ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ‘ಬಿಗ್ ಬಾಸ್’ನಿಂದ ಬಂದ ಬಳಿಕ ಬಿಡುವಿಲ್ಲದಂತಾಗಿದ್ದಾರೆ. ಸಿನಿಮಾ, ಕಿರುತೆರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಮಾಸ್ಟರ್ ಡ್ಯಾನ್ಸರ್’ ಶೋಗೆ ಚಂದನ್ ಶೆಟ್ಟಿ ತೀರ್ಪುಗಾರರಾಗಿದ್ದಾರೆ. ಈ ಶೋನಲ್ಲಿ ನಟಿ ಶ್ರುತಿ ಹರಿಹರನ್, ಮಯೂರಿ ಅವರೂ ತೀರ್ಪುಗಾರರಾಗಿದ್ದಾರೆ.
ಈ ಶೋಗೆ ಚಂದನ್ ಶೆಟ್ಟಿ ವಿಶೇಷ ಹೇರ್ ಸ್ಟೈಲ್ ನಲ್ಲಿ ಆಗಮಿಸಿದ್ದು, ಅವರ ಹೇರ್ ಸ್ಟೈಲ್ ಕುರಿತಾಗಿ ಭಾರೀ ಚರ್ಚೆಯೇ ನಡೆದಿದೆ. ನಿರೂಪಕ ಅಕುಲ್ ಬಾಲಾಜಿ, ಶ್ರುತಿ ಹರಿಹರನ್, ಮಯೂರಿ ಅವರು ಚಂದನ್ ಶೆಟ್ಟಿ ಹೇರ್ ಸ್ಟೈಲ್ ಕುರಿತಾಗಿ ಮಾತನಾಡಿದ್ದಾರೆ.
ಈಗಾಗಲೇ ವಿಭಿನ್ನವಾದ ಹೇರ್ ಸ್ಟೈಲ್ ಗಳ ಮೂಲಕ ಗಮನಸೆಳೆದಿರುವ ಚಂದನ್ ಶೆಟ್ಟಿ ಹೊಸ ಹೇರ್ ಸ್ಟೈಲ್ ಅಭಿಮಾನಿಗಳನ್ನು ಸೆಳೆದಿದೆ. ಶ್ರುತಿ ಹರಿಹರನ್ ಕೂಡ ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಶೆಟ್ಟಿ ಅವರೊಂದಿಗೆ ತೆಗೆಸಿಕೊಂಡ ಫೋಟೋ ಪೋಸ್ಟ್ ಮಾಡಿದ್ದಾರೆ. ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶ್ರುತಿ ಹರಿಹರನ್ ಫೋಟೋ ಪೋಸ್ಟ್ ಮಾಡಿದ್ದು, ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