ಐಪಿಎಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಗಬ್ಬರ್, ಶಿಖರ್ ಧವನ್ ಗೆ ಭಾರೀ ಹಿನ್ನೆಡೆಯಾಗಿದೆ. ಧವನ್ ಆಪ್ತರೊಬ್ಬರು ಧವನ್ ಬಿಟ್ಟು ದೂರ ಹೋಗಿದ್ದಾರೆ. ಧವನ್ ಸಾಕು ನಾಯಿ ಟೆರ್ರಿ ಈ ಜಗತ್ತು ಬಿಟ್ಟು ಹೋಗಿದ್ದಾಳೆ. ಈ ದುಃಖವನ್ನು ಗಬ್ಬರ್ ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ.
ನನಗೆ ನನ್ನ ಟೆರ್ರಿ ನೆನಪಾಗ್ತಿದೆ. ಅದು ನನ್ನನ್ನು ಬಿಟ್ಟು ಹೋಗಿದೆ. ಅದ್ರ ನೆನಪಿನಲ್ಲಿಯೇ ನಾನು ನನ್ನ ಮುಂದಿನ ಜೀವನ ಕಳೆಯುತ್ತೇನೆ. ಅದು ಹೋದಲ್ಲೆಲ್ಲ ಖುಷಿ ಹಂಚಿತ್ತು. ಅದ್ರ ಜಾಗವನ್ನು ಮತ್ತ್ಯಾರು ತುಂಬಲೂ ಸಾಧ್ಯವಿಲ್ಲ. ಲವ್ ಯು ಟೆರ್ರಿ ಎಂದು ಧವನ್ ಟ್ವಿಟ್ ಮಾಡಿದ್ದಾರೆ.
ಏಪ್ರಿಲ್ 9ರಂದು ಧವನ್ ರಾಜಸ್ತಾನ್ ರಾಯಲ್ಸ್ ಪರ ಮೈದಾನಕ್ಕಿಳಿಯಲಿದ್ದಾರೆ. ಐಪಿಎಲ್ ಆವೃತ್ತಿ 11 ಏಪ್ರಿಲ್ 7 ರಿಂದ ಶುರುವಾಗಲಿದೆ. ಸುಮಾರು 2 ತಿಂಗಳುಗಳ ಕಾಲ ನಡೆಯುವ ಪಂದ್ಯಾವಳಿಗಾಗಿ ಧವನ್ ಕುಟುಂಬಸ್ಥರಿಂದ ದೂರವಿರಲಿದ್ದಾರೆ.