ಸಂಭಾವನೆಯಲ್ಲಿ, ಸ್ಟಾರ್ ಗಿರಿಯಲ್ಲಿ ಯಾವ ಚಿತ್ರರಂಗಕ್ಕೂ ಕಮ್ಮಿಯಿಲ್ಲ ನಮ್ಮ ಸ್ಯಾಂಡಲ್ ವುಡ್, ನಮ್ಮ ಸ್ಟಾರ್ಸ್ ಕೂಡ ನೂರಾರು ಕೋಟಿ ವ್ಯವಹಾರವನ್ನು ನಡೆಸುತ್ತಿದ್ದಾರೆ. ಹಾಗಾದರೆ ಕನ್ನಡದ ಟಾಪ್ 7 ಶ್ರೀಮಂತ ನಟರು ಯಾರು ಗೊತ್ತಾ.?
7.ಯಶ್ –
ಟಾಪ್ ನಟರಲ್ಲಿ ಒಬ್ಬರಾದ ಯಶ್ ಕೋಟಿ ಕೋಟಿ ಸಂಭಾವನೆ ಪಡೆಯುವುದರ ಜೊತೆ ಪ್ರಾಪರ್ಟಿ ಗಳಲ್ಲಿ ಇನ್ವೆಸ್ಟ್ ಮಾಡಿದ್ದು, ಸುಮಾರು 100 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ.
6.ಉಪೇಂದ್ರ –
ಕೋಟಿ ಕೋಟಿ ಬೆಲೆಬಾಳುವ ರೆಸಾರ್ಟ್ ಮತ್ತು ಬಿಲ್ಡಿಂಗ್ ಗಳನ್ನು ಹೊಂದಿರುವ ಉಪೇಂದ್ರ ಅವರು ಸುಮಾರು 100-110 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ.
5.ಜಗ್ಗೇಶ್ –
ಈಗಲೂ ಬೇಡಿಕೆಯನ್ನು ಉಳಿಸಿಕೊಂಡಿರುವ ನವರಸ ನಾಯಕ ಜಗ್ಗೇಶ್, ಬಿಸಿನೆಸ್ ನಲ್ಲೂ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಫಿಲಂಗಳಿಗೆ ಫೈನಾನ್ಸ್ ಮಾಡುತ್ತಾರೆ. ಸುಮಾರು 100-120 ಕೋಟಿ ವ್ಯವಹಾರ ಹೊಂದಿದ್ದಾರೆ ಜಗ್ಗೇಶ್.
4.ದರ್ಶನ್ –
ಕಷ್ಟ ಪಟ್ಟು ಮೇಲೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮೈಸೂರು ಬಳಿ ಫಾರ್ಮ್ ಹೌಸ್ ಸೇರಿ, ದುಬೈ ನಲ್ಲೂ ಕೋಟಿ ಕೋಟಿ ಹಣವನ್ನು ಇನ್ವೆಸ್ಟ್ ಮಾಡಿದ್ದಾರಂತೆ, ದರ್ಶನ್ ಸುಮಾರು 150-170 ಕೋಟಿ ವ್ಯವಹಾರ ಹೊಂದಿದ್ದಾರೆ.
3. ಶಿವರಾಜ್ ಕುಮಾರ್ –
ಒಂದೂವರೆ ಎಕ್ರೆ ಯಲ್ಲಿ ಐಶಾರಾಮಿ ಮನೆಯನ್ನು ಕಟ್ಟಿಸಿರುವ ಶಿವಣ್ಣ, ಶ್ರೀಮಂತ ನಟರಲ್ಲಿ ಒಬ್ಬರು, ಕೋಟಿ, ಕೋಟಿ ಬೆಲೆಬಾಳುವ ಆಸ್ತಿಯನ್ನು ಹೊಂದಿರುವ ಇವರು ಸುಮಾರು 200 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.
2. ಸುದೀಪ್ –
ಚಿನ್ನದ ಸ್ಪೂನ್ ಬಾಯಲ್ಲಿ ಇಟ್ಕೊಂಡು ಹುಟ್ಟಿದ ನಟ ಕಿಚ್ಚ ಸುದೀಪ್, ಸಿನಿಮಾ-ಧಾರಾವಾಹಿ ನಿರ್ಮಾಣ ಸಂಸ್ಥೆ ಜೊತೆ ಹಲವಾರು ಸ್ಥಳಗಳಲ್ಲಿ ಆಸ್ತಿಯನ್ನು ಹೊಂದಿರುವ ಸುದೀಪ್, 200-250 ಕೋಟಿ ವ್ಯವಹಾರ ಹೊಂದಿದ್ದಾರೆ.
1. ಪುನೀತ್ ರಾಜ್ ಕುಮಾರ್ –
ಒಂದು ಚಿತ್ರಕ್ಕೆ 8 ಕೋಟಿ ಸಂಭಾವನೆ ಪಡೆಯುವ ಪುನೀತ್, ದೊಡ್ಡ ದೊಡ್ಡ ಮಾಲ್ ಗಳು ಮತ್ತು ಪ್ರಾಪರ್ಟಿಯಲ್ಲಿ ಇನ್ವೆಸ್ಟ್ ಮಾಡಿದ್ದಾರೆ. ಸುಮಾರು 200-300 ಕೋಟಿ ವ್ಯವಹಾರ ಮಾಡುವ ಪುನೀತ್ ಟಾಪ್ ಒನ್ ಸ್ಥಾನದಲ್ಲಿದ್ದಾರೆ.