Gruhalakshmi : ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಾಜ್ಯದಾದ್ಯಂತವಿರುವ ರಾಜ್ಯದ ಎಲ್ಲಾ ಮನೆಯ ಯಜಮಾನಿಯರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ಧಿ ಬಂದಿದೆ. ಇದೇ ಅಕ್ಟೋಬರ್ 15ರಂದು ಎಲ್ಲಾ ಗೃಹಿಣಿಯರ ಬ್ಯಾಂಕ್ ಖಾತೆಗಳಿಗೆ ₹4,000/- ರೂಪಾಯಿ ಹಣ ನೀಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಕೂಡ ರಾಜ್ಯದಲ್ಲಿ ಹಣ ಬರದೇ ಇರುವ ಗೃಹಿಣಿಯರು ಸಾಕಷ್ಟಿದ್ದಾರೆ. ಈ ಗೃಹಿಣಿಯರಿಗೆ ಅಂದ್ರೆ, ಇಲ್ಲಿಯವರೆಗೂ ಮೊದಲನೇ ಕಂತಿನ ₹2,000/- ರೂಪಾಯಿ ಹಣ ಪಡೆಯದೇ ಇರುವ ಮಹಿಳೆಯರು ಒಟ್ಟಿಗೆ ₹4,000/- ರೂಪಾಯಿ ಹಾನ್ ಇದೇ ಅಕ್ಟೋಬರ್ 15ರಂದು ನೇರವಾಗಿ ತಮ್ಮ ಖಾತೆಗಳಿಗೆ ಪಡೆದುಕೊಳ್ಳಲಿದ್ದಾರೆ. ಆದರೆ ಎರಡನೇ ಕಂತು ಹಾಗು ಮೊದಲನೇ ಕಂತು ಹಣ, ಎರಡು ಸಹ ಪಡೆದುಕೊಳ್ಳಲು ಎಲ್ಲಾ ಗೃಹಿಣಿಯರು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.

ಇದನ್ನೂ ಕೂಡ ಓದಿ : RajaMarthanda : ಕೋಪ ಮರೆತು ಧ್ರುವ ಸರ್ಜಾ ಬೆಂಬಲಕ್ಕೆ ಬಂದ ಡಿಬಾಸ್ ದರ್ಶನ್.! ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ಡಿಬಾಸ್!
ಈ ಬಗ್ಗೆ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಧೀಕೃತ ಆದೇಶ ಹೊರಡಿಸಲಾಗಿದ್ದು, ರಾಜ್ಯದ ಎಲ್ಲಾ ಮಹಿಳೆಯರು ಕೂಡ ಈ ವಿಷಯ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಈಗಾಗಲೇ ರಾಜ್ಯದಲ್ಲಿ ಮೊದಲನೇ ಕಂತಿನ ಹಣ ಪಡೆದ ಗೃಹ ಲಕ್ಷ್ಮಿಯರು, ಎರಡನೇ ಕಾಂತಿಗೆ ಮತ್ತೆ ₹2,000/- ರೂಪಾಯಿ ಹಣ ಪಡೆದುಕೊಳ್ಳಲಿದ್ದಾರೆ. ಆದರೆ ಇವರಿಗೆ ಇದೇ ಅಕ್ಟೋಬರ್ 15ರ ನಂತರ ಡಿಬಿಟಿ ಮೂಲಕ ಅಂದರೆ, ನೇರ ನಗದು ವರ್ಗಾವಣೆ ಮೂಲಕ ಖಾತೆಗಳಿಗೆ ಹಣ ಜಮಾವಣೆ ಆಗುತ್ತದೆ. ನಿಮಗೂ ಕೂಡ ಮೊದಲನೇ ಕಂತಿನ ಹಣ ಇನ್ನೂ ಬರದೇ ಇದ್ದರೆ ಏನು ಮಾಡಬೇಕು ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
ಈಗಾಗಲೇ ಗೃಹಲಕ್ಷ್ಮಿಯರಿಗೆ ಮೊದಲನೇ ಕಂತಿನ ಹಣ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ, ಎರಡನೇ ಕಂತಿನ ಹಣ ಬಿಡುಗಡೆಗೆ ದಿನಾಂಕವನ್ನ ನಿಗದಿಗೊಳಿಸಲಾಗಿದ್ದು, ಇದೇ ಅಕ್ಟೋಬರ್ 15ರ ನಂತರ ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಅಂದರೆ ಮೊದಲನೇ ಕಂತಿನ ಹಣ ಪಡೆದ ಎಲ್ಲಾ ಗೃಹಲಕ್ಷ್ಮಿಯರ ಖಾತೆಗಳಿಗೆ, ಎರಡನೇ ಕಂತಿನ ₹2,000/- ರೂಪಾಯಿ ಹಣ ಜಮಾ ಆಗುತ್ತದೆ. ಆದರೆ ಇಲ್ಲಿಯವರೆಗೂ ಕೂಡ ಹಣ ಪಡೆದುಕೊಳ್ಳದೇ ಇರುವ ಎಲ್ಲಾ ಮಹಿಳೆಯರಿಗೆ, ಎರಡೂ ಕಂತಿನ ಹಣ ಜಮಾವಣೆಯಾಗುತ್ತದೆ.
ಇದನ್ನೂ ಕೂಡ ಓದಿ : Darshan Thoogudeepa : ಪತ್ನಿಯನ್ನು ಬಿಟ್ಟು ಇದ್ದಕ್ಕಿದ್ದಂತೆ ಮಗನನ್ನು ಕರೆದುಕೊಂಡು ನಟ ದರ್ಶನ್ ಹೋಗಿದ್ದೆಲ್ಲಿಗೆ.? ವಿನೀಶ್ ಗೆ ಏನಾಯ್ತು.?
ಗೃಹಲಕ್ಷ್ಮಿ ಯೋಜನೆಯ ₹2,000/- ರೂಪಾಯಿ ಹಣ ಇನ್ನೂ 6 ಲಕ್ಷಕ್ಕೂ ಅಧಿಕ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ಅಕ್ಟೋಬರ್ 15 ರಂದು ಎಲ್ಲಾ ಖಾತೆಗಳಿಗೆ ಹಣ ಸಂದಾಯವಾಗಲಿದೆ ಎಂದು ಮಾಹಿತಿ ತಿಳಿಸಿದ್ದಾರೆ. ಅಂದು ಮೊದಲ ಕಂತಿನ ಹಣ ಪಡೆದವರಿಗೆ ಮಾತ್ರವಲ್ಲದೇ, ಮೊದಲ ಕಂತು ಜಮಾ ಆಗದಿದ್ದವರಿಗೂ ಹಣ ಬಿಡಿಗಡೆ ಮಾಡುವ ಸಾಧ್ಯತೆಯಿದೆ. ಈಗಾಗಿ ಮೊದಲ ಕಂತಿನ ಹಣ ಇನ್ನೂ ಸಿಗದಿದ್ದವರು ಆತಂಕ ಪಡುವ ಅಗತ್ಯವಿಲ್ಲ. ಅಂದೇ ಎರಡೂ ತಿಂಗಳ ಹಣ ಅಂದರೆ ₹6,000/- ರೂಪಾಯಿ ನಿಮ್ಮ ಕೈ ಸೇರಲಿದೆ ಎಂದು ವರದಿಯಾಗಿದೆ.
