ಆಯುಷ್ಮಾನ್ ಭವ ಚಿತ್ರದಲ್ಲಿನ ರಚಿತಾರಾಮ್ ಅಭಿನಯಕ್ಕೆ ಪ್ರಿಯಾಂಕ ಉಪೇಂದ್ರ ಫಿದಾ ಆಗಿದ್ದು ಟ್ವಿಟರ್ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದ್ರಿಂದ ಇವರಿಬ್ಬರ ಮಧ್ಯೆ ಇದ್ದ ಮುನಿಸು ಮರೆಯಾಯ್ತಲ್ಲ ಅಂತಾ ಅಭಿಮಾನಿಗಳು ಖುಷಿಯಾಗಿದ್ದಾರೆ!
ಆರ್ ಚಂದ್ರು ನಿರ್ದೇಶನದ ‘ಐ ಲವ್ ಯೂ’ ಸಿನಿಮಾದ ವೇಳೆ ರಚಿತಾ ರಾಮ್ ಬಗ್ಗೆ ನಟಿ ಪ್ರಿಯಾಂಕ ಉಪೇಂದ್ರ ಬೇಸರ ವ್ಯಕ್ತಪಡಿಸಿದ್ದರು. ಸಿನಿಮಾದ ಒಂದು ಗ್ಲಾಮರ್ ಹಾಡಿಗೆ ಸಂಬಂಧಪಟ್ಟ ಹಾಗೆ ರಚಿತಾ ರಾಮ್ ನೀಡಿದ್ದ ಹೇಳಿಕೆ ಪ್ರಿಯಾಂಕ ಉಪೇಂದ್ರರಿಗೆ ಸರಿ ಎನಿಸಿರಲಿಲ್ಲ. ಉಪೇಂದ್ರ ಬಗ್ಗೆ ರಚಿತಾ ರಾಮ್ ಹೇಳಿದ್ದ ಮಾತು ತಪ್ಪು ಎಂದು ಅವರು ತಿಳಿಸಿದ್ದರು. ಆ ನಂತರ ಪ್ರಿಯಾಂಕ ಉಪೇಂದ್ರ ಹಾಗೂ ರಚಿತಾ ರಾಮ್ ನಡುವೆ ಮುನಿಸು ಇದೆ ಎನ್ನುವ ಗುಸು ಗುಸು ಇತ್ತು.
ನಿನ್ನೆ ಆಯುಷ್ಮಾನ್ಭವ ಸಿನಿಮಾವನ್ನು ನಟಿ ಪ್ರಿಯಾಂಕ ಉಪೇಂದ್ರ ಜಿಟಿ ಮಾಲ್ನಲ್ಲಿ ವೀಕ್ಷಿಸಿ ರಚಿತಾ ರಾಮ್ ಹಾಗೂ ಶಿವರಾಜ್ಕುಮಾರ್ ಅಭಿನಯ ಅದ್ಭುತವಾಗಿದೆ. ಶಿವಣ್ಣನ ಎನರ್ಜಿ ನಿಜಕ್ಕೂ ಛಾರ್ಮಿಂಗ್. ಬಿಜಿಎಂ ಹಾಗೂ ಹಾಡುಗಳು ಫೆಂಟಾಸ್ಟಿಕ್ ಆಗಿದೆ ಅಂತಾ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಪಿ. ವಾಸು ನಿರ್ದೇಶನದ ಆಯುಷ್ಮಾನ್ಭವ ಚಿತ್ರದಲ್ಲಿ ರಚಿತಾ ರಾಮ್ ಮಾನಸಿಕ ಅಸ್ವಸ್ಥೆಯ ಪಾತ್ರ ಮಾಡಿದ್ರೆ, ಶಿವಣ್ಣ ರಚಿತಾಗೆ ಚಿಕಿತ್ಸೆ ಕೊಡೋ ಡಾಕ್ಟರ್ ಆಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದು, ಇದು ಅವರ ಸಂಗೀತ ನಿರ್ದೇಶನದ 100ನೇ ಚಿತ್ರವಾಗಿರುವುದು ವಿಶೇಷ. ಇದೇ ತಿಂಗಳ 15ರಂದು ಚಿತ್ರ ರಾಜ್ಯಾದ್ಯಂತ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ.