರಡೂ ಅನುಭವವಾಗಲಿದೆ. ಯಾವುದೇ ವಿಘ್ನವಿಲ್ಲದೆ ನಿಮ್ಮ ಕೆಲಸ ಪೂರ್ಣಗೊಳ್ಳುತ್ತದೆ.