ನಿಮಗೆ ಇನ್ನೂ ಕೂಡ ಮೊದಲ ಕಂತಿನ ಹಾಗು ಎರಡನೇ ಕಂತಿನ ಹಣ ಖಾತೆಗೆ ಜಮಾವಾಗಿಲ್ಲ ಅಂದರೆ, ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ NPCI ಲಿಂಕ್ ಮಾಡಿಸಬೇಕು. ನಮ್ಮ ದಾಖಲೆ ಎಲ್ಲಾ ಸರಿಯಾಗಿದೆ ಆದರೆ ಇನ್ನೂ ಹಣ ಬಂದಿಲ್ಲವೆನ್ನುವವರು, ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಹಾಗು ಬ್ಯಾಂಕ್ ಖಾತೆಯ ಹೆಸರು ಹಾಗು ರೇಷನ್ ಕಾರ್ಡ್ ನಲ್ಲಿರುವ ಹೆಸರು ಮೂರು ಸಹ ಒಂದೇ ರೀತಿಯಾಗಿರಬೇಕು. ರೇಷನ್ ಕಾರ್ಡ್ ನಲ್ಲಿರುವಂತೆ ಬ್ಯಾಂಕ್ ಖಾತೆಯಲ್ಲಿಯೂ ಸಹ ಅದೇ ರೀತಿಯ ಹೆಸರಿರಬೇಕು. ಹಾಗು ಆಧಾರ್ ಕಾರ್ಡ್ ಕೂಡ ಅದೇ ರೀತಿಯಾಗಿ ಇರಬೇಕು. NPCI ಲಿಂಕ್ ಆಗಿಲ್ಲ ಅಂದರೆ, ಡಿಬಿಟಿ ಲಿಂಕ್ ಆಗಿಲ್ಲ ಅಂದರೆ, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ನೇರವಾಗಿ ಬ್ಯಾಂಕ್ ಗೆ ಭೇಟಿ ನೀಡಿ ಲಿಂಕ್ ಮಾಡಿಸಿಕೊಳ್ಳಿ.
ಇದನ್ನೂ ಕೂಡ ಓದಿ : Traffic Fine : ಇನ್ನು ಮುಂದೆ ಫೈನ್ ಕಟ್ಟುವಂತಿಲ್ಲ.! ವಾಹನ ಸವಾರರಿಗೆ ಗುಡ್ ನ್ಯೂಸ್!
ಇನ್ನು ಒಂದು ಮುಖ್ಯ ವಿಷಯ ಅಂದರೆ, ಒಂದು ವೇಳೆ ನೀವು ಹೊಸದಾಗಿ ಗೃಹಲಕ್ಷ್ಮಿ ಅರ್ಜಿಯನ್ನ ಒಂದನೇ ಕಂತಿನ ಹಣ ಬಿಡುಗಡೆಯಾದ ಬಳಿಕ, ಎಲ್ಲ ಮಹಿಳೆಯರು ಹಣ ಪಡೆದುಕೊಂಡ ಬಳಿಕ ಅರ್ಜಿಯನ್ನ ಹೊಸದಾಗಿ ಸಲ್ಲಿಸಿದ್ದರೆ, ನಿಮಗೆ ಕೇವಲ ಎರಡನೇ ಕಂತಿನ ₹2,000/- ರೂಪಾಯಿ ಹಣ ಮಾತ್ರ ದೊರೆಯುತ್ತದೆ. ಈಗಾಗಲೇ ಹಣ ಪಡೆದುಕೊಂಡಿರುವ ₹2,000/- ರೂಪಾಯಿ ಹಣ ನಿಮ್ಮ ಖಾತೆಗೆ ಬರಲ್ಲ. ಕೇವಲ ಮುಂದಿನ ಕಂತುಗಳು ಮಾತ್ರ ನಿಮಗೆ ದೊರೆಯುತ್ತದೆ. ನೀವು ಕೂಡ ಮೊದಲೇ ಅರ್ಜಿ ಸಲ್ಲಿಸಿದ್ದರೆ, ಇಲ್ಲಿಯವರೆಗೂ ಯಾವ ಕಂತಿನ ಹಣ ಬಂದಿಲ್ಲವೆಂದರೆ ಮಾತ್ರ ನಿಮಗೆ ಎರದೂ ಕಂತುಗಳ ಹಣ ₹4,000/- ರೂಪಾಯಿ ಹಾನ್ ನಿಮ್ಮ ಖಾತೆಗೆ ಜಮಾ ಆಗಲಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.