ಬಾಹುಬಲಿ – 2 ಮುಗಿದ ತಕ್ಷಣ ಪ್ರಭಾಸ್ ಮದುವೆಯಾಗುತ್ತಾರೆ ಅನ್ನೋ ಸುದ್ದಿ ಕೇಳಿ ಬಂತು. ಹಾಗೆ ಅನುಷ್ಕಾ ಮತ್ತು ಪ್ರಭಾಸ್ ಮದ್ಯೆ ಲವ್ವಿ ಡವ್ವಿ ನಡೆಯುತ್ತಿದೆ ಅನ್ನೋ ಸುದ್ದಿ ಕೂಡ ಆಗಾಗ ಸದ್ದು ಮಾಡುತ್ತದೆ. ಆದ್ರೆ ಈಗ ಹೊಸ ವಿಷಯವೊಂದು ಬಹಿರಂಗವಾಗಿದೆ.
ಪ್ರಭಾಸ್ ಗೆ ಹುಡುಗಿಯನ್ನು ಹುಡುಕುತ್ತಿರುವ ಅವರ ದೊಡ್ಡಪ್ಪ ಕೃಷ್ಣಂ ರಾಜು, ಕೆಲವೊಂದು ಹುಡುಗಿಯರನ್ನು ಆಯ್ಕೆ ಮಾಡಿದ್ದಾರಂತೆ, ಅದರಲ್ಲಿ ಮುಖ್ಯವಾಗಿ ತೆಲುಗು ನಟ ಚಿರಂಜೀವಿ ತಮ್ಮನಾದ ನಾಗಬಾಬು ಮಗಳು ನಿಹಾರಿಕಾ.
ಚಿತ್ರರಂಗದ ಹಿರಿಯರು ಕೂಡ ನಿಹಾರಿಕಾಳನ್ನು ಪ್ರಭಾಸ್ ಗೆ ಕೊಟ್ಟು ಮಾಡುವೆ ಮಾಡಿಸಿದರೆ ಚೆನ್ನಾಗಿರುತ್ತದೆ ಎಂದು ಕೃಷ್ಣಂ ರಾಜುಗೆ ಸಲಹೆ ಕೊಟ್ಟಿದ್ದಾರಂತೆ, ಅದರ ಸಲುವಾಗಿ ಕೃಷ್ಣಂ ರಾಜು ಈಗಾಗಲೇ ಚಿರಂಜೀವಿಯನ್ನು ಭೇಟಿ ಮಾಡಿ ಈ ಕುರಿತು ಮಾತನಾಡಿದ್ದಾರಂತೆ.
ಈ ಬೆಳವಣಿಗೆಯಿಂದ ತುಂಬಾ ಸಂತೋಷ ಪಟ್ಟಿರುವ ಚಿರಂಜೀವಿ, ತಮ್ಮನಾದ ನಾಗಬಾಬು ಬಳಿ ಈ ವಿಷಯವನ್ನು ಪ್ರಸ್ತಾಪಿಸಿದಾಗ, ‘ ನಿಮ್ಮ ಇಷ್ಟ ‘ ಎಂದು ಹೇಳಿದ್ದಾರಂತೆ. ಎಲ್ಲಾ ಅಂದುಕೊಂಡಂತೆ ಆದರೆ, ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಈ ವಿಷಯ ಪ್ರಕಟವಾಗಲಿದೆ.